newsics.com
ಮುಂಬೈ: ನಟ ಪ್ರಭಾಸ್ ಜತೆ ನಟಿ ಅನುಷ್ಕಾ ರಿಲೇಶನ್ ಶಿಪ್ ನಲ್ಲಿದ್ದಾರೆ ಎಂಬ ಸುದ್ದಿ ಸದಾ ವೈರಲ್ ಆಗುತ್ತಲೇ ಇರುತ್ತದೆ. ಇದಕ್ಕೆ ಪ್ರತಿಕ್ರಿಯಿಸಿದ ಇಬ್ಬರೂ ಒಳ್ಳೆಯ ಸ್ನೇಹಿತರು. ಆದ್ರೂ ವದಂತಿಗಳು ಬರುತ್ತಲೇ ಇವೆ. ಅನುಷ್ಕಾ ಮದುವೆಯ ಬಗ್ಗೆ ಹಲವು ವದಂತಿಗಳಿವೆ, ಆದರೆ ಅವು ಒಮ್ಮೆಯೂ ನಿಜವಾಗಲಿಲ್ಲ.ಈಗ ಕ್ರಿಕೆಟಿಗನನ್ನು ಮದುವೆಯಾಗಲಿದ್ದಾಳೆ ಎಂದು ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ.
ಇತ್ತೀಚೆಗೆ ಅನುಷ್ಕಾ ಮದುವೆಯ ಸುದ್ದಿ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಆಕೆ ಕ್ರಿಕೆಟಿಗನನ್ನು ಮದುವೆಯಾಗಲು ಸಿದ್ಧಳಾಗಿದ್ದಾಳೆ ಎಂಬ ವರದಿಗಳಿವೆ. ಈ ಮದುವೆಗೆ ಎರಡೂ ಮನೆಯವರು ಒಪ್ಪಿದ್ದಾರೆ ಎಂದು ವರದಿಯಾಗಿದೆ… ಇದು ಎಷ್ಟರಮಟ್ಟಿಗೆ ನಿಜವೋ ಗೊತ್ತಿಲ್ಲ, ಆದರೆ ಸದ್ಯ ಈ ಸುದ್ದಿ ಹರಿದಾಡುತ್ತಿದೆ. ಆದ್ರೆ ಯಾರು ಈ ಕ್ರಿಕೆಟಿಗ ಎನ್ನುವ ಕುರಿತಾಗಿ ಮಾಹಿತಿ ಇಲ್ಲ.
ನಾನು ವಿವಾಹ ಪದ್ಧತಿಯನ್ನು ನಂಬುತ್ತೇನೆ. ನಾನು ಮದುವೆಗೆ ಎಂದಿಗೂ ವಿರೋಧಿಸುವುದಿಲ್ಲ. ಸಮಯ ಬಂದಾಗ ನಾನು ಖಂಡಿತವಾಗಿಯೂ ಮದುವೆಯಾಗುತ್ತೇನೆ ಎಂದು ಅನುಷ್ಕಾ ಹೇಳಿದ್ದಾರೆ.