newsics.com
ನ್ಯೂಸಿಕ್ಸ್.ಕಾಮ್
ಶುಭೋದಯ
ಇಂದಿನ ಪಂಚಾಂಗ
ಮಾಘ ಮಾಸ ಶುಕ್ಲ ಪಕ್ಷ ಸಪ್ತಮಿ
04-02-2025, ಮಂಗಳವಾರ
* ರಥ ಸಪ್ತಮಿ
* ಜಾಗತಿಕ ಸೂರ್ಯ ನಮಸ್ಕಾರ ದಿನ
* ಮಹಾಗಣಪತಿ ರಥೋತ್ಸವ, ಇಡಗುಂಜಿ
—
ಗತಶಾಲಿ – 1946
ಗತಕಲಿ – 5125
ಸಂವತ್ಸರ – ಕ್ರೋಧಿ
ಅಯನ – ಉತ್ತರಾಯಣ
ದಿನಾಂಕ – 04/02/2025
ತಿಂಗಳು – ಫೆಬ್ರವರಿ
ಬಣ್ಣ – ಕೇಸರಿ
ವಾರ – ಮಂಗಳವಾರ
ತಿಥಿ – ಸಪ್ತಮಿ 26:30:15*
ಪಕ್ಷ – ಶುಕ್ಲ
ನಕ್ಷತ್ರ – ಅಶ್ವಿನಿ 21:48:41
ಯೋಗ – ಶುಭ 24:05:10*
ಕರಣ – ಗರಜ 15:32:11
ಕರಣ – ವಾಣಿಜ 26:30:15*
ತಿಂಗಳು (ಅಮಾವಾಸ್ಯಾಂತ್ಯ) ಮಾಘ
ತಿಂಗಳು (ಹುಣ್ಣಿಮಾಂತ್ಯ) ಮಾಘ
ಚಂದ್ರ ರಾಶಿ ಮೇಷ
ಸೂರ್ಯ ರಾಶಿ ಮಕರ
ಶಿಶಿರ ಋತು
ಸೂರ್ಯೋದಯ 06:46:27
ಸೂರ್ಯಾಸ್ತ 18:20:48
ಹಗಲಿನ ಅವಧಿ 11:34:20
ರಾತ್ರಿಯ ಅವಧಿ 12:25:26
ಚಂದ್ರೋದಯ 10:59:24
ಚಂದ್ರಾಸ್ತ 23:56:51
ರಾಹು ಕಾಲ 15:27 – 16:54 ಅಶುಭ
ಯಮಘಂಡ ಕಾಲ 09:40 – 11:07 ಅಶುಭ
ಗುಳಿಕ ಕಾಲ 12:34 – 14:00
ಅಭಿಜಿತ್ 12:10 – 12:57 ಶುಭ
ದುರ್ಮುಹೂರ್ತ. 09:05 – 09:52 ಅಶುಭ
ದುರ್ಮುಹೂರ್ತ 23:19 – 24:05* ಅಶುಭ
—-
ಇಂದಿನ ಮಾತು
ಸ್ನೇಹ ಮತ್ತು ಸಂಬಂಧ ಪ್ರಕೃತಿಯಲ್ಲಿನ ಮರ ಇದ್ದ ಹಾಗೆ. ಪ್ರಾರಂಭದಲ್ಲಿ ಉತ್ತಮ ಪೋಷಣೆ ಕೊಟ್ಟರೆ ಮುಂದೆ ಅದೇ ನಮಗೆ ಆಶ್ರಯ ನೀಡುತ್ತದೆ.
—-
ಇಂದಿನ ಸುಭಾಷಿತ
ಜಾನನ್ನಪಿ ನರೋ ದೈವಾತ್-
ಪ್ರಕರೋತಿ ವಿಗರ್ಹಿತಮ್ |
ಕರ್ಮ ಕಿಂ ಕಸ್ಯಚಿಲ್ಲೋಕೇ
ಗರ್ಹಿತಂ ರೋಚತೇ ಕಥಮ್ ||
(ಪಂಚತಂತ್ರ)
ಮನುಷ್ಯನು ತಿಳಿದೂ ತಿಳಿದೂ ಕೆಟ್ಟ ಕೆಲಸವನ್ನು ವಿಧಿಯ ವಶನಾಗಿ ಮಾಡುತ್ತಾನೆ. ಇಲ್ಲದಿದ್ದರೆ ಲೋಕದಲ್ಲಿ ಕೆಟ್ಟ ಕೆಲಸ ಯಾರಿಗೆ ತಾನೇ ಪ್ರಿಯವಾದೀತು?
—
ಇಂದಿನ ಪದಾರ್ಥ
ಅಕ್ಷಾಂತಿ = ಹೊಟ್ಟೆಕಿಚ್ಚು, Impatience, envy
ಅಕ್ಷಿ ಕೂಟಕ = The eyeball
—
ಇಂದಿನ ಓದು
ಪವಿತ್ರಾಣಾಂ ಪವಿತ್ರಂ ಯೋ ಮಂಗಲಾನಾಂ ಚ ಮಂಗಲಮ್ |
ದೈವತಂ ದೇವತಾನಾಂ ಚ ಭೂತಾನಾಂ ಯೋವ್ಯಯಃ ಪಿತಾ || 10 ||
ಪವಿತ್ರ ಎಂದರೆ ಪಾವನಗೊಳಿಸುವಂಥದ್ದು. ನಾವು ನಿರ್ಮಲವಾಗಬೇಕಾದರೆ, ಆ ಪರಮ ಪವಿತ್ರನಾದ ಭಗವಂತನಲ್ಲಿ ಶರಣಾಗಬೇಕು. ಆತ ಪಾವನಗಳಿಗೆ ಪಾವನನಾದವನು; ಒಳಿತುಗಳಿಗೆ ಒಳಿತಾದವನು; ದೇವತೆಗಳಿಗೂ ಹಿರಿ ದೈವ, ಜೀವರಿಗೆ ಅಳಿವಿರದ ಅಪ್ಪ.
***