newsics.com
ಬೀದರ್: ರಸ್ತೆಯಲ್ಲಿ ಅಡ್ಡ ಬಂದ ಮಹಿಳೆಯನ್ನು ಬಚಾವ್ ಮಾಡಲು ಯತ್ನಿಸಿದ ಕಾರೊಂದು ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಅದರಲ್ಲಿ ಒಂದು ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ 118 ಕೆಜಿ ಗಾಂಜಾ ಪತ್ತೆಯಾಗಿದ ಘಟನೆ ಬಸವಕಲ್ಯಾಣ ತಾಲೂಕಿನ ರಾಜೇಶ್ವರ ಹತ್ತಿರ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ 65ರ ರಾಜೇಶ್ವರ ಗ್ರಾಮದ ಮೇಲ್ಸೇತುವೆಯಲ್ಲಿ ರಸ್ತೆ ದಾಟುತ್ತಿದ್ದ ಮಹಿಳೆ ಉಳಿಸಲು ಯತ್ನಿಸಿದಾಗ ಕಾರಿನ ಚಾಲಕ ನಿಯಂತ್ರಣ ಕಳೆದುಕೊಂಡು ಪಕ್ಕದಲ್ಲಿರುವ ತಡೆಗೋಡೆಗೆ ಡಿಕ್ಕಿ ಹೊಡೆದಿದ್ದಾನೆ. ವೇಗದಲ್ಲಿದ್ದ ಕಾರು ಡಿಕ್ಕಿಯ ಬಳಿಕ ಎರಡ್ಮೂರು ಪಲ್ಟಿ ಹೊಡೆದಿದೆ. ಕಾರಿನ ಡಿಕ್ಕಿಯೊಳಗಿದ್ದ ಗಾಂಜಾ ಪಾಕೆಟ್ ರಸ್ತೆಗೆ ಬಿದ್ದಿದೆ.
ತಕ್ಷಣ ಒಳಗಿದ್ದ ಇಬ್ಬರನ್ನು ಬಸವಕಲ್ಯಾಣ ಗ್ರಾಮೀಣ ಪೊಲೀಸರಿಗೆ ಒಪ್ಪಿಸಿದ್ದಾರೆ.
ಆರೋಪಿಗಳನ್ನು ಮಹಾರಾಷ್ಟ್ರದ ಪಂಢರಪುರ ಮೂಲದ ಫಿರೋಜ್, ರಿಯಾಜ್ ಎಂದು ಗುರುತಿಸಲಾಗಿದೆ.
ತೆಲಂಗಾಣ ಕಡೆಯಿಂದ ಬರುತ್ತಿದ್ದ ಈ ಕಾರು ಮಹಾರಾಷ್ಟ್ರದ ಮುಂಬೈಗೆ ತೆರಳುತ್ತಿತ್ತು. ಒಡಿಶಾದಿಂದ ಇವರು ಗಾಂಜಾ ತರುತ್ತಿದ್ದರು ಎನ್ನಲಾಗಿದೆ. ಹಲವು ಕಡೆ ಚೆಕ್ಪೋಸ್ಟ್ಗಳಿದ್ದರೂ ಕ್ವಿಂಟಾಲ್ಗಟ್ಟಲೆ ಗಾಂಜಾ ಸಾಗಣೆ ಮಾಡುತ್ತಿರುವುದು ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರ ಗಡಿ ಪೊಲೀಸರ ಮೇಲೆ ಸಂದೇಹ ಮೂಡುವಂತಾಗಿದೆ.
SwaRail app | ಒಂದೇ ಆ್ಯಪ್ನಲ್ಲಿ ಹಲವು ರೈಲ್ವೆ ಸೇವೆ ನೀಡುವ ಸ್ವಾರೈಲ್ ಸೂಪರ್ ಆ್ಯಪ್ ಬಿಡುಗಡೆ
ಕಿವಿ ಚುಚ್ಚಲು ಅನಸ್ತೇಷಿಯಾ: ವೈದ್ಯರ ಎಡವಟ್ಟಿನಿಂದ ಆರು ತಿಂಗಳ ಮಗು ಸಾವು