newsics.com
ನವದೆಹಲಿ: 8ನೇ ಬಾರಿಗೆ ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ ನ್ನು ಮಂಡಿಸಿದ್ದಾರೆ.
ಸದ್ಯ ಸೋಷಿಯಲ್ ಮಿಡಿಯಾದಲ್ಲಿ ಬಜೆಟ್ ಘೋಷಣೆಗಳ ಬಗೆಯೇ ಚರ್ಚೆಗಳು ನಡೆಯುತ್ತಿವೆ. ಇವರಲ್ಲಿ ಉದ್ಯಮಿ ಹರ್ಷ ಗೊಯೆಂಕಾ ಸಹ ಒಬ್ಬರಾಗಿದ್ದು, ಸ್ವಲ್ಪ ವಿಭಿನ್ನ ಚರ್ಚಾವಸ್ತುವಿನ ಕಾರಣಕ್ಕೆ ವೈರಲ್ ಆಗ್ತಿದ್ದಾರೆ.
https://twitter.com/i/status/1885566349508010258
ಇಂದು ನಮಗೆಲ್ಲರಿಗೂ ಬಜೆಟ್ ಡೇ’ ಎಂದು ಉದ್ಯಮ ಕ್ಷೇತ್ರದ ದಿಗ್ಗಜ ಗೊಯಂಕ ಬರೆದುಕೊಂಡಿದ್ದು, ಇದರೊಂದಿಗೆ ವ್ಯಕ್ತಿಯೊಬ್ಬರು ಟಿವಿ ಮುಂದೆ ಬಜೆಟ್ ನೋಡುತ್ತಾ ಅದಕ್ಕೆ ಊದುಬತ್ತಿ ಹಚ್ಚಿರುವ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋವನ್ನು ಸೂರತ್ ನ ವ್ಯಕ್ತಿಯೊಬ್ಬರು ಪೋಸ್ಟ್ ಮಾಡಿದ್ದರು. ಈ ವಿಡಿಯೋ ಬಳಿಕ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದ್ದಂತೆ, ಗೊಯಂಕ ಈ ವಿಡಿಯೋವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
Udit Narayan: ಲೈವ್ ಶೋನಲ್ಲೇ ಮಹಿಳಾ ಫ್ಯಾನ್ಸ್‌ಗೆ ಲಿಪ್‌ಲಾಕ್ ಮಾಡಿದ ಖ್ಯಾತ ಗಾಯಕ, ವಿಡಿಯೋ ನೋಡಿ