newsics.com
ದಾವಣಗೆರೆ : ಮೆಡಿಕಲ್ ಮಹಿಳೆಯರನ್ನು ಪುಸಲಾಯಿಸಿ ಲೈಂಗಿಕ ಕಿರುಕುಳ ನೀಡಿ ವಿಡಿಯೋ ಮಾಡಿಕೊಳ್ಳುತ್ತಿದ್ದ ಕಾಮುಕನನ್ನು ಪೊಲೀಸರು ಬಂಧಿಸಿದರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ಹೌದು, ಚನ್ನಗಿರಿ ಪಟ್ಟಣದ ಮೆಡಿಕಲ್ ಸ್ಟೋರ್ ಮಾಲೀಕ ಅಮ್ಜದ್ ತನ್ನ ಕಾಮ ತೃಷೆಗೆ ಪೈಶಾಚಿಕ ಕೃತ್ಯ ಎಸಗಿರುವ ಆರೋಪ ಕೇಳಿಬಂದಿದೆ.
ಅಮ್ಜದ್ ಬಂಧಿತ ಆರೋಪಿ ಎಂದು ತಿಳಿದುಬಂದಿದೆ. ಸುಮಾರು 60ಕ್ಕೂ ಅಧಿಕ ಅಶ್ಲೀಲ ವಿಡಿಯೋಗಳನ್ನು ತನ್ನ ಲ್ಯಾಪ್ ಟಾಪ್ನಲ್ಲೂ ಹಾಕಿಕೊಂಡು ಅವುಗಳನ್ನು ವೀಕ್ಷಿಸುತ್ತಿದ್ದ ಎಂದು ತಿಳಿದುಬಂದಿದೆ.
ಮೆಡಿಕಲ್ ಸ್ಟೋರ್ಗೆ ಬರುವ ಮಹಿಳೆಯರನ್ನು ಟಾರ್ಗೆಟ್ ಮಾಡುತ್ತಿದ್ದ ಕಾಮುಕ, ಬಲವಂತದಿಂದ ಹಾಗೂ ಪುಸಲಾಯಿಸಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ. ಅಲ್ಲದೇ ಮೊಬೈಲ್ನಲ್ಲಿ ಗೊತ್ತಾಗದಂತೆ ವಿಡಿಯೋ ಕೂಡ ಮಾಡಿಕೊಳ್ಳುತ್ತಿದ್ದ. ಸುಮಾರು 60ಕ್ಕೂ ಅಧಿಕ ಅಶ್ಲೀಲ ವಿಡಿಯೋಗಳನ್ನು ತನ್ನ ಲ್ಯಾಪ್ ಟಾಪ್ನಲ್ಲೂ ಹಾಕಿಕೊಂಡು ಅವುಗಳನ್ನು ವೀಕ್ಷಿಸುತ್ತಿದ್ದ ಎಂದು ತಿಳಿದುಬಂದಿದೆ. ಈ ಸಂಬಂಧ CEN ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.