newsics.com
ಬೆಂಗಳೂರು: ಬಜೆಟ್‌ಗೂ ಮೊದಲೇ ಶಾಕ್! ಚಿನ್ನದ ಬೆಲೆ ಸತತ ಏರಿಕೆ. ಹೌದು, ಚಿನ್ನ ಮಾರುಕಟ್ಟೆ ಮಹಿಳೆಯರಿಗೆ ಶಾಕ್ ಕೊಟ್ಟಿದೆ. ಬೆಳ್ಳಿಯ ಬೆಲೆ ಸಹ ತನ್ನ ಏರಿಕೆಯ ಓಟವನ್ನು ಮುಂದುವರಿಸಿದೆ.
ಹೌದು, ಚಿನ್ನ ಖರೀದಿ ಮಾಡೋರಿಗೆ ಆಘಾತದ ಮೇಲೆ ಆಘಾತ ಆಗುತ್ತಿದೆ. ದಿನದಿಂದ ದಿನಕ್ಕೆ ಬಂಗಾರದ ಬೆಲೆಯಲ್ಲಿ ಏರಿಕೆ ಆಗುತ್ತಿದ್ದು, ಮಹಿಳೆಯರಿಗೆ ಚಿನ್ನ ಖರೀದಿ ಕನಸಾಗಿಯೇ ಉಳಿಯುತ್ತದೆ.
ಹೊಸ ವರ್ಷದ ಮೊದಲ ತಿಂಗಳಲ್ಲೇ ಚಿನ್ನದ ಬೆಲೆ ಏರಿಕೆಯಾಗಿದೆ. ಇಂದಿನ ಬೆಲೆಯು 22 ಕ್ಯಾರೆಟ್ನ 10 ಗ್ರಾಮ್ ಚಿನ್ನಕ್ಕೆ 7,610 ರೂಪಾಯಿ ಆಗಿದೆ. 24 ಕ್ಯಾರೆಟ್ನ 10 ಗ್ರಾಮ್ ಚಿನ್ನಕ್ಕೆ 8,302 ರೂಪಾಯಿ ಆಗಿದೆ. 22 ಗ್ರಾಂ ಚಿನ್ನದ ಬೆಲೆ ಕೇವಲ 30 ದಿನಗಳಲ್ಲಿ 4,600 ರೂಪಾಯಿ ಏರಿಕೆಯಾಗಿದೆ. ಇಂದಿನ ಬೆಲೆ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 7,610 ರೂಪಾಯಿ ಆಗಿದೆ.
ದೇಶೀಯ ಮಾರುಕಟ್ಟೆಯಲ್ಲಿ ಕೂಡ ಚಿನ್ನದ ದರ ಏರಿಕೆಯಾಗಿದೆ. ದೆಹಲಿಯಲ್ಲಿ 10 ಗ್ರಾಂ ಚಿನ್ನದ ದರ 910 ರೂಪಾಯಿ ಏರಿಕೆ ಆಗಿದೆ. ಆ ಮೂಲಕ 10 ಗ್ರಾಮ ಚಿನ್ನದ ಬೆಲೆ 83,750 ರೂಪಾಯಿಗೆ ತಲುಪಿ ಸಾರ್ವಕಾಲಿದ ದಾಖಲೆ ಬರೆದಿದೆ. ಇನ್ನು 1 ಕೆಜಿ ಬೆಳ್ಳಿ ದರ 1000 ರೂಪಾಯಿ ಏರಿಕೆಯಾಗಿದೆ. ಬೆಳ್ಳಿ ದರ ಕೆಜಿಗೆ 93,000 ರೂಪಾಯಿ ತಲುಪಿದೆ. ಚಿನ್ನಾಭರಣದ ವ್ಯಾಪಾರಿಗಳು ಹೆಚ್ಚಿನ ಪ್ರಮಾಣದಲ್ಲಿ ಚಿನ್ನ, ಬೆಳ್ಳಿ ಖರೀದಿ ಮಾಡ್ತಿದ್ದಾರೆ. ಚಿನ್ನ ಹಾಗೂ ಬೆಳ್ಳಿಗೆ ಬೇಡಿಕೆ ಹೆಚ್ಚಾಗಿದ್ದು, ಇದೇ ಕಾರಣದಿಂದಾಗಿ ದರ ಏರಿಕೆಯಾಗಿದೆ ಅನ್ನೋ ಮಾಹಿತಿ ಇದೆ.