Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > MUDA case ಸಿಎಂಗೆ ಬಿಗಿಯಾಯ್ತು ಮುಡಾ ಉರುಳು: ಹಣ ಅಕ್ರಮ ವರ್ಗಾವಣೆ ಯತ್ನದಲ್ಲಿ ಸಿದ್ದು ಭಾಗಿ- ಇಡಿ ಬಹಿರಂಗ
ಕರ್ನಾಟಕಪ್ರಮುಖ

MUDA case ಸಿಎಂಗೆ ಬಿಗಿಯಾಯ್ತು ಮುಡಾ ಉರುಳು: ಹಣ ಅಕ್ರಮ ವರ್ಗಾವಣೆ ಯತ್ನದಲ್ಲಿ ಸಿದ್ದು ಭಾಗಿ- ಇಡಿ ಬಹಿರಂಗ

Share
3 Min Read
SHARE

newsics.com

ಮೈಸೂರು: ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಮುಡಾದಲ್ಲಿ ಸೈಟ್‌ಗಳ ಹಂಚಿಕೆಯ ಪರಿಹಾರಾರ್ಥ ಹಣ ಅಕ್ರಮ ವರ್ಗಾವಣೆ ಯತ್ನದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಭಾಗಿಯಾಗಿದ್ದಾರೆ ಎಂದು ಜಾರಿ ನಿರ್ದೇಶನಾಲಯ(ಇಡಿ) ತನ್ನ ತಾತ್ಕಾಲಿಕ ಜಪ್ತಿ ಆದೇಶದಲ್ಲಿ ಉಲ್ಲೇಖಿಸಿದೆ.

ಹಣ ಅಕ್ರಮ ವರ್ಗಾವಣೆ ಯತ್ನದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿಯಾಗಿದ್ದಾರೆ ಎಂದು 102 ಪುಟಗಳ ಇಡಿಯ ತಾತ್ಕಾಲಿಕ ಜಪ್ತಿ ಆದೇಶದಲ್ಲಿ ಸ್ಪೋಟಕ ಮಾಹಿತಿಯನ್ನು ಬಹಿರಂಗಪಡಿಸಿದೆ.
ಮುಡಾ ಜಮೀನನನ್ನು 3,24,700 ರೂ. ಮೊತ್ತಕ್ಕೆ ಸ್ವಾಧೀನಪಡಿಸಿಕೊಂಡಿತ್ತು. ತಪ್ಪು ಮಾಹಿತಿ, ಪ್ರಭಾವ ಆಧರಿಸಿ ಕಾನೂನುಬಾಹಿರ ಡಿನೋಟಿಫಿಕೇಷನ್ ಮಾಡಲಾಗಿದೆ. ಬಿ.ಎಂ.ಮಲ್ಲಿಕಾರ್ಜುನಸ್ವಾಮಿ ಇದನ್ನು ಕೃಷಿ ಜಮೀನೆಂದು ಖರೀದಿಸಿದ್ದಾರೆ.

ಬಿಎಂ ಮಲ್ಲಿಕಾರ್ಜುನಸ್ವಾಮಿ ಕೃಷಿ ಜಮೀನು ಎಂದು ಖರೀದಿ ಮಾಡುವ ಮೊದಲೇ ಮುಡಾ ಇಲ್ಲಿ ಬಡಾವಣೆಗಳನ್ನು ಅಭಿವೃದ್ಧಿಪಡಿಸಿತ್ತು. ನಿವೇಶನ ಹಂಚಿಕೆ ಮಾಡಿತ್ತು. ಇದಕ್ಕೆ ಯಾವ ತಕರಾರನ್ನೂ ಎತ್ತಿಲ್ಲ. ತಪ್ಪು ಸ್ಥಳ ಪರಿಶೀಲನೆ ವರದಿ ಆಧರಿಸಿ ಭೂಮಿ ಪರಿವರ್ತನೆ ಮಾಡಲಾಗಿದೆ ಎಂದು ಇಡಿ ಹೇಳಿದೆ.

14 ನಿವೇಶನ ಹಂಚಿಕೆಯಾದಾಗ ಯತೀಂದ್ರ ವರುಣ ಶಾಸಕರಾಗಿದ್ದರು. ಅದೇ ಸಮಯದಲ್ಲಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಮುಡಾ ಸದಸ್ಯರಾಗಿದ್ದರು. ಅಕ್ರಮ ನಿವೇಶನ ಹಂಚಿಕೆಯಾದಾಗ ಸಿದ್ದರಾಮಯ್ಯ ವಿಪಕ್ಷ ನಾಯಕರಾಗಿದ್ದರು. ಎಸ್ ಜಿ ದಿನೇಶ್ ಕುಮಾರ್ ಸಿದ್ದರಾಮಯ್ಯ ಅವರ ಸಹಾಯಕರಾನಾಗಿದ್ದರು. ಅಲ್ಲದೇ ಸಿಟಿ ಕುಮಾರ್ ಮುಡಾ ಅಧಿಕಾರಿಗಳ ಮೇಲೆ ಪ್ರಭಾವ ಬೀರಿದ್ದರು. ಸಹಿ ನಕಲು ಮಾಡಿ ಸೈಟ್ ಹಂಚಿಕೆ ಆಗುವಂತೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ರಾಜಕೀಯ ಪ್ರಭಾವ ಬಳಸಿ ಮುಡಾ ಸೈಟ್ ಗಳನ್ನು ಪಡೆದುಕೊಳ್ಳಲಾಗಿದೆ. 56 ಕೋಟಿ ಮೌಲ್ಯದ ಸೈಟ್‌ಗಳನ್ನು ಪರಿಹಾರವಾಗಿ ಪಡೆದುಕೊಳ್ಳಲಾಗಿದೆ. ಕಾನೂನುಬಾಹಿರವಾಗಿ ಪಡೆದ ಸೈಟ್‌ಗಳನ್ನು ಪರಿಹಾರವೆಂದು ಬಿಂಬಿಸಲಾಗಿದೆ.
ಹಿಂದಿನ ಮುಡಾ ಆಯುಕ್ತ ನಟೇಶ್ ಶಾಮೀಲಾಗಿ ಈ ಪ್ರಕ್ರಿಯೆ ನಡೆಸಲಾಗಿದೆ. PMLA ಅಡಿ ತನಿಖೆ ಆರಂಭಿಸಿದ ನಂತರ 2024ರ ಅಕ್ಟೋಬರ್ 1ರಂದು ಪಾರ್ವತಿ 14 ಸೈಟ್ ಹಿಂತಿರುಗಿಸಿದ್ದಾರೆ. ಸೈಟ್ ಹಿಂತಿರುಗಿಸಿದ್ದರೂ ಅಕ್ರಮ ಹಣ ವರ್ಗಾವಣೆಯ ಯತ್ನ ಪತ್ತೆಯಾಗಿದೆ ಎಂದು ಇಡಿ ಹೇಳಿದೆ.
ಸಿದ್ದರಾಮಯ್ಯ, ಬಿ.ಎಂ.ಪಾರ್ವತಿ, ಬಿ.ಎಂ.ಮಲ್ಲಿಕಾರ್ಜುನಸ್ವಾಮಿ, ದೇವರಾಜು ಮುಡಾ ಅಧಿಕಾರಿಗಳು, ವ್ಯವಹಾರಸ್ಥರು, ಪ್ರಭಾವಿ ವ್ಯಕ್ತಿಗಳು ಶಾಮೀಲಾಗಿದ್ದಾರೆ. ಅಕ್ರಮ ಹಣ ವರ್ಗಾವಣೆ ಕೇವಲ ಪಾರ್ವತಿಯವರ ಕೇಸ್ನಲ್ಲಿ ಮಾತ್ರವಲ್ಲ. ಸುಮಾರು 1,095 ಮುಡಾ ಸೈಟ್ಗಳನ್ನು ಅಕ್ರಮವಾಗಿ ಹಂಚಿಕೆ ಮಾಡಲಾಗಿದೆ. ಈ ಬಗ್ಗೆ ಜಾರಿ ನಿರ್ದೇಶನಾಲಯದ ತಾತ್ಕಾಲಿಕ ಜಪ್ತಿ ಆದೇಶದಲ್ಲಿ ಉಲ್ಲೇಖವಾಗಿದೆ.
ಸಿದ್ದರಾಮಯ್ಯ ಸಿಎಂ ಆಗಿದ್ದು 13.5.2013 ರಂದು. ಪತ್ನಿ ಅರ್ಜಿ ಸಲ್ಲಿಸಿದ್ದು 14.6.2014 ರಂದು. ಪತ್ರದಲ್ಲಿನ ಒಂದು ಸಾಲು ಅಳಿಸಲಾಗಿದೆ. ಇದು ದಾಖಲೆ ತಿರುಚಿದ್ದಕ್ಕೆ ಸಾಕ್ಷಿಯಾಗಿದೆ ಎಂದು ಇಡಿ ಉಲ್ಲೇಖಿಸಿದೆ.

ಜಮೀನು ಖರೀದಿಸಿದ 10 ವರ್ಷಗಳ ಬಳಿಕ ಸಿದ್ದರಾಮಯ್ಯ ಸಿಎಂ ಆದಾಗ ಪಾರ್ವತಿ ಅರ್ಜಿ ಸಲ್ಲಿಸಿದ್ದು, ಭೂಸ್ವಾಧೀನ ಮಾಡಿಕೊಳ್ಳದೆ ತಮ್ಮ ಜಮೀನು ಮುಡಾ ಬಳಸಿದೆ ಎಂದು ಸಿಎಂ ಪತ್ನಿ ಅರ್ಜಿಯಲ್ಲಿ ಮಾಹಿತಿ ನೀಡಿದ್ದಾರೆ. ಆದರೆ ಆಗ ಜಮೀನು ಮುಡಾ ಸ್ವಾಧೀನದಲ್ಲೇ ಇತ್ತೇ ಹೊರತು ಇವರ ಸ್ವಾಧೀನದಲ್ಲಿರಲಿಲ್ಲ.

ಹರಾಜಿನಲ್ಲಿ ಮಾರಾಟವಾಗಬೇಕಿದ್ದ ಕಮರ್ಷಿಯಲ್ ಸೈಟ್ ಗಳನ್ನೇ ಸಿಎಂ ಪತ್ನಿಗೆ ನೀಡಲಾಗಿತ್ತು. ಪರಿಹಾರದ ಸೈಟ್ ಪಡೆಯಲು ಸಿಎಂ ಪತ್ನಿ ಸಾಮಾನ್ಯ ಪ್ರಕ್ರಿಯೆ ಅನುಸರಿಸಿರಲಿಲ್ಲ. ಸಿಎಂ ಪತ್ನಿ ನಷ್ಟ ಭರ್ತಿ ಬಾಂಡ್ ಪೇಪರ್ ಖರೀದಿಸಿದ್ದು, 2021ರ ನವೆಂಬರ್ 24 ರಂದು. ಆದರೆ ಖರೀದಿಗೆ ಮೊದಲೇ ನವೆಂಬರ್ 23 ರಂದು ಸಹಿ ಮಾಡಿರುವುದು ಅಚ್ಚರಿಗೆ ಕಾರಣವಾಗಿದೆ.

ರಾಜಕೀಯ ಒತ್ತಡದಿಂದ ಸಿಎಂ ಪತ್ನಿಗೆ ಅನುಕೂಲ ಮಾಡಿಕೊಡಲು ದಾಖಲೆಗಳನ್ನು ತಿರುಚಲಾಗಿದೆ ಎಂದು ಇಡಿ ಹೇಳಿದೆ.

ಸಿಎಂ ಪತ್ನಿಗೆ 1991 ರ ನಿಯಮಾವಳಿಯಲ್ಲಿ ಸೈಟ್ ಹಂಚಿಕೆ ಮಾಡಲಾಗಿದೆ. ಆಗ 50: 50 ನಿಯಮವಿರಲಿಲ್ಲ. ಸಿದ್ದರಾಮಯ್ಯ ಆಪ್ತ ಸಹಾಯಕ ಸಿಟಿ ಕುಮಾರ್ ಅಲಿಯಾಸ್ ಎಸ್.ಜಿ.ದಿನೇಶ್ ಕುಮಾರ್ ಪ್ರಭಾವ ಬಳಕೆ ಮಾಡಲಾಗಿದೆ. ಸಿಎಂ ಪತ್ನಿ ಪರವಾಗಿ ಸಿ.ಟಿ.ಕುಮಾರ್ ಮುಡಾ ಕಚೇರಿಗೆ ಬಂದು ಪರಿಹಾರದ ಸೈಟ್ ಗಳ ಬಗ್ಗೆ ಚರ್ಚಿಸಿದ್ದರು.

ಮುಡಾ ಆಯುಕ್ತರ ಪಿಎ ಜತೆ ಸಿ.ಟಿ.ಕುಮಾರ್ ನಿರಂತರ ಸಂಪರ್ಕದಲ್ಲಿದ್ದರು. ಮುಡಾ ಆಯುಕ್ತರು ನಗರಾಭಿವೃದ್ದಿ ಇಲಾಖೆಗೆ ನೀಡಬೇಕಿದ್ದ ಕರಡು ಪತ್ರ ಸಿ.ಟಿ.ಕುಮಾರ್ ಬಳಿ ಪತ್ತೆಯಾಗಿತ್ತು. ಸಿ.ಟಿ.ಕುಮಾರ್ ವಾಟ್ಸ್ ಆಪ್ ಮೆಸೇಜ್ ನಲ್ಲಿ ಪತ್ರ ಪತ್ತೆಯಾಗಿರುವುದು ಈತ ಪ್ರಭಾವಿ ಎಂಬುದಕ್ಕೆ ಸಾಕ್ಷಿ ಎಂದು ಇಡಿ ಆದೇಶದಲ್ಲಿ ಸ್ಫೋಟಕ ಮಾಹಿತಿ ಉಲ್ಲೇಖಿಸಲಾಗಿದೆ.

Satyanarayana Todtillaya ದೇಶದ ಅತಿ ಶ್ರೀಮಂತ ದೇವಸ್ಥಾನದ ಪ್ರಧಾನ ಅರ್ಚಕರಾಗಿ ಕನ್ನಡಿಗ ಸತ್ಯನಾರಾಯಣ ತೋಡ್ತಿಲ್ಲಾಯ ನೇಮಕ

TAGGED:CM Siddaramaiah involve in an attempt to illegal transfer money: ED revealed
Share This Article
Facebook Twitter Copy Link Print
Previous Article micro finance ಮೈಕ್ರೋ ಫೈನಾನ್ಸ್ ಹಾವಳಿಗೆ ಕಡಿವಾಣ: ಸುಗ್ರೀವಾಜ್ಞೆ ಜಾರಿಗೆ ಸಚಿವ ಸಂಪುಟ ಸಭೆ ಅನುಮೋದನೆ
Next Article Maha Kumbhmela ಕುಂಭಮೇಳದಲ್ಲಿ ಅಗ್ನಿ ಅವಘಡ: 15 ಡೇರೆಗಳು ಭಸ್ಮ

Popular Posts

Toll Price Hike ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಸವಾರರಿಗೆ ಶಾಕ್; ವರ್ಷದಲ್ಲೇ 2ನೇ ಬಾರಿ ಸದ್ದಿಲ್ಲದೇ ಟೋಲ್ ದರ ಹೆಚ್ಚಿಸಿದ ಹೆದ್ದಾರಿ ಪ್ರಾಧಿಕಾರ

1 Min Read

Scholl van tragedy ಶಾಲಾ ವಾಹನದ ಮೇಲೆ ಮರ ಬಿದ್ದು ಬಾಲಕಿ ಸಾವು, ಮಗು ಸ್ಥಿತಿ‌ ಗಂಭೀರ

1 Min Read

Footpath Driving Fine ಫುಟ್‌ಪಾತ್‌ನಲ್ಲಿ ಗಾಡಿ ಓಡಿಸಿದರೆ ಬೀಳಲಿದೆ ₹5,000 ದಂಡ! ಸಾರಿಗೆ ಸಚಿವರಿಗೆ ಸಚಿವ ಕೃಷ್ಣ ಬೈರೇಗೌಡ ಪತ್ರ

1 Min Read

Soujanya Case ಸೌಜನ್ಯ ಹತ್ಯೆ ಪ್ರಕರಣ; ಸಿಬಿಐ ತನಿಖೆಗೆ ಸುಪ್ರೀಂ ಅಸಮಾಧಾನ, ಮರುತನಿಖೆಯ ಆದೇಶ ಕಾಯ್ದಿರಿಸಿದ ಪೀಠ

1 Min Read

You Might Also Like

ಪ್ರಮುಖದೇಶ

Smriti Mandhana ಎಲ್‌ಎಸ್‌ಜಿ ಜರ್ಸಿಯಲ್ಲಿ ಆರ್‌ಸಿಬಿ ನಾಯಕಿ? ಸ್ಮೃತಿ ಮಂದಾನಾ ಹೊಸ ಫೋಟೋ ವೈರಲ್‌

1 Min Read
ಪ್ರಮುಖಲೈಫ್‌ಸ್ಟೈಲ್

Credit Card Limit ನಿಮಗೆ ಗೊತ್ತಾಗದಂತೆ ಕ್ರೆಡಿಟ್‌ ಕಾರ್ಡ್‌ ಲಿಮಿಟ್‌ ಕಟ್‌ ಆಯ್ತಾ? ಬ್ಯಾಂಕುಗಳ ಈ ನಿರ್ಧಾರಕ್ಕೆ ಅಸಲಿ ಕಾರಣ ಇಲ್ಲಿದೆ

2 Min Read
ಪ್ರಮುಖದೇಶಮನರಂಜನೆ

Spider-Man: Brand New Day ಅಡ್ವಾನ್ಸ್ ಬುಕ್ಕಿಂಗ್‌ನಲ್ಲಿ ಹೊಸ ದಾಖಲೆ ಬರೆದ ‘ಸ್ಪೈಡರ್‌ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’

1 Min Read
ಪ್ರಮುಖಮನರಂಜನೆವಿದೇಶ

Kaylee Hottle no more ಗಾಡ್ಜಿಲ್ಲಾ ಚಿತ್ರದ 18 ವರ್ಷದ ನಟಿ ಕಾರು ಅಪಘಾತದಲ್ಲಿ ಸಾವು

1 Min Read

Social Networks

Facebook-f Instagram Twitter
Welcome Back!

Sign in to your account

Lost your password?