newsics.com
ನ್ಯೂಸಿಕ್ಸ್.ಕಾಮ್
ಶುಭೋದಯ
ಇಂದಿನ ಪಂಚಾಂಗ
ಮಾಘ ಮಾಸ ಶುಕ್ಲ ಪಕ್ಷ ಪ್ರತಿಪದೆ/ ಪಾಡ್ಯ
30-01-2025, ಗುರುವಾರ
* ಪಂಚಕ ಪ್ರಾರಂಭ, ಚಂದ್ರ ದರ್ಶನ
* ರೆಂಜಾಳ ಶ್ರೀ ಸದಾಶಿವ ದೇವಳ ಜಾತ್ರೆ
* ಪರಮಪೂಜ್ಯ ಕಲಾವತಿ ಆಯಿ ಪುಣ್ಯತಿಥಿ, ಬೆಳಗಾವಿ
* ಮಹಾತ್ಮಾ ಗಾಂಧೀಜಿ ಪುಣ್ಯಸ್ಮರಣೆ
—
ಗತಶಾಲಿ – 1946
ಗತಕಲಿ – 5126
ಸಂವತ್ಸರ – ಕ್ರೋಧಿ
ಅಯನ – ಉತ್ತರಾಯಣ
ದಿನಾಂಕ – 30/01/2025
ತಿಂಗಳು – ಜನವರಿ
ಬಣ್ಣ – ಹಳದಿ
ವಾರ – ಗುರುವಾರ
ತಿಥಿ – ಪ್ರಥಮ 16:10:01
ಪಕ್ಷ – ಶುಕ್ಲ
ನಕ್ಷತ್ರ – ಶ್ರಾವಣ 07:14:20
ನಕ್ಷತ್ರ – ಧನಿಷ್ಠ 29:49:45*
ಯೋಗ – ವ್ಯತಾಪತಾ 18:32:09
ಕರಣ – ಭವ 16:10:01
ಕರಣ – ಬಾಳವ 27:05:52*
ತಿಂಗಳು (ಅಮಾವಾಸ್ಯಾಂತ್ಯ) ಮಾಘ
ತಿಂಗಳು (ಹುಣ್ಣಿಮಾಂತ್ಯ) ಮಾಘ
ಚಂದ್ರ ರಾಶಿ ಮಕರ till 18:33:59
ಚಂದ್ರ ರಾಶಿ ಕುಂಭ from 18:33:59
ಸೂರ್ಯ ರಾಶಿ ಮಕರ
ಋತು ಶಿಶಿರ
ಸೂರ್ಯೋದಯ 06:47:15
ಸೂರ್ಯಾಸ್ತ 18:18:46
ಹಗಲಿನ ಅವಧಿ 11:31:30
ರಾತ್ರಿಯ ಅವಧಿ 12:28:21
ಚಂದ್ರೋದಯ 07:23:54
ಚಂದ್ರಾಸ್ತ 19:15:53
ರಾಹು ಕಾಲ 13:59 – 15:26 ಅಶುಭ
ಯಮಘಂಡ ಕಾಲ 06:47 – 08:14 ಅಶುಭ
ಗುಳಿಕ ಕಾಲ 09:40 – 11:07
ಅಭಿಜಿತ್ 12:10 – 12:56 ಶುಭ
ದುರ್ಮುಹೂರ್ತ 10:38 – 11:24 ಅಶುಭ
ದುರ್ಮುಹೂರ್ತ 15:14 – 16:00 ಅಶುಭ
—
ಇಂದಿನ ಮಾತು
ನಾಲಿಗೆ ಬಾಯಿಯ ಒಳಗೆ ಇದ್ದರೇನೇ ಚೆಂದ, ರುಚಿ ಆದರೂ ಸರಿ, ಮಾತಿಗಾದರೂ ಸರಿ.
—
ಇಂದಿನ ಸುಭಾಷಿತ
ವರಯೇತ್ ಕುಲಜಾಂ ಪ್ರಾಜ್ಞೋ
ವಿರೂಪಾಮಪಿ ಕನ್ಯಕಾಮ್ |
ರೂಪವತೀಂ ನ ನೀಚಸ್ಯ
ವಿವಾಹಃ ಸದೃಶೇ ಕುಲೇ ||
(ಚಾಣಕ್ಯನೀತಿ)
ಬುದ್ಧಿವಂತರಾದವರು ರೂಪವತಿಯಲ್ಲದಿದ್ದರೂ ಸತ್ಕುಲದಲ್ಲಿ ಜನಿಸಿದ ಕನ್ಯೆಯನ್ನೇ ವಿವಾಹ ಮಾಡಿಕೊಳ್ಳಬೇಕು. ಪರಮಸುಂದರಿಯಾಗಿದ್ದರೂ ಸಹ ನೀಚಕುಲದ ಕನ್ಯೆಯನ್ನು ವಿವಾಹ ಮಾಡಿಕೊಳ್ಳಬಾರದು. ಯಾರೇ ಆಗಲಿ ವಿವಾಹವನ್ನು ಸಮಾನಕುಲದಲ್ಲಿಯೇ ಮಾಡಿಕೊಳ್ಳುವುದು ಶ್ರೇಯಸ್ಕರವಾಗಿರುತ್ತದೆ.
—
ಇಂದಿನ ಪದಕೋಶ
ಅಂಶ = A part, a portion
ಅಂಶಚಕ್ರ= An astrological daigram used by astrologers
—
ಇಂದಿನ ಓದು
ನಾವು ಪ್ರತಿನಿತ್ಯ ವಿಷ್ಣುಸಹಸ್ರನಾಮ ಓದಲಾಗದಿದ್ದರೂ ವಿಷ್ಣುವಿನ ಸಹಸ್ರನಾಮಗಳಲ್ಲಿ ಒಂದು ಹೆಸರಿನ ಅರ್ಥವನ್ನು ಓದಿದರೂ ತಿಳಿದೋ ತಿಳಿಯದೆಯೋ ಈ ಜನ್ಮ ಹಾಗೂ ನಮ್ಮ ಹಿಂದಿನ ಜನ್ಮದಲ್ಲಿ ಮಾಡಿದ ಪಾಪಗಳು ಶಮನವಾಗುತ್ತವೆ.
—***—-
ಭೀಷ್ಮಾಚಾರ್ಯರು ಧರ್ಮರಾಯನಿಗೆ ಧರ್ಮೋಪದೇಶ ಮಾಡಿದ ಮಹಾಭಾರತದ ಅನುಶಾಸನ ಪರ್ವದ ಕೊನೆಯ ಅಪೂರ್ವ ಉಪದೇಶ ಈ ವಿಷ್ಣು ಸಹಸ್ರನಾಮ. ವ್ಯಾಸ ಮಹರ್ಷಿಗಳು ಈ ಸಾವಿರ ನಾಮವನ್ನು ಸ್ತೋತ್ರ ರೂಪದಲ್ಲಿ ನಮಗೆ ಕಾಣಿಕೆಯಾಗಿ ನೀಡಿದ್ದಾರೆ.
ವಿಷ್ಣು ಸಹಸ್ರನಾಮದಲ್ಲಿ ಬರುವ ಸಾವಿರ ನಾಮಗಳು ಭಗವಂತನ ಗುಣವಾಚಕ ನಾಮಗಳಾಗಿವೆ. ನಮಗೆ ಇರುವ ಹೆಸರು ಗುಣವಾಚಕವಲ್ಲ ಅದು ಕರೆದಾಗ ಓಗೊಡಲು ಇಟ್ಟ ಹೆಸರು. ಆದರೆ ಭಗವಂತನ ಪ್ರತಿ ನಾಮ ಆತನ ಗುಣವನ್ನು ವರ್ಣಿಸುತ್ತದೆ. ನಮ್ಮಲ್ಲಿ ಅನೇಕ ಸಹಸ್ರನಾಮಗಳಿವೆ. ಬಹಳ ಪ್ರಸಿದ್ಧವಾದ ಲಲಿತಾ ಸಹಸ್ರನಾಮ, ಶಿವ ಸಹಸ್ರನಾಮ, ಗಣೇಶ ಸಹಸ್ರನಾಮ, ನರಸಿಂಹ ಸಹಸ್ರನಾಮ ಇತ್ಯಾದಿ. ಈ ಎಲ್ಲಾ ಸಹಸ್ರನಾಮಗಳಿಗಿಂತ ಹೆಚ್ಚು ವ್ಯಾಖ್ಯಾನವಿರುವ, ಹೆಚ್ಚು ವಿದ್ವಾಂಸರು ಭಾಷ್ಯ ಬರೆದಿರುವ, ಮಹಾಭಾರತದ ಭಾಗವಾಗಿರುವ ವಿಷ್ಣು ಸಹಸ್ರನಾಮ.
ವೈಶಂಪಾಯನ ಉವಾಚ
ಶ್ರುತ್ವಾ ಧರ್ಮಾನಶೇಷೇಣ ಪಾವನಾನಿ ಚ ಸರ್ವಶಃ |
ಯುಧಿಷ್ಠಿರಃ ಶಾಂತನವಂ ಪುನರೇವಾಭ್ಯಭ್ಯಾಷತ || 1 ||
ವೈಶಂಪಾಯನ ನುಡಿದನು:
ಪಾಪಗಳನ್ನು ಕಳೆದು ಪರಿಶುದ್ಧವಾಗುವ ಎಲ್ಲ ಧರ್ಮಗಳ ಬಗ್ಗೆ ಸಮಗ್ರವಾಗಿ ಭೀಷ್ಮಾಚಾರ್ಯರಿಂದ ಕೇಳಿ ತಿಳಿದ ನಂತರ, ಯುಧಿಷ್ಠಿರ ಭೀಷ್ಮಾಚಾರ್ಯರಲ್ಲಿ ಈ ರೀತಿ ಪ್ರಶ್ನೆ ಮಾಡುತ್ತಾನೆ.
(ನಾಳೆಗೆ ಮುಂದುವರಿಯುವುದು…)
—