newsics.com
ಕೇರಳ: ಜನರ ನಿದ್ದೆಗೆಡಿಸಿ ನರಭಕ್ಷಕ ಅನ್ನೋ ಬಿರುದು ಪಡೆದಿದ್ದ ಹುಲಿರಾಯ ಕೊನೆಗೂ ಜೀವ ಬಿಟ್ಟಿದೆ. ಈ ಹುಲಿಯ ಮರಣೋತ್ತರ ಪರೀಕ್ಷೆ ವೇಳೆ ಹುಲಿಯ ಹೊಟ್ಟೆಯಲ್ಲಿ ಸಿಕ್ಕ ವಸ್ತುಗಳು ಅರಣ್ಯ ಸಿಬ್ಬಂದಿಯೇ ದಂಗಾಗುವಂತೆ ಮಾಡಿದೆ.
ವಯನಾಡ್‌ನ ಪಂಚಾರಕೊಲ್ಲಿಯಲ್ಲಿ ನರಭಕ್ಷಕನ ಹೆಜ್ಜೆ ಗುರುತು, ಹಾವಳಿ ಬೆಚ್ಚಿ ಬೀಳುವಂತೆ ಮಾಡಿತ್ತು. ಮಹಿಳೆಯನ್ನು ಕೊಂದಿದ್ದ ಹುಲಿಯನ್ನ ಕಂಡಲ್ಲಿ ಕೊಲ್ಲಲು ಜನರು ಒತ್ತಾಯ ಮಾಡಿದ್ದರು. ಆದರೆ ಅದೇ ನರಭಕ್ಷಕ ಹುಲಿ ಈಗ ಅರಣ್ಯ ಪ್ರದೇಶದಲ್ಲಿ ಶವವಾಗಿ ಪತ್ತೆಯಾಗಿದೆ.
ನರಭಕ್ಷಕ ಹುಲಿ ಕೇರಳದ ಪಿಲಕಾವುವಿನ ಅರಣ್ಯ ಪ್ರದೇಶದಲ್ಲಿ ಶವವಾಗಿ ಪತ್ತೆಯಾಗಿದೆ. ನಾಲ್ಕರಿಂದ 5 ವರ್ಷ ವಯಸ್ಸಿನ ಹೆಣ್ಣು ಹುಲಿ ಇದಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಮರಣೋತ್ತರ ಪರೀಕ್ಷೆ ಮಾಡಿದ್ದಾರೆ. ಹುಲಿ ಹೊಟ್ಟೆಯಲ್ಲಿ ಪಂಚಾರಕೊಲ್ಲಿಯಲ್ಲಿ ಮೃತಪಟ್ಟಿದ್ದ ರಾಧಾಳ ಕಿವಿಯೋಲೆ, ಕೂದಲು, ಬಟ್ಟೆ ಪತ್ತೆಯಾಗಿದೆ. ಈ ಹುಲಿ ಮತ್ತೊಂದು ಹುಲಿಯ ದಾಳಿಯಿಂದ ಮೃತಪಟ್ಟಿದೆ ಅನ್ನೋ ಮಾಹಿತಿ ಲಭ್ಯವಾಗಿದೆ.