newsics.com
ಬೀದರ್ : ಜಮೀನಲ್ಲಿ ಬಂದ ಮಂಗ ಓಡಿಸಲು ಹೋದ ವೇಳೆ ಹೆಜ್ಜೆನು ದಾಳಿಗೆ ವ್ಯಕ್ತಿಯೊಬ್ಬ ಮೃತ ಪಟ್ಟಿದ್ದಾನೆ. ಈ ಘಟನೆ ಹುಲಸೂರ ತಾಲೂಕಿನ ಗಡಿಗೌಂಡಗಾಂವ ಗ್ರಾಮದಲ್ಲಿ ನಡೆದಿದೆ.
ಯುವರಾಜ ನಾಗಶೆಟ್ಟಿ ಬಿರಾದಾರ (42) ಹೆಜ್ಜೆನು ದಾಳಿಗೆ ಒಳಗಾಗಿ ಮೃತಪಟ್ಟ ವ್ಯಕ್ತಿ.
ತನ್ನ ಜಮೀನಿಗೆ ಬಂದಿದ್ದ ಮಂಗಗಳನ್ನು ಓಡಿಸಲೆಂದು ಮಾವಿನ ಮರ ಹತ್ತಿದ್ದಾನೆ. ಮರ ಹತ್ತಿದ ವೇಳೆ ಏಕಾಏಕಿಯಾಗಿ ಈತನ ಮೇಲೆ ಹೆಜ್ಜೆನು ನೋಣಗಳು ದಾಳಿ ನಡೆಸಿವೆ. ಇದರಿಂದಾಗಿ ಮರದ ಮೇಲಿಂದ ಈತ ನೇರವಾಗಿ ಮರದ ಕೆಳಗೆ ಮೊದಲೆ ಹಚ್ಚಲಾಗಿದ್ದ ಬೆಂಕಿಯಲ್ಲಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ.
ಈತನನ್ನು ಚಿಕಿತ್ಸೆಗೆಂದು ತಕ್ಷಣ ಬಸವಕಲ್ಯಾಣ ನಗರದ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಆಸ್ಪತ್ರೆಗೆ ಬರುವ ಮುನ್ನ ಈತ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾನೆ.