newsics.com
ಕುಂದಾಪುರ(ಉಡುಪಿ): ದುರ್ಗಾಂಬಾ ಮೋಟಾರ್ಸ್ ಸಂಸ್ಥೆಗೆ ಸೇರಿದ್ದ ಖಾಸಗಿ ಬಸ್ ಒಂದು ಡ್ರೈವರ್ ಇಲ್ಲದೆ ಚಲಿಸಿ ರಸ್ತೆ ಹಾಗೂ ಡಿವೈಡರ್ ದಾಟಿ ಹೊಟೇಲ್ ಒಂದರ ಮುಂದೆ ನಿಲ್ಲಿಸಿದ ಕಾರಿಗೆ ಡಿಕ್ಕಿ ಹೊಡೆದ ಘಟನೆ ಕುಂದಾಪುರ ಹೊರವಲಯದ ಹಂಗಳೂರು ಎಂಬಲ್ಲಿ ನಡೆದಿದೆ.
ಬಸ್ ಶುಚಿಗೊಳಿಸಿ ಸಿಬ್ಬಂದಿಗಳು ಬಸ್ಸಿನಿಂದ ಇಳಿದಿದ್ದರು. ಬಳಿಕ ಡಿಪೋದಿಂದ ಬಸ್ಸು ಮುಂದಕ್ಕೆ ಚಲಿಸಿ ಸರ್ವೀಸ್ ರಸ್ತೆಯಿಂದ ಎರಡು ಹೆದ್ದಾರಿ ದಾಟಿ ಮತ್ತೊಂದು ಸರ್ವೀಸ್ ರಸ್ತೆಗೆ ಅಡ್ಡಲಾಗಿದ್ದ ಬ್ಯಾರಿಕೇಡ್ ಮುರಿದು ಸಾಗಿ ಹೋಟೆಲೊಂದರ ಎದುರು ನಿಂತಿದ್ದ ಕಾರಿಗೆ ಢಿಕ್ಕಿಯಾಗಿದೆ
ಹೆದ್ದಾರಿ ಹಾಗೂ ಸರ್ವೀಸ್ ರಸ್ತೆಯಲ್ಲಿ ವಾಹನಗಳು ಕಮ್ಮಿಯಿದ್ದರಿಂದ ಹಾಗೂ ಪಾದಾಚಾರಿಗಳು ಓಡಾಟವಿಲ್ಲದ ಕಾರಣ ಅದೃಷ್ಟವಶಾತ್ ಭಾರೀ ಅವಘಡ ತಪ್ಪಿದೆ ಎನ್ನಲಾಗಿದೆ. ಘಟನೆ ದೃಶ್ಯಾವಳಿ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಕುಂದಾಪುರ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.
Crime News: ಅತ್ಯಾಚಾರವೆಸಗಿ ಮದುವೆಯಾಗಿ ಬಾಣಲೆ, ಸಿಗರೇಟ್ನಿಂದ ಸುಟ್ಟು ಚಿತ್ರಹಿಂಸೆ..ಪತಿ ವಿರುದ್ಧ ಮಹಿಳೆ ದೂರು