newsics.com
ನಾವು ನಡೆದಾಡುವ ರೀತಿ, ಕುಳಿತುಕೊಳ್ಳುವ ರೀತಿ, ಮಲಗುವ ರೀತಿ, ತುಟಿ, ಮೂಗು, ಕಣ್ಣು, ಹಣೆ, ಕಿವಿ ಹಾಗೂ ಗಲ್ಲದ ಆಕಾರದಿಂದಲೂ ವ್ಯಕ್ತಿತ್ವ ಸ್ವಭಾವ ತಿಳಿಯಬಹುದು ಎಂಬುದು ತಜ್ಞರ ಅಭಿಪ್ರಾಯ.
ಗಲ್ಲವು ವೃತ್ತಾಕಾರ, ಚೌಕಾಕಾರ, ಉಬ್ಬಿರುವ ಆಕಾರ ಸೇರಿದಂತೆ ವಿವಿಧ ಆಕಾರವನ್ನು ಹೊಂದಿರುತ್ತದೆ. ಇದರ ಆಧಾರದ ಮೇಲೆ ನಿಮ್ಮ ರಹಸ್ಯಮಯ ವ್ಯಕ್ತಿತ್ವ ತಿಳಿಯಬಹುದು.
ಖಾಸಗಿತನವೇ ಇಷ್ಟ:
ಗಲ್ಲದ ಆಕಾರವು ಚಿತ್ರ ಒಂದನ್ನು ಹೋಲುತ್ತಿದ್ದರೆ, ಚೌಕಾಕಾರವನ್ನು ಹೊಂದಿರುವ ವ್ಯಕ್ತಿಗಳು ಎಲ್ಲರ ಗಮನ ಸೆಳೆಯಲು ಇಷ್ಟಪಡುವುದಿಲ್ಲ. ಅವರು ಖಾಸಗಿತನ ಇಷ್ಟಪಡುತ್ತಾರೆ. ಹೀಗಾಗಿ ಅವರು ಶಾಂತಿಗೆ ಹೆಚ್ಚು ಒತ್ತು ನೀಡುತ್ತಾರೆ. ಅನಗತ್ಯವಾಗಿ ನಾಟಕವಾಡುವುದಿಲ್ಲ. ತಮ್ಮದೇ ತತ್ವ ಸಿದ್ಧಾಂತಗಳನ್ನು ಹೊಂದಿದ್ದು, ಅದನ್ನೇ ಹೆಚ್ಚು ಪಾಲಿಸುತ್ತಾರೆ. ತಮ್ಮ ಅಭಿಪ್ರಾಯದಿಂದ ಯಾರನ್ನು ಕೂಡ ಓಲೈಸಿಕೊಳ್ಳುವುದಿಲ್ಲ. ಈ ವ್ಯಕ್ತಿಗಳು ತಮ್ಮ ಮನಸ್ಸಿನಿಂದ ಮಾತನಾಡುತ್ತಾರೆ. ಏಕಾಂಗಿಯಾಗಿದ್ದರೂ ಪ್ರಾಮಾಣಿಕತೆ ಮತ್ತು ಶಿಸ್ತಿನಿಂದಲೇ ಇತರರಿಂದ ಗೌರವಕ್ಕೆ ಪಾತ್ರರಾಗುತ್ತಾರೆ.
ಹೆಚ್ಚು ಬುದ್ಧಿವಂತರು:
ಗಲ್ಲದ ಆಕಾರವು ಚಿತ್ರ ಎರಡನ್ನು ಹೋಲುತ್ತಿದ್ದು, ವೃತ್ತಾಕಾರದಲ್ಲಿದ್ದರೆ ಈ ವ್ಯಕ್ತಿಗಳು ಸರಾಸರಿಗಿಂತ ಹೆಚ್ಚಿನ ಬುದ್ಧಿವಂತರು ಮತ್ತು ಅಚಲ ನಿರ್ಣಯ ಹೊಂದಿರುವುದನ್ನು ಸೂಚಿಸುತ್ತದೆ. ತೀವ್ರವಾಗಿ ಸ್ವತಂತ್ರವಾದ ಜೀವನವನ್ನು ಇಷ್ಟಪಡುತ್ತಾರೆ. ಸವಾಲುಗಳನ್ನು ಸ್ವೀಕರಿಸಿ ಒತ್ತಡವನ್ನು ಸುಲಭವಾಗಿ ನಿಭಾಯಿಸಿಕೊಂಡು ಹೋಗುತ್ತಾರೆ. ತೀಕ್ಷ್ಣವಾದ ಮತ್ತು ಗ್ರಹಿಸುವ ಸಾಮರ್ಥ್ಯ ಹೊಂದಿದ್ದು, ಇತರರಿಗೆ ಸಹಾಯ ಮಾಡುವುದರೊಂದಿಗೆ ವೈಯಕ್ತಿಕ ಜೀವನದ ಯಶಸ್ಸನ್ನು ಸಾಧಿಸುತ್ತಾರೆ. ಇವರು ಸ್ವಂತಿಕೆಯಿಂದ ನೈಸರ್ಗಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತಾರೆ.
ನಾಯಕತ್ವದ ಗುಣ:
ಗಲ್ಲದ ಆಕಾರವು ಚಿತ್ರ ಮೂರನ್ನು ಹೋಲುತ್ತಿದ್ದರೆ, ವ್ಯಕ್ತಿಯ ಗಲ್ಲವು ಮೊಟ್ಟೆಯಾಕಾರದಲ್ಲಿದೆ ಎಂದರ್ಥ. ಈ ಆಕಾರವನ್ನು ಹೊಂದಿರುವವರು ಹುಟ್ಟಿನಿಂದಲೇ ನಾಯಕತ್ವ ಗುಣ ಇವರಲ್ಲಿರುತ್ತದೆ. ಅತಿಯಾದ ಆತ್ಮವಿಶ್ವಾಸ ಹಾಗೂ ಜೀವನದ ಸವಾಲುಗಳನ್ನು ಸಹಜವಾಗಿ ಎದುರಿಸುವ ಗುಣ ಇವರಲ್ಲಿ ಹೆಚ್ಚಿರುತ್ತದೆ. ತನ್ನ ವರ್ಚಸ್ಸಿನಿಂದಲೇ ಗುರುತಿಸಿಕೊಳ್ಳುತ್ತಾರೆ. ಈ ವ್ಯಕ್ತಿಗಳು ಸ್ನೇಹಪರರಾಗಿದ್ದು, ಸುತ್ತಲಿನ ಜನರಿಗೆ ಬೇಗನೇ ಇಷ್ಟವಾಗುತ್ತಾರೆ. ಮಹತ್ವಾಕಾಂಕ್ಷಿಗಳು ಹಾಗೂ ಪರಹಿತಚಿಂತನೆಯವರಾಗಿದ್ದು ಸಹಾಯ ಮಾಡುವ ಗುಣವನ್ನು ಹೊಂದಿರುತ್ತಾರೆ. ಆಶಾವಾದಿಗಳಾಗಿದ್ದು, ಗುಂಪಿನಲ್ಲಿದ್ದಾಗ ಈ ವ್ಯಕ್ತಿಗಳಿಂದ ಇತರರು ಪ್ರಭಾವಕ್ಕೆ ಒಳಗಾಗುವವರೇ ಹೆಚ್ಚು.
ಭಾವ ಜೀವಿಗಳು:
ಗಲ್ಲದ ಆಕಾರವು ಚಿತ್ರ ನಾಲ್ಕರಲ್ಲಿರುವಂತೆ ಇದ್ದರೆ, ವೃತ್ತಾಕಾರದಿಂದ ಕೂಡಿದ ಅಗಲವಾದ ಗಲ್ಲವನ್ನು ಹೊಂದಿದ್ದಾರೆ ಎಂದರ್ಥ. ಈ ವ್ಯಕ್ತಿಗಳು ಭಾವನಾತ್ಮಕ ಜೀವಿಗಳು. ತಮ್ಮ ಮನಸ್ಸಿನ ಭಾವನೆಗಳನ್ನು ವ್ಯಕ್ತಪಡಿಸಲು ಹಿಂಜರಿಯುವುದಿಲ್ಲ. ಈ ವ್ಯಕ್ತಿಗಳು ಮುಕ್ತವಾಗಿ ಭಾವನೆ ವ್ಯಕ್ತಪಡಿಸುವುದು ಈ ವ್ಯಕ್ತಿಗಳನ್ನು ದುರ್ಬಲಗೊಳಿಸುತ್ತದೆ. ಆದರೆ ಇತರರಿಗೆ ಬಹಳ ಹತ್ತಿರವಾಗುವಂತೆ ಮಾಡುತ್ತದೆ. ಭಾವನಾತ್ಮಕ ಬುದ್ಧಿವಂತಿಕೆಯು ಇತರರೊಂದಿಗೆ ಆಳವಾದ ಸಂಪರ್ಕ ಸಾಧಿಸುವಂತೆ ಮಾಡುತ್ತದೆ.
ಸಂಬಂಧಗಳಿಗೆ ಆದ್ಯತೆ:
ಚಿತ್ರ ಐದರಲ್ಲಿ ಇರುವಂತೆ ಗಲ್ಲವು ಉಬ್ಬಿರುವ ಆಕಾರ ಹೊಂದಿದ್ದರೆ ಈ ವ್ಯಕ್ತಿಗಳು ಎಲ್ಲಕ್ಕಿಂತ ಹೆಚ್ಚಾಗಿ ಸಂಬಂಧಗಳಿಗೆ ಆದ್ಯತೆ ನೀಡುತ್ತಾರೆ. ಕುಟುಂಬ ಮತ್ತು ಸ್ನೇಹಿತರು ಈ ವ್ಯಕ್ತಿಗಳ ಜಗತ್ತೇ ಆಗಿದ್ದು, ಆ ಸಂಪರ್ಕಗಳನ್ನು ಕಾಪಾಡಿಕೊಳ್ಳಲು ಶ್ರಮಿಸುತ್ತಾರೆ. ಸ್ನೇಹಪರರಾಗಿದ್ದು, ತಮ್ಮ ಸಕಾರಾತ್ಮಕತೆಯಿಂದ ಇತರರನ್ನು ಸ್ವಾಭಾವಿಕವಾಗಿ ಸೆಳೆಯುವ ಗುಣ ಇವರಲ್ಲಿರುತ್ತದೆ. ಅರ್ಥಪೂರ್ಣ ಸಂಬಂಧಗಳನ್ನು ಬೆಳೆಸುವಾಗ ಪ್ರಾಮಾಣಿಕತೆ ಮತ್ತು ಬದ್ಧತೆ ಹೆಚ್ಚು ಮಹತ್ವ ನೀಡುವ ವ್ಯಕ್ತಿಗಳಾಗಿರುತ್ತಾರೆ.
ಅಸುರಕ್ಷಿತ ಭಾವನೆಯುಳ್ಳವರು:
ಚಿತ್ರ ಆರರಲ್ಲಿರುವಂತೆ ಗಲ್ಲವು ಚಪ್ಪಾಟೆಯಾಗಿದ್ದರೆ ಯಾವುದೇ ಕೆಲಸವನ್ನು ಕೈಗೆತ್ತಿಕೊಂಡಾಗ ಇದು ನನ್ನಿಂದ ಮಾಡಲು ಸಾಧ್ಯವೇ ಎನ್ನುವ ಸ್ವಯಂ-ಅನುಮಾನ ಹೊಂದಿರುತ್ತಾರೆ. ಇತರರನ್ನು ಆಕರ್ಷಿಸುವ ಕಾಂತೀಯ ಶಕ್ತಿಯು ಈ ವ್ಯಕ್ತಿಗಳಲ್ಲಿದ್ದು, ಸುತ್ತಲಿನ ಜನರು ಜನರು ನಿಮ್ಮ ಬಳಿ ಸಲಹೆಗಳನ್ನು ತೆಗೆದುಕೊಳ್ಳುತ್ತಾರೆ. ಈ ವ್ಯಕ್ತಿಗಳಲ್ಲಿ ಕೆಲವೊಮ್ಮೆ ಅಸುರಕ್ಷಿತ ಭಾವನೆಯಿಂದ ಒದ್ದಾಡುತ್ತಾರೆ. ಇವರು ವಿಶ್ವಾಸಾರ್ಹರು ಮತ್ತು ಯಾವಾಗಲೂ ಸಹಾಯಹಸ್ತವನ್ನು ನೀಡಲು ಸಿದ್ಧರಾಗಿರುತ್ತಾರೆ. ಆತ್ಮೀಯರೊಂದಿಗೆ ಹೆಚ್ಚು ಬೆರೆಯುವ ಮೂಲಕ ಉತ್ತಮ ಜೀವನವನ್ನು ನಡೆಸುತ್ತಾರೆ.
ನಿಮ್ಮ ನಿಗೂಢ ವ್ಯಕ್ತಿತ್ವ ರಿವೀಲ್ ಮಾಡುತ್ತೆ ಫ್ಯಾಷನ್ ಲೋಕ ದಲ್ಲಿ ವಿಭಿನ್ನ…ನೀವೇ ಆಯ್ಕೆ ಮಾಡಿಕೊಳ್ಳಿ…
Health Tips ಚಳಿಗಾಲದಲ್ಲಿ ಡ್ರೈ ಸ್ಕಿನ್ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಈ ರೀತಿ ಮಾಡಿ