newsics.com
ಬಿಗ್ ಬಾಸ್ ಆರಂಭವಾಗಿ ಇನ್ನೇನು ಮುಕ್ತಾಯಕ್ಕೆ ಬಂದಿದೆ. ಸದ್ಯ ಚಾಣಾಕ್ಷತನದ ಆಟ ಆಡೋ ಮೂಲಕ ಬಿಗ್ಬಾಸ್ ಗ್ರ್ಯಾಂಡ್ ಫಿನಾಲೆಗೆ ನೇರವಾಗಿ ಹನುಮಂತ ಎಂಟ್ರಿ ಕೊಟ್ಟಿದ್ದಾರೆ.
ಹೌದು, ಬಿಗ್ಬಾಸ್ ಟಿಕೆಟ್ ಟು ಫಿನಾಲೆ ಟಾಸ್ಕ್ಗೆ ಭವ್ಯಾ ಗೌಡ, ರಜತ್, ತ್ರಿವಿಕ್ರಮ್ ಹಾಗೂ ಹನುಮಂತ ಸೆಲೆಕ್ಟ್ ಆಗಿದ್ದರು. ಹೀಗಾಗಿ ಈ ನಾಲ್ಕು ಸ್ಪರ್ಧಿಗಳಿಗೆ ಬಿಗ್ಬಾಸ್ ಟ್ರಂಕ್ನಲ್ಲಿರುವ ಬಾವುಟ ಇರುವ ಸ್ಟಿಕ್ ತೆಗೆದುಕೊಂಡು ಹಗ್ಗಗಳಿಂದ ಮಾಡಿದ ಬಲೆಯನ್ನು ಹಿಡಿದು ಮೇಲಕ್ಕೆ ಏರಬೇಕಿದೆ. ಬಳಿಕ ಅಲ್ಲಿ ಹೋಗಿ ಬಾವುಟದ ಸ್ಟಿಕ್ ಇಟ್ಟು ಬಿಗ್ಬಾಸ್ ಎಂದು ಕೂಗಿ ಹೇಳಬೇಕು. ಈ ಟಾಸ್ಕ್ ಅನ್ನು ಸ್ಪರ್ಧಿಗಳು ಅತಿ ಕಡಿಮೆ ಅವಧಿಯಲ್ಲಿ ಪೂರ್ಣಗೊಳಿಸಬೇಕಿತ್ತು. ಹನುಮಂತ 2 ನಿಮಿಷ 27 ಸೆಕೆಂಡ್ನಲ್ಲಿ ಇದೇ ಟಾಸ್ಕ್ನಲ್ಲಿ ಗೆದ್ದು ಟಿಕೆಟ್ ಟು ಫಿನಾಲೆಗೆ ಎಂಟ್ರಿ ಕೊಟ್ಟ ಮೊದಲ ಸ್ಪರ್ಧಿಯಾಗಿದ್ದಾರೆ.
ಇನ್ನೂ, ಇದೇ ವೇಳೆ ಬಿಗ್ಬಾಸ್ ಮನೆಗೆ ಅತಿಥಿಯಾಗಿ ಆಗಮಿಸಿರುವ ಅದಿತಿ ಹಾಗೂ ಚರಣ್ ಅವರು ನೇರವಾಗಿ ಫಿನಾಲೆಗೆ ಹೋಗುವಂತ ಒಬ್ಬ ಸ್ಪರ್ಧಿ ಹನುಮಂತ ಹೆಸರನ್ನು ಘೋಷಣೆ ಮಾಡಿದ್ದಾರೆ. ಈ ಹೆಸರನ್ನು ಹೇಳುತ್ತಿದ್ದಂತೆ ಉಳಿದ ಸ್ಪರ್ಧಿಗಳು ಶಾಕ್ ಆಗಿದ್ದಾರೆ. ಇಷ್ಟು ದಿನ ಸೈಲೆಂಟ್ ಆಗಿದ್ದ ಹನುಮಂತ ಏಕಾಏಕಿ ವೈಲೆಂಟ್ ಆಗಿ ಟಾಸ್ಕ್ನಲ್ಲಿ ಭಾಗವಹಿಸಿ ತನ್ನ ಬಲ ಪ್ರದರ್ಶನ ಕೊಟ್ಟಿದ್ದಾರೆ. ಅಲ್ಲದೇ ಬಿಗ್ಬಾಸ್ ಮನೆಯ ಕಟ್ಟ ಕಡೆಯ ಕ್ಯಾಪ್ಟನ್ ಆಗಿ ಹೊರ ಹೊಮ್ಮಿದ್ದಾರೆ
ಟಿಕೆಟ್ ಟು ಫಿನಾಲೆ ಗೆದ್ದ ಸ್ಪರ್ಧಿಗೆ ಬಿಗ್ ಬಾಸ್ ವಿಶೇಷವಾದ ಬಂಪರ್ ಘೋಷಿಸಿದ್ದಾರೆ. ಟಿಕೆಟ್ ಟು ಫಿನಾಲೆ ಗೆದ್ದ ಸ್ಪರ್ಧಿ ಈ ಸೀಸನ್ ಕಡೇಯ ಹಾಗೂ ಅಲ್ಟಿಮೇಟ್ ಕ್ಯಾಪ್ಟನ್ ಆಗುತ್ತಾರೆ. ಹನುಮಂತ ಈಗ ಅಧಿಕಾರ ಪಡೆದುಕೊಂಡಿದ್ದಾರೆ.
ದೊಡ್ಮನೆಯಲ್ಲಿ ಇಡೀ ವಾರ ಟಿಕೆಟ್ ಟು ಫಿನಾಲೆ ಆಟ ಅತಿ ದೊಡ್ಡ ಹಲ್‌ಚಲ್ ಎಬ್ಬಿಸಿತ್ತು. ಮನೆಯ ಎಲ್ಲ ಸದಸ್ಯರು ಕೊಂಚ ಟೆನ್ಷನ್ ಅಲ್ಲಿಯೇ ಆಟ ಆಡಿದ್ದಾರೆ.