newsics.com
ಉತ್ತರ ಪ್ರದೇಶ: ವಯಾಗ್ರಾ ಮಾತ್ರೆ ಮತ್ತಲ್ಲಿ ಇಡೀ ರಾತ್ರಿ ಅಪ್ರಾಪ್ತ ಸ್ನೇಹಿತೆ ಜತೆ ದೈಹಿಕ ಸಂಪರ್ಕ ಹೊಂದಿದ್ದು, ಎಂಟು ಗಂಟೆಗೂ ಹೆಚ್ಚು ಕಾಲ ಬೆತ್ತಲಾಗಿದ್ದುದರಿಂದ ವಿಪರೀತ ಚಳಿಯಿಂದ ಆಕೆ ಅಸುನೀಗಿದ ಅಮಾನವೀಯ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಕಾನ್ಪುರದಲ್ಲಿ ಈ ಘಟನೆ ನಡೆದಿದ್ದು, 14 ವರ್ಷದ ಗೆಳತಿಯ ಸಾವಿಗೆ ಕಾರಣನಾದ ಆರೋಪಿ ಕುಲದೀಪ್ನನ್ನು ಪೊಲೀಸರು ಬಂಧಿಸಿದ್ದಾರೆ.
ಮೃತ ಬಾಲಕಿಯ ಕುಟುಂಬ ಸದಸ್ಯರು ಮದುವೆಗೆ ತೆರಳಿದ್ದಾಗ ಈ ಭಯಾನಕ ಘಟನೆ ನಡೆದಿದೆ. ಬಾಲಕಿಯೊಬ್ಬಳೇ ಮನೆಯಲ್ಲಿದ್ದುದನ್ನು ತಿಳಿದುಕೊಂಡೇ ಬಾಲಕಿ ಮನೆಗೆ ಬಂದ ಕುಲದೀಪ್ ಈ ಕೃತ್ಯ ಎಸಗಿದ್ದಾನೆ.
ನಿರಂತರ ಲೈಂಗಿಕ ಕ್ರಿಯೆಯಿಂದ ಅಸ್ವಸ್ಥಳಾದ ಬಾಲಕಿ ಕೆಲ ಕಾಲ ಪ್ರಜ್ಞಾಹೀನಳಾಗಿದ್ದು, ಬಳಿಕ ಮೃತಪಟ್ಟಿದ್ದಾಳೆ ಎಂದು ತನಿಖೆ ನಡೆಸಿರುವ ಪೊಲೀಸರು ತಿಳಿಸಿದ್ದಾರೆ.
ಅಪ್ರಾಪ್ತ ಸ್ನೇಹಿತೆಯ ಸಾವಿನಿಂದ ಭಯಗೊಂಡ ಕುಲದೀಪ್ ಅಲ್ಲಿಂದ ಪರಾರಿಯಾಗಿದ್ದ. ಮದುವೆ ಮುಗಿಸಿ ಮಾರನೇ ದಿನ ಮನೆಗೆ ಬಂದ ಪಾಲಕರು ಬಾಲಕಿಯ ಮೃತದೇಹ ನೋಡಿ ಕಂಗಾಲಾಗಿ ಪೊಲೀಸರಿಗೆ ನೀಡಿದ ದೂರಿನನ್ವಯ ತನಿಖೆ ಕೈಗೊಂಡ ಸ್ಥಳೀಯ ಪೊಲೀಸರು, ಕುಲದೀಪ್ನನ್ನು ಬಂಧಿಸಿ ವಿಚಾರಣೆ ಕೈಗೊಂಡಿದ್ದಾರೆ.