newsics.com
ಬಿಗ್ ಬಾಸ್ ಕನ್ನಡ ಮನೆಯಲ್ಲಿ ಶನಿವಾರದ ಎಪಿಸೋಡ್ ಭಾರಿ ಜಗಳಿಂದ ಕೂಡಿರುವ ನಿರೀಕ್ಷೆ ಮೂಡಿಸಿದೆ ಹೊಸದಾಗಿ ಬಿಡುಗಡೆ ಆಗಿರುವ ಪ್ರೋಮೋ. ಭವ್ಯಾ ಕಳ್ಳದಾರಿಯಲ್ಲಿ ಕ್ಯಾಪ್ಟನ್ ಆಗಲು ಸಹಾಯ ಮಾಡಿದ ರಜತ್ ವಿರುದ್ಧ ಚೈತ್ರಾ ಉರಿದು ಬಿದ್ದಿದ್ದಾರೆ.
https://www.instagram.com/reel/DEHtPOxhCjx/?igsh=MW1nYWU4cjB5Nzhi
ಕಿಚ್ಚನ ಪಂಚಾಯಿತಿಯ ಬ್ರೇಕ್ನಲ್ಲಿ ರಜತ್ ಮತ್ತು ಚೈತ್ರಾ ನಡುವೆ ಮಾರಾಮಾರಿ ಗಲಾಟೆಯಾಗಿದೆ. ಅದೂ ಕೂಡ ಭವ್ಯಾ ಕ್ಯಾಪ್ಟನ್ಸಿ ವಿಷಯಕ್ಕೆ.
ಭವ್ಯಾ ಅವರು ಈ ವಾರವೂ ಕ್ಯಾಪ್ಟನ್ ಆದರು. ಆದರೆ ಅವರು ಮೋಸ ಮಾಡಿ ಕ್ಯಾಪ್ಟನ್ ಆಗಿದ್ದಾರೆ ಎಂಬ ಗುಸುಗುಸು ಬಿಗ್ಬಾಸ್ ಮನೆಯಲ್ಲಿ ಶುರುವಾಗಿ, ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಡಿದೆ.
ಇತ್ತ ಬಿಗ್ಬಾಸ್ ಮನೆಯಿಂದ ಈ ಸಲ ಯಾರು ಹೋಗಬಹುದು ಎಂಬ ಚರ್ಚೆ ಶುರುವಾಗಿದೆ. ರಜತ್ ಮತ್ತು ಭವ್ಯಾರನ್ನ ಹೊರತುಪಡಿಸಿ ಉಳಿದ ಏಳೂ ಜನ ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದಾರೆ. ತ್ರಿವಿಕ್ರಮ್, ಧನರಾಜ್, ಮಂಜು, ಗೌತಮಿ, ಹನುಮಂತು, ಧನರಾಜ್, ಚೈತ್ರಾ, ಮೋಕ್ಷಿತಾ ಮತ್ತು ಐಶ್ವರ್ಯಾ ಈ ಸಲ ಡೇಂಜರ್ ಜೋನ್ನಲ್ಲಿ ಇದ್ದಾರೆ.