newsics.com
ಬಿಗ್ ಬಾಸ್ ಸೀಸನ್ 11 ರೆಸಾರ್ಟ್ ಆಗಿ ಬದಲಾಗಿದೆ. ಹೌದು, ಬಿಗ್ ಬಾಸ್ ಮನೆಯಲ್ಲಿ ಎರಡು ತಂಡವಾಗಿ ವಿಂಗಡಣೆಯಾಗಿದೆ. ಒಂದು ತಂಡದಲ್ಲಿ ಚೈತ್ರಾ ಕುಂದಾಪುರ, ಐಶ್ವರ್ಯಾ, ಮಂಜು, ಗೌತಮಿ, ಹನುಮಂತ ಒಂದು ಟೀಮ್ ನಲ್ಲಿ ಇದ್ದಾರೆ. ಮತ್ತೊಂದು ಟೀಮ್ ನಲ್ಲಿ ತ್ರಿವಿಕ್ರಮ್, ಭವ್ಯಾ ಗೌಡ, ಧನರಾಜ್, ರಜತ್ ಹಾಗೂ ಮೋಕ್ಷಿತಾ ಇದ್ದಾರೆ. .
https://www.instagram.com/reel/DD_xHoGpUPO/?igsh=eTN3Y3g0c2swZ3Zr
ನಿನ್ನೆಯ ಸಂಚಿಕೆಯಲ್ಲಿ ತ್ರಿವಿಕ್ರಮ್ ತಂಡದವರು ಬಿಗ್ಬಾಸ್ ರೆಸಾರ್ಟ್ನಲ್ಲಿ ಕೆಲಸ ಮಾಡುವವರಾಗಿದ್ದರು
ಅಲ್ಲದೇ ಮಂಜು ಟೀಮ್ ರೆಸಾರ್ಟ್ಗೆ ಅತಿಥಿಗಳಾಗಿ ಎಂಟ್ರಿ ಕೊಟ್ಟಿದ್ದರು. ಇದೇ ಕಾನ್ಸೆಪ್ಟ್ನಲ್ಲಿ ಮನೆ ಮಂದಿ ಭಾಗಿಯಾಗಿದ್ದಾರೆ. ನಿನ್ನೆ ಮಂಜು ತಂಡ ಬೇಕಾ ಬಿಟ್ಟಿಯಾಗಿ ರೆಸಾರ್ಟ್ ಕೆಲಸಗಾರರ ಮೇಲೆ ಅವಾಜ್ ಹಾಕುತ್ತಿದ್ದಾರೆ. ಚೈತ್ರಾ ಕುಂದಾಪುರ ಅಂತೂ ಸಿಕ್ಕಿದ್ದೇ ಜಾನ್ಸ್ ಅಂತ ರಜತ್ ಗೆ ಕೆಲಸ ಕೊಟ್ಟಿದ್ದರು. ಇದೀಗ ಬಿಗ್ ಬಾಸ್ ಮನೆಯಲ್ಲಿ ಆಟ ಬದಲಾಗಿದೆ.
ನಿನ್ನೆ ಕೆಲಸಗಾರರಾಗಿದ್ದ ತ್ರಿವಿಕ್ರಮ್ ಟೀಮ್ ಈಗ ಅತಿಥಿಗಳಾಗಿದ್ದಾರೆ. ಮಂಜು ಟೀಮ್ ಬಿಗ್ಬಾಸ್ ರೆಸಾರ್ಟ್ನಲ್ಲಿ ಕೆಲಸ ಮಾಡುವವರಾಗಿದ್ದಾರೆ. ಈಗ ಬಿಗ್ಬಾಸ್ ಮನೆಯಲ್ಲಿ ಅಸಲಿ ಆಟ ಶುರುವಾಗಿದೆ.