newsics.com
ಮಂಡ್ಯ: ಇಂದಿನಿಂದ (ಡಿ.20) ಮೂರು ದಿನ ಸಕ್ಕರೆ ನಾಡು, ಭತ್ತದ ಕಣಜ ಖ್ಯಾತಿಯ ಮಂಡ್ಯದಲ್ಲಿ ಮೂರನೇ ಬಾರಿ ಅಕ್ಕರೆಯ ಅಕ್ಷರ ಜಾತ್ರೆಗೆ ನಡೆಯಲಿದೆ.
ಕರುನಾಡಿಗೆ ಕನ್ನಡ ಭಾಷೆ ಅನ್ನದ ಭಾಷೆಯಾದರೆ, ಕಾವೇರಿ ಮಡಿಲಿನ ಮಂಡ್ಯ ನೆಲಕ್ಕೆ ನೀರಿನ ಭಾಷೆ, ರಕ್ತ ಕೊಟ್ಟೇವು, ಆದರೆ ಕಾವೇರಿ ನೀರು ಕೊಡಲ್ಲ ಎಂದು ಗಂಡುಮೆಟ್ಟಿನ ಪ್ರಖರ ಹೋರಾಟದ ಬೀಜ ಬಿತ್ತಿ, ನಾಡಿನಾದ್ಯಂತ ಹೋರಾಟದ ವೃಕ್ಷ ಬೆಳೆಸಿದ ಹೋರಾಟದ ತವರೂರಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಕನ್ನಡ ಕಹಳೆ ಮೊಳಗಲಿದೆ, ಕನ್ನಡ ಕಂಪು ಹರಡಲಿದೆ.
ಇಲ್ಲಿನ ಸ್ಯಾಂಜೋ ಆಸ್ಪತ್ರೆ ಹಿಂಭಾಗದ ಸುಮಾರು 80 ಎಕರೆ ಪ್ರದೇಶದಲ್ಲಿ ನಡೆಯುತ್ತಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಬೃಹತ್ ಮಂಟಪದ ಸಿದ್ಧತಾ ಕಾರ್ಯ ಪೂರ್ಣಗೊಂಡಿದ್ದು, ಮುಖ್ಯ ವೇದಿಕೆಕೆ ಅಂತಿಮ ಸ್ಪರ್ಶ ಕೊಡುವ ಕಾರ್ಯ ತಡರಾತ್ರಿವರೆಗೂ ನಡೆದಿತ್ತು.
ವಿಶಾಲವಾದ ಪ್ರಧಾನ ವೇದಿಕೆ ರಾಜಮಾತೆ ಕೆಂಪನಂಜಮ್ಮಣ್ಣಿ ಮತ್ತು ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರು ನಾಮಕರಣ ಮಾಡಿದ್ದು, ಕೃಷ್ಣರಾಜಸಾಗರ ಮಾದರಿಯಲ್ಲಿ ನಿರ್ಮಿಸಿದ ಪ್ರಧಾನ ವೇದಿಕೆಗೆ ಯಕ್ಷಕವಿ ಕೆಂಪಣ್ಣಗೌಡ ಮತ್ತು ಉಭಯಕವಿ ವಿಶಾರದ ಷಡಕ್ಷರದೇವ ಮಹಾದ್ವಾರ ಎಂದು ನಾಮಕರಣ ಮಾಡಲಾಗಿದೆ.
ಈ ಪ್ರಮುಖ ವೇದಿಕೆ ಪಕ್ಕದಲ್ಲಿ ಎರಡು ಸಮಾನಾಂತರ ವೇದಿಕೆಗಳನ್ನು ನಿರ್ಮಿಸಲಾಗಿದ್ದು, ಕರ್ನಾಟಕ ಚಕ್ರವರ್ತಿ ಚಿಕ್ಕದೇವರಾಜ ಒಡೆಯರ್ ಹಾಗೂ ಸಂಚಿ ಹೊನ್ನಮ್ಮ ಮತ್ತು ಕಾದಂಬರಿ ಸಾಮ್ರಾಜ್ಞಿ ತ್ರಿವೇಣಿ ವೇದಿಕೆ ಎಂದು ನಾಮಕರಣ ಮಾಡಲಾಗಿದೆ.
ಸಾಹಿತ್ಯ ಸಮ್ಮೇಳನ ನಡೆಯುವ ಮುಖ್ಯವೇದಿಕೆ ಮಂಟದಲ್ಲಿ ಸುಮಾರು 40 ಸಾವಿರ ಕನ್ನಡಾಭಿಮಾನಿಗಳು ಕುಳಿತುಕೊಳ್ಳಲು ಆಸನ ವ್ಯವಸ್ಥೆ ಮಾಡಿದ್ದು, ಪುಸ್ತಕ ಮಳಿಗೆ, ವಾಣಿಜ್ಯ ಮಳಿಗೆ, ದಾಸೋಹ ಮಂಟಪ ಸೇರಿದಂತೆ ಸಕಲ ಸಿದ್ಧತೆ ಪೂರ್ಣಗೊಂಡಿದೆ.
ನಗರದ ವಿವಿಧೆಡೆ ಜಿಲ್ಲೆಯ ಹೆಸರಾಂತ ಸಾಹಿತಿ, ಗಣ್ಯಮಾನ್ಯರಾದ ಕುವೆಂಪು, ತ್ರಿವೇಣಿ, ಪುತಿನ, ಬಿ.ಎಂ. ಶ್ರೀಕಂಠಯ್ಯ, ಚಿತ್ರನಟರಾದ ಡಾ. ವಿಷ್ಣುವರ್ಧನ, ಅಂಬರೀಷ್, ನಿತ್ಯ ಸಚಿವ ಕೆ.ವಿ. ಶಂಕರೇಗೌಡ, ಹಿರಿಯ ಹೋರಾಟಗಾರರಾದ ಜಿ. ಮಾದೇಗೌಡ, ಪುಟ್ಟಣ್ಣಯ್ಯ, ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ, ಡಾ. ಬಾಲಗಂಗಾಧರನಾಥ ಸ್ವಾಮಿ, ಚಿಕ್ಕದೇವರಾಜ ಒಡೆಯರ್, ಎಚ್.ಎಲ್. ನಾಗೇಗೌಡ ಸೇರಿದಂತೆ ಹಲವರ ಹೆಸರಿನಲ್ಲಿ ಮಹಾದ್ವಾರಗಳನ್ನು ನಿರ್ಮಿಸಲಾಗಿದೆ.
ಜಿಲ್ಲೆಯಲ್ಲಿ ಕಳೆದ 1974 ರಲ್ಲಿ ಮೊಟ್ಟಮೊದಲ ಬಾರಿಗೆ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆದಿದ್ದು, ಆಗ ಸಮ್ಮೇಳನದ ಸರ್ವಾಧ್ಯಕ್ಷೆ ಸ್ಥಾನವನ್ನು ಜಯದೇವಿತಾಯಿ ಲಿಗಾಡೆ ವಹಿಸಿದ್ದರು.
1994 ರಲ್ಲಿ ಎರಡನೇ ಬಾರಿಗೆ ನಡೆದ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನವನ್ನು ಹಿರಿಯ ಸಾಹಿತಿ ಚದುರಂಗ ವಹಿಸಿದ್ದರೆ, ಈಗ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ಸ್ಥಾನ ವಹಿಸಿ, ಕನ್ನಡ ನುಡಿತೇರನ್ನು 94 ವರ್ಷದ ಹಿರಿಯ ಸಾಹಿತಿ ನಾಡೋಜ ಡಾ. ಗೊ.ರು. ಚನ್ನಬಸಪ್ಪ ಮುನ್ನಡೆಸುತ್ತಿದ್ದಾರೆ.
ಮದುವೆ ಮನೆಯಾದ ಮಂಡ್ಯ:
ಮಂಡ್ಯ ನಗರ ಅಕ್ಷರಶಃ ಮದುವೆ ಮನೆಯಂತೆ ಕಂಗೊಳಿಸುತ್ತಿದ್ದು, ಪ್ರತಿ ರಸ್ತೆ, ವೃತ್ತ, ತಿರುವುಗಳಲ್ಲಿ ಕನ್ನಡ ಬಾವುಟದ ಧ್ವಜ ಹಾಗೂ ಹಳದಿ, ಕೆಂಪು ಬಣ್ಣಗಳಿಂದ ಕಂಗೊಳಿಸುತ್ತಿದೆ. ರಸ್ತೆಗಳ ಅಲ್ಲಲ್ಲಿ ತಳಿರು ತೋರಣಗಳನ್ನು ಕಟ್ಟಲಾಗಿದ್ದು, ಬಣ್ಣ ಬಣ್ಣದ ವಿದ್ಯುತ್ ದೀಪಾಲಂಕಾದಿಂದ ಝಗಮಗಿಸುತ್ತಿದೆ.
ಇಲ್ಲಿನ ಸರ್ಕಾರಿ ಕಚೇರಿ, ಬಸ್ ನಿಲ್ದಾಣ, ಆಸ್ಪತ್ರೆ ಹಾಗೂ ಅಂಗಡಿ, ಮುಂಗಟ್ಟುಗಳ ಮೇಲೆ ಕನ್ನಡ ಬಾವುಟ ಹಾರಾಡುತ್ತಿದ್ದು, ಪ್ರತಿ ಮನೆ, ಮನದಲ್ಲೂ ಕನ್ನಡದ ಘಮ ಘಮ್ ಎನ್ನುತ್ತಿದೆ.
Special welcome ಸಾಷ್ಟಾಂಗ ನಮಸ್ಕಾರ ಮಾಡಿ ಬಾಸ್ ಸ್ವಾಗತಿಸಿದ ಉದ್ಯೋಗಿಗಳು! ವೈರಲ್ ವಿಡಿಯೋ ನೋಡಿ
Tech Tips: ಇಂಟರ್ನೆಟ್ ಹೈ-ಸ್ಪೀಡ್ ಆಗಬೇಕಾದ್ರೆ ಜಸ್ಟ್ ಈ ಟ್ರಿಕ್ಸ್ ಉಪಯೋಗಿಸಿ
Relationship ಹೆಂಡತಿಯರು ತಮ್ಮ ಗಂಡನಿಂದ ನಿಜವಾಗಿಯೂ ಏನು ಬಯಸುತ್ತಾರೆ?
shower ದಂಪತಿ ಒಟ್ಟಿಗೇ ಸ್ನಾನ ಮಾಡಲು ಬಯಸುವಿರಾ? ಅದಕ್ಕೂ ಮುನ್ನ ನಿಮಗೆ ಈ ವಿಷಯ ತಿಳಿದಿರಲಿ…