newsics.com
ಚೀನಾ: ಉದ್ಯೋಗಿಗಳು ಆಫೀಸ್ ಒಳಗೆ ಬಾಸ್ ಎಂಟ್ರಿಯಾಗುತ್ತಿದ್ದಂತೆ ಸಾಷ್ಟಾಂಗ ನಮಸ್ಕಾರ ಮಾಡಿದ್ದಾರೆ ಈ ವಿಡಿಯೋ ವೈರಲ್ ಆಗಿದೆ.
ಚೀನಾದಲ್ಲಿ ನಡೆಯುವ ಕೆಲವೊಂದು ವಿಲಕ್ಷಣ ಸಂಗತಿಗಳ ಸುದ್ದಿಗಳನ್ನು ಕೇಳಿದಾಗ ತಲೆ ಗಿರ್ ಎನ್ನುತ್ತೆ. ಇದೀಗ ಅಂತಹದ್ದೇ ವಿಚಿತ್ರ ಘಟನೆಯೊಂದು ನಡೆದಿದ್ದು, ಉದ್ಯೋಗಿಗಳು ಆಫೀಸ್ ಒಳಗೆ ಬಾಸ್ ಎಂಟ್ರಿಯಾಗುತ್ತಿದ್ದಂತೆ ಸಾಷ್ಟಾಂಗ ನಮಸ್ಕಾರ ಮಾಡಿ, ಜೀವನ-ಮರಣ ಏನೇ ಆಗಲಿ ನಿಮ್ಮ ಕಾರ್ಯವನ್ನು ನಾವು ಪೂರ್ಣಗೊಳಿಸುತ್ತೇವೆ ಎಂಬ ಘೋಷಣೆಯನ್ನು ಕೂಗುತ್ತಾ ವಿಶಿಷ್ಟ ರೀತಿಯಲ್ಲಿ ಸ್ವಾಗತ ಕೋರಿದ್ದಾರೆ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಕೆಲಸದ ಸ್ಥಳದಲ್ಲಿರುವ ಇಂತಹ ಉಸಿರುಗಟ್ಟಿಸುವಂತ ವಾತಾವರಣದ ಬಗ್ಗೆ ಭಾರೀ ಚರ್ಚೆಗೆ ಗ್ರಾಸ್ತವಾಗಿದೆ.
ಚೀನಾದ ಗುವಾಂಗ್ಝೌ ಎಂಬಲ್ಲಿನ ಶಿಕ್ಷಣ ಸಂಸ್ಥೆಯೊಂದರಲ್ಲಿ ಈ ವಿಡಿಯೋವನ್ನು ಚಿತ್ರೀಕರಿಸಲಾಗಿದೆ ಎಂದು ಹೇಳಲಾಗುತ್ತಿದೆ. ಈ ಸಂಸ್ಥೆಯ ನೌಕಕರು ಬಾಸ್ ಬರುತ್ತಿದ್ದಂತೆ ನೆಲದ ಮೇಲೆ ಮಲಗಿ ಸಾಷ್ಟಾಂಗ ನಮಸ್ಕಾರ ಮಾಡಿ, ಜೀವನ-ಮರಣ ಏನೇ ಆಗಲಿ ನಿಮ್ಮ ಕಾರ್ಯವನ್ನು ನಾವು ಪೂರ್ಣಗೊಳಿಸುತ್ತೇವೆ ಎಂಬ ಘೋಷಣೆಯನ್ನು ಕೂಗುತ್ತಾ ವಿಶಿಷ್ಟ ರೀತಿಯ ಸ್ವಾಗತ ಕೋರಿದ್ದಾರೆ. ಇಲ್ಲಿನ 20 ಉದ್ಯೋಗಿಗಳು ಹೀಗೆ ಬಾಸ್ ಕಾಲಿಗೆ ಬಿದ್ದು ನಮಸ್ಕರಿಸಿದ್ದು, ಇಂತಹ ರೂಲ್ಸ್ಗಳನ್ನು ನಿಲ್ಲಿಸಿ ಎಂದು ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.