newsics.com
ಪಿಡಿಒ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ. ಮೇಲ್ವಿಚಾರಕರಿಗೆ ಪ್ರಶ್ನೆಪತ್ರಿಕೆ ತಡವಾಗಿ ತಲುಪಿದೆ ಎಂಬ ಮಾಹಿತಿಯುಳ್ಳ ವಿಡಿಯೋವೊಂದು ವೈರಲ್ ಆಗಿದೆ. ಇದರಿಂದ ಪಿಡಿಒ ಪರೀಕ್ಷೆ ಬರೆದಿದ್ದ ಅಭ್ಯರ್ಥಿಗಳಲ್ಲಿ ಮತ್ತೆ ಆತಂಕ ಶುರುವಾಗಿದೆ.
ಇತ್ತೀಚೆಗೆ ಕೆಪಿಎಸ್‌ಸಿ ನಡೆಸಿರುವ PDO ನೇಮಕಾತಿ ಪರೀಕ್ಷೆಯಲ್ಲಿ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ನವೆಂಬರ್ 17ರಂದು ಪರೀಕ್ಷೆ ನಡೆದಿತ್ತು. ಈ ನೇಮಕಾತಿ ಪರೀಕ್ಷೆಯ ವೇಳೆ ಪ್ರಶ್ನೆಪತ್ರಿಕೆ ಸೋರಿಕೆ ಆಗಿರುವ ಕುರಿತು ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ ಅಭ್ಯರ್ಥಿಗಳು ಭಾರಿ ಪ್ರತಿಭಟನೆ ಮತ್ತು ಹೋರಾಟ ನಡೆಸಿದ್ದರು. ಇದೀಗ ಮತ್ತೊಂದು ವಿಡಿಯೋ ಬಹಿರಂಗವಾಗಿದೆ.
ತುಮಕೂರಿನ ಕೇಂದ್ರದಲ್ಲಿ ಬ್ಲ್ಯೂಟೂತ್ ಬಳಸಿ ಎಕ್ಸಾಂ ಬರೆಯುತ್ತಿದ್ದ ಅಭ್ಯರ್ಥಿಯನ್ನು ಪೊಲೀಸರು ಬಂಧಿಸಿದ್ದರು. ಈ ಪ್ರಕರಣದ ಬೆನ್ನಲ್ಲೇ ಪಿಡಿಒ ನೇಮಕಾತಿ ಪ್ರಶ್ನೆ ಪತ್ರಿಕೆ ಲೀಕ್ ಆಗಿದೆ ಎಂಬ ಆರೋಪಗಳು ಸಹ ಕೇಳಿ ಬಂದಿದ್ದವು. ಈ ಆರೋಪಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರೇ ಸ್ಪಷ್ಟನೆ ನೀಡಿದ್ದರು. ಕೆಲ ವಿದ್ಯಾರ್ಥಿಗಳು ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ಬೇರೆ ವಿದ್ಯಾರ್ಥಿಗಳನ್ನು ಪ್ರಚೋದಿಸಿದ, ಪ್ರತಿಭಟನೆ ಮಾಡಿದ 12 ವಿದ್ಯಾರ್ಥಿಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಪ್ರಶ್ನೆ ಪತ್ರಿಕೆ ನೀಡುವಲ್ಲಿ ವಿಳಂಬ ಸಹ ಆಗಿಲ್ಲ. ಉಪಸಮಿತಿ ಸಲ್ಲಿಸಲಿರುವ ವರದಿಯಲ್ಲಿ ಯಾರಿಗಾದರೂ ಅನ್ಯಾಯವಾಗಿದ್ದಲ್ಲಿ ಅವರಿಗೆ ನ್ಯಾಯ ಒದಗಿಸಲಾಗುವುದು ಎಂದು ಮುಖ್ಯಮಂತ್ರಿಗಳು ಹೇಳಿದ್ದರು
PDO ನೇಮಕಾತಿ ಪರೀಕ್ಷೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಪ್ರತಿಭಟನೆ ಮತ್ತು ಹೋರಾಟ ನಡೆದಿತ್ತು ಈ ಹಿನ್ನೆಲೆಯಲ್ಲಿ ಅಧಿವೇಶನದಲ್ಲಿ ಸಿಎಂ ಸಿದ್ದರಾಮಯ್ಯ ತನಿಖೆಗೆ ಸೂಚನೆ ನೀಡಿದ್ದರು. ಇದರ ಬೆನ್ನಲ್ಲೇ ಘಟನೆಗೆ ಕಾರಣವಾದ ವಿಡಿಯೋ ಕೂಡ ವೈರಲ್ ಆಗಿದೆ. ಮೇಲ್ವಿಚಾರಕರಿಗೆ ತಡವಾಗಿ ಪ್ರಶ್ನೆ ಪತ್ರಿಕೆ ಬಂದಿದ್ದು ಬಹಿರಂಗವಾಗಿದೆ. ಬೆಳಗ್ಗೆ 9:30ಕ್ಕೆ ಪ್ರಶ್ನೆ ಪತ್ರಿಕೆ ಮೇಲ್ವಿಚಾರಕರಿಗೆ ನೀಡದೆ ವಿಳಂಬ ಮಾಡಲಾಗಿದೆ ಎಂದು ವಿಡಿಯೋದಲ್ಲಿ ಅಭ್ಯರ್ಥಿಗಳು ಕೂಡ ಆರೋಪಿಸಿದ್ದಾರೆ.
https://twitter.com/i/status/1867807989026988330
ಬಿಗ್ ಬಾಸ್ ಮನೆಯಿಂದ ಆತಂಕದಿಂದಲೇ ಹೊರಬಂದ ಗೋಲ್ಡ್ ಸುರೇಶ್! ಏನಾಯ್ತು? ವಾಪಸ್ ಬರ್ತಾರಾ?
24 ಗಂಟೆಯಲ್ಲಿ 1000 ಪುರುಷರ ಜತೆ ಲೈಂಗಿಕ ಸಂಪರ್ಕ ಹೊಂದಲು ಲಿಲಿ ನಿರ್ಧಾರ! ಇದೆಂಥಾ ಸಾಹಸ? ವಿಡಿಯೋ ನೋಡಿ
ಕೃಷಿ ಹೊಂಡದಲ್ಲಿ ಸೋಡಿಯಂ ಬ್ಲ್ಯಾಸ್ಟ್: ಡ್ರೋನ್ ಪ್ರತಾಪ್ ಸ್ನೇಹಿತರಿಬ್ಬರ ಬಂಧನ
Entertainment ಕೊರೆವ ಚಳಿಯಲ್ಲೂ ಜ್ಯೋತಿ ಪೂರ್ವಜ್ ಸ್ವಿಮ್ಮಿಂಗ್‌ನಲ್ಲಿ ಬ್ಯುಸಿ, ಹೆಚ್ಚಿತು ಹುಡುಗರ ಮೈ ಬಿಸಿ!
Maggie price hike ಜನವರಿಯಿಂದ ಮ್ಯಾಗಿ ದುಬಾರಿ ಸಾಧ್ಯತೆ, ಯಾಕೆ ದರ ಹೆಚ್ಚಳ?
International Tea Day ಚಹಾ ಕುಡಿದ್ರೆ ತೂಕ ಜಾಸ್ತಿಯಾಗತ್ತಾ? ಕಡಿಮೆಯಾಗತ್ತಾ? ನೀವು ಕುಡಿಯುವ ಟೀ ಹೇಗಿರಬೇಕು?