newsics.com
ಹೆಸರು, ಹಣ ಎರಡನ್ನೂ ಮಾಡುವ ಪ್ಲಾಟ್ಫಾರ್ಮ್ ಅಂದ್ರೆ ಅದು ಸೋಷಿಯಲ್ ಮೀಡಿಯಾ ಎಂಬುದು ಹಲವರ ಅನಿಸಿಕೆ. ಲೈಕ್, ಕಮೆಂಟ್ಸ್ ಪಡೆಯಲು ಮತ್ತು ವೈರಲ್ ಆಗುವ ದೃಷ್ಟಿಯಿಂದ ಇಂದಿನ ಯುವಕ ಯುವತಿಯರು ಏನ್ ಬೇಕಾದ್ರೂ ಮಾಡಲು ರೆಡಿ ಇರ್ತಾರೆ.
ಪ್ರಾಣವನ್ನೂ ಲೆಕ್ಕಿಸದೆ ಎಷ್ಟೋ ಯುವಕರು ಇಂದು ವೈರಲ್ ಆಗುವ ದೃಷ್ಟಿಯಿಂದ ರೀಲ್ಸ್ ಮಾಡುತ್ತಾರೆ. ಅಂಥದ್ದೇ ಪ್ರಯತ್ನವನ್ನು ಇಲ್ಲೋರ್ವ ಯುವತಿ ಮಾಡಿದ್ದಾಳೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ.
ಚೀನಾದ ಯುವತಿಯೊಬ್ಬಳು ಕುಟುಂಬ ಸಮೇತ ಶ್ರೀಲಂಕಾಕ್ಕೆ ಹೋಗಿದ್ದಳು. ಅಲ್ಲಿ ರೀಲ್ಸ್ ಮಾಡೋ ಪ್ಲಾನ್ ಮಾಡಿದ್ದಳು. ಯಾವುದಾದ್ರೂ ಹೊಸ ಸ್ಥಳಕ್ಕೆ ಹೋದಾಗ ರೀಲ್ಸ್ ಮಾಡೋದು ಸಾಮಾನ್ಯ.
ಕಾನೂನಿಗೆ ವಿರುದ್ಧವಾಗಿ ಈ ಯುವತಿ ರೈಲಿನಲ್ಲಿ ಅಪಾಯಕಾರಿ ರೀಲ್ಸ್ ಮಾಡಲು ಮುಂದಾಗಿದ್ದಾಳೆ. ರೈಲಿನ ಬಾಗಿಲಲ್ಲಿ ನೇತಾಡಿಕೊಂಡು ರೀಲ್ಸ್ ಮಾಡಿದ್ದಾಳೆ.
ವಿಡಿಯೋವನ್ನು ಡಿಸೆಂಬರ್ 12, 2024 ರಂದು @dailysherlock0 ಅವರು x ನಲ್ಲಿ ಪೋಸ್ಟ್ ಮಾಡಿದ್ದಾರೆ. ಚೀನಾ ಪ್ರವಾಸಿಗ ಯುವತಿ ಶ್ರೀಲಂಕಾದ ಕರಾವಳಿ ರೈಲು ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದಳು. ಈ ವೇಳೆ ರೀಲ್ಸ್ ಮಾಡಲು ಹೋಗಿ ರೈಲಿನಿಂದ ಕೆಳಗೆ ಬಿದ್ದಿದ್ದಾಳೆ. ರೈಲಿನ ಬಾಗಿಲಲ್ಲಿ ನೇತಾಡಿಕೊಂಡು ಯುವತಿ ರೀಲ್ಸ್ ಮಾಡುತ್ತಿದ್ದ ವೇಳೆ ಕೆಳಗೆ ಕಂಬವೊಂದು ಬಿದ್ದಿದ್ದಾಳೆ. ಅದೃಷ್ಟವಶಾತ್ ಆಕೆಗೆ ಯಾವುದೇ ಗಾಯವಾಗಿಲ್ಲ ಎಂದು ಪೊಲೀಸರು ಖಚಿತಪಡಿಸಿದ್ದಾರೆ ಎಕ್ಸ್ ಪೋಸ್ಟ್ನಲ್ಲಿ ಬರೆದಿದ್ದಾರೆ.
https://twitter.com/i/status/1867095491600589115
Torture by wife ಬೆಂಗಳೂರಲ್ಲಿ ಮತ್ತೊಂದು ಘಟನೆ: ಪತ್ನಿ, ಮಾವನ ಕಾಟ ತಾಳಲಾರದೆ ಹೆಡ್ ಕಾನ್ಸ್ಟೆಬಲ್ ಆತ್ಮಹ*ತ್ಯೆ!
Relationship tips ಪ್ರಣಯಕ್ಕೂ ಮುನ್ನ ದಂಪತಿ ನೆನಪಿನಲ್ಲಿಟ್ಟುಕೊಳ್ಳಬೇಕಾದ ವಿಷಯಗಳಿವು!