newsics.com
ಮಂಡ್ಯ: ಸಂಬಂಧಿಕರಿಗಿಂತಲೂ ಹೆಚ್ಚಾಗಿ ಸ್ನೇಹಿತರ ರೀತಿಯಲ್ಲಿದ್ದ ಒಂದೇ ಹೆಸರಿನ ಅಳಿಯಂದಿರ ಮಧ್ಯೆ ಮೂಡಿದ ಅನೈತಿಕ ಸಂಬಂಧದ ಶಂಕೆಯೊಂದು ಓರ್ವನ ಕೊಲೆಯಲ್ಲಿ ಅಂತ್ಯವಾಗಿದೆ.
ತನ್ನ ಪತ್ನಿ ಜತೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಶಂಕೆಯ ಮೇಲೆ ಹೆಂಡತಿಯ ಅಕ್ಕನ ಗಂಡನನ್ನೇ ಭೀಕರವಾಗಿ ಹತ್ಯೆ ಮಾಡಿದ್ದಾನೆ.
ಮಂಡ್ಯ ತಾಲೂಕಿನ ಕನ್ನಹಟ್ಟಿ ಗ್ರಾಮದ ಬಳಿ ಈ ಘಟನೆ ನಡೆದಿದೆ. ಮಂಡ್ಯ ತಾಲೂಕಿನ ಮುದಗಂದೂರು ಗ್ರಾಮದ ನಾಗೇಶ್(45) ಕೊಲೆಯಾದ ದುರ್ದೈವಿ. ಮಂಡ್ಯ ತಾಲೂಕು ಹುಚ್ಚೇಗೌಡನಕೊಪ್ಪಲು ಗ್ರಾಮದ ನಾಗೇಶ್(43)ಕೊಲೆ ಆರೋಪಿ. ಕೊಲೆ ಆರೋಪಿ ನಾಗೇಶ್ನ ಪತ್ನಿ ಜತೆ ಭಾವನೇ ಆದ ಮತ್ತೊಬ್ಬ ನಾಗೇಶ್ (ಹತ್ಯೆಯಾದ ವ್ಯಕ್ತಿ) ಅನೈತಿಕ ಸಂಬಂಧ ಹೊಂದಿದ್ದ. ಇದರಿಂದ ಕೆರಳಿದ ಆರೋಪಿ ನಾಗೇಶ್, ಆತನನ್ನು ಮುಗಿಸಲೇಬೇಕು ಎಂದು ಪ್ಲ್ಯಾನ್ ಮಾಡಿ ಡಿಸೆಂಬರ್ 3 ರಂದು ಬೆಂಗಳೂರಿನಿಂದ ಕರೆದುಕೊಂಡು ಬಂದು ಕಂಠಪೂರ್ತಿ ಕುಡಿಸಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ.
ಕೊಲೆಯಾದ ನಾಗೇಶ್ ಹಾಗೂ ಆರೋಪಿ ನಾಗೇಶ್ ನ ಎರಡೂ ಕುಟುಂಬಗಳು ಬೆಂಗಳೂರಿನ ನಾಗಸಂದ್ರದಲ್ಲಿ ವಾಸವಾಗಿದ್ದವು. ಒಂದೇ ಏರಿಯಾದಲ್ಲಿ ಮನೆ ಮಾಡಿಕೊಂಡು ಇದ್ದರು. ಕೊಲೆಯಾದ ನಾಗೇಶ್ ಆಟೋ ಚಾಲಕನಾಗಿದ್ದರೆ, ಆರೋಪಿ ನಾಗೇಶ್ ಪ್ಯಾಕರ್ಸ್ ಅಂಡ್ ಮೂವರ್ಸ್ ಕೆಲಸ ಮಾಡುತ್ತಿದ್ದ. ಸ್ನೇಹಿತರಂತಿದ್ದ ಅಳಿಯಂದಿರು ಕಳೆದ ಹಲವು ದಿನಗಳಿಂದ ಒಟ್ಟಿಗೆ ಪಾರ್ಟಿ ಕೂಡ ಮಾಡುತ್ತಿದ್ದರು.
ವಾರದ ಹಿಂದೆ ಸಹ ಒಟ್ಟಿಗೆ ಮಲೆಮಹದೇಶ್ವರ ಸ್ವಾಮಿ ಬೆಟ್ಟಕ್ಕೂ ಹೋಗಿ ಬಂದಿದ್ದರು. ಆದರೆ ಆರೋಪಿ ನಾಗೇಶ್ಗೆ ಪತ್ನಿಯ ಶೀಲದ ಮೇಲೆ ಶಂಕೆ. ಸ್ವತಃ ಬಾವನೇ ನಾದಿನಿ ಜತೆ ಆಕ್ರಮ ಸಂಬಂಧ ಹೊಂದಿದ್ದಾನೆ ಎಂಬ ಶಂಕೆ ಇತ್ತು. ಹೀಗಾಗಿ ಡಿಸೆಂಬರ್ 3 ರಂದು ಬೆಂಗಳೂರಿನಿಂದ ಕರೆದುಕೊಂಡು ಬಂದು ಕಂಠಪೂರ್ತಿ ಗ್ರಾಮದ ಸಮೀಪವೇ ಕರೆದುಕೊಂಡು ಬಂದಿದ್ದಾನೆ.
ಬಳಿಕ ರಸ್ತೆ ಬದಿಯ ನಿರ್ಜನ ಪ್ರದೇಶದಲ್ಲಿ ರಾತ್ರಿ 10.30 ಸುಮಾರಿಗೆ ನಾಗೇಶ್ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದ. ಮಾರನೇ ದಿನ ಮೃತದೇಹವನ್ನು ಸ್ಥಳೀಯರು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಹತ್ಯೆ ಮಾಡಿ ಪರಾರಿಯಾಗಿದ್ದ ನಾಗೇಶ್ನನ್ನು ಶಿವಳ್ಳಿ ಠಾಣೆ ಪೊಲೀಸರು ಬಂಧಿಸಿ, ಜೈಲಿಗೆ ಕಳುಹಿಸಿದ್ದಾರೆ.
Syria Crisis: ದೇಶದಿಂದ ಪಲಾಯನಗೈಯುವಾಗ ಹತ್ಯೆಯಾದ್ರಾ ಸಿರಿಯಾದ ಅಧ್ಯಕ್ಷ?
vegetable prices ಫೆಂಗಲ್ ಚಂಡಮಾರುತದ ಎಫೆಕ್ಟ್ ನಿಂದ ತರಕಾರಿ ಬೆಲೆಯಲ್ಲಿ ಭಾರಿ ಏರಿಕೆ
Rain Again ಬಂಗಾಳಕೊಲ್ಲಿಯಲ್ಲಿ ಮತ್ತೆರಡು ಚಂಡಮಾರುತ ಸೃಷ್ಟಿ: ಡಿ.14ರ ನಂತರ ರಾಜ್ಯದಲ್ಲಿ ಮತ್ತೆ ಮಳೆ
Schools Holiday list 2025-26ನೇ ಸಾಲಿನ ಶೈಕ್ಷಣಿಕ ರಜೆ ಘೋಷಣೆ: ಪೋಷಕರೇ ರಜೆ ಪಟ್ಟಿ ಗಮನಿಸಿ