newsics.com
ಮದ್ದೂರು (ಮಂಡ್ಯ): ಮದ್ದೂರು ತಾಲೂಕಿನ ದೇಶಹಳ್ಳಿ ಕಬ್ಬಿನ ಗದ್ದೆಯಲ್ಲಿ ಹಾಕಲಾಗಿದ್ದ ಒಂದೇ ಉರುಳಿಗೆ ಶುಕ್ರವಾರ ಚಿರತೆ ಮತ್ತು ಮುಳ್ಳುಹಂದಿ ಸೆರೆಯಾಗಿವೆ.
ಕಬ್ಬಿನ ಗದ್ದೆಯಲ್ಲಿ ಮುಳ್ಳುಹಂದಿಯನ್ನು ಬೇಟೆಯಾಡಲು ಚಿರತೆ ಬಂದಿದ್ದು, ಬಲೆಗೆ ಹಾಕಿದ್ದ ಉರುಳಿಗೆ ಸಿಕ್ಕಿಹಾಕಿಕೊಂಡು ಮುಂದೆ ಹೋಗಲು ಸಾಧ್ಯವಾಗಿಲ್ಲ. ಚಿರತೆಯೊಂದಿಗೆ ಮುಳ್ಳುಹಂದಿಯೂ ಬಲೆಗೆ ಸಿಕ್ಕಿ ಹಾಕಿಕೊಂಡಿದೆ.
ಉರುಳಿಗೆ ಸಿಕ್ಕಿಹಾಕಿಕೊಂಡ ಹಿನ್ನೆಲೆಯಲ್ಲಿ ಚಿರತೆ ಹಾಗೂ ಮುಳ್ಳುಹಂದಿಗೆ ಗಾಯವಾಗಿರುವುದರಿಂದ ಮೈಸೂರಿನ ಕೂರ್ಗಳ್ಳಿ ಪುನರ್ ವಸತಿ ಕೇಂದ್ರಕ್ಕೆ ಚಿಕಿತ್ಸೆಗಾಗಿ ಕಳುಹಿಸಲಾಗಿದೆ.
ಚಿರತೆಯನ್ನು ನೋಡಲು ಬಂದ ಸುತ್ತಮುತ್ತಲಿನ ಗ್ರಾಮಸ್ಥರು ಫೋಟೋ ಹಾಗೂ ಸೆಲ್ಫಿ ತೆಗೆದುಕೊಳ್ಳುತ್ತಿದ್ದುದು ಕಂಡುಬಂತು.
Pavagada Goverment School | ಬಿಸಿಯೂಟದ ಚಿಕ್ಕಿ ತಿಂದು 46 ವಿದ್ಯಾರ್ಥಿಗಳು ಅಸ್ವಸ್ಥ
Shani Amavasye | ನಾಳೆ ಪರಿವರ್ತನ ಯೋಗ: ಈ ರಾಶಿಗಳ ಜನರಿಗೆ ಅದೃಷ್ಟದ ದಿನ
Actor Darshan | ನಟ ದರ್ಶನ್‌ಗೆ ಮತ್ತೆ ಶಾಕ್: ಜಾಮೀನು ಅರ್ಜಿ ವಿಚಾರಣೆ ಡಿ.3ಕ್ಕೆ ಮುಂದೂಡಿದ ಹೈಕೋರ್ಟ್
Big Boss Kannada 11 | ತೆಲುಗಲ್ಲಿ ಭೇಷ್ ಎನಿಸಿಕೊಂಡ ನಟಿ ಶೋಭಾ ಶೆಟ್ಟಿ ಇಲ್ಲೇಕೆ ಹೀಗೆ?
Bengaluru: ದುಬಾರಿ ಅಪಾರ್ಟ್‌ಮೆಂಟ್‌ನ 500ಕ್ಕೂ ಹೆಚ್ಚು ಮಂದಿಗೆ ನಿಗೂಢ ಖಾಯಿಲೆ, ಹೆಚ್ಚುತ್ತಿದೆ ಆತಂಕ