newsics.com
ಬೆಂಗಳೂರು: ಐಟಿ ಸಿಟಿ ಬೆಂಗಳೂರಿನ ಕನಕಪುರ ರಸ್ತೆಯ ಕಗ್ಗಲಿಪುರದಲ್ಲಿರುವ 830 ಅಪಾರ್ಟ್‌ಮೆಂಟ್‌ಗಳ ವಸತಿ ಸಮುಚ್ಚಯದಲ್ಲಿ ಕಳೆದ ಐದು ದಿನಗಳಿಂದ ಅನೇಕ ನಿವಾಸಿಗಳು ನಿಗೂಢ ಕಾಯಿಲೆಯಿಂದ ಬಳಲುತ್ತಿದ್ದಾರೆ.
ಬ್ರಿಗೇಡ್ ಮೆಡೋಸ್ ಪ್ಲುಮೆರಿಯಾ ಅಪಾರ್ಟ್ ಮೆಂಟಿನ ಚಿಕ್ಕ ಮಕ್ಕಳು ಮತ್ತು ಹಿರಿಯ ನಾಗರಿಕರು ಕಾಯಿಲೆಯಿಂದ ಬಳಲುತ್ತಿದ್ದಾರೆ.
262 ಕುಟುಂಬಗಳನ್ನು ಒಳಗೊಂಡ ಕನಿಷ್ಠ 500 ನಿವಾಸಿಗಳು ವಾಂತಿ, ಜ್ವರ ಮತ್ತು ಹೊಟ್ಟೆ ನೋವಿನಿಂದ ಬಳಲುತ್ತಿದ್ದಾರೆ. ಅಪಾರ್ಟ್‌ಮೆಂಟ್ ಸಂಕೀರ್ಣದೊಳಗೆ ಸ್ವಂತ ಬೋರ್ ಇದೆ, ಅದರ ನೀರನ್ನು ನಿವಾಸಿಗಳು ಬಳಕೆ ಮಾಡುತ್ತಿದ್ದಾರೆ.
ರೋಗಿಗಳಿಗೆ ಚಿಕಿತ್ಸೆ ನೀಡಿದ ಸ್ಥಳೀಯ ವೈದ್ಯರು ಇದನ್ನು ಗ್ಯಾಸ್ಟ್ರೋಎಂಟರೈಟಿಸ್ ಎಂದು ಹೇಳುತ್ತಾರೆ. ಪರೀಕ್ಷಿಸಿದ ನೀರಿನ ಮಾದರಿಗಳಿಗೆ ವಿವಿಧ ಪ್ರಯೋಗಾಲಯಗಳು ವಿಭಿನ್ನ ಪ್ರತಿಕ್ರಿಯೆಗಳನ್ನು ನೀಡಿರುವುದರಿಂದ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ.
ಸರ್ಕಾರಿ ಲ್ಯಾಬ್‌ಗೆ ಕಳುಹಿಸಲಾದ ವರದಿಯಲ್ಲಿ ಆರು ಟ್ಯಾಂಕ್‌ಗಳಲ್ಲಿ ಐದರಲ್ಲಿ ನೀರು ಉತ್ತಮವಾಗಿದೆ ಎಂದು ತಿಳಿದುಬಂದಿದೆ. ಒಂದು ಬ್ಲಾಕ್‌ಗೆ ನೀರು ಪೂರೈಸುವ ಒಂದು ಟ್ಯಾಂಕ್ E.coli ನ್ನು ಹೊಂದಿದೆ ಎಂದು ವರದಿಯಾಗಿದೆ. ಈ ಟ್ಯಾಂಕ್‌ನಿಂದ ನೀರು ಸರಬರಾಜು ನಿಲ್ಲಿಸಿ ಸಂಪೂರ್ಣವಾಗಿ ಸ್ವಚ್ಛಗೊಳಿಸಲಾಗಿದೆ ಎಂದರು.
Science Research 31 ಇಂಚು ವಾಲಿದ ಭೂಮಿ, ಇದಕ್ಕೇನು ಕಾರಣ? ಇನ್ನಷ್ಟು ಹೆಚ್ಚಲಿದೆ ಹವಾಮಾನ ವೈಪರೀತ್ಯ