newsics.com
ಬೆಂಗಳೂರು: ತಂದೆಯೊಬ್ಬ 14 ವರ್ಷದ ಮಗನನ್ನೇ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ನಲ್ಲಿ ನಡೆದಿದೆ.
ತೇಜಸ್ (14) ಮೃತ ದುರ್ದೈವಿ ಎಂದು ತಿಳಿದುಬಂದಿದೆ. ರವಿಕುಮಾರ್ ಮಗನನ್ನೇ ಕೊಂದ ತಂದೆ. ಹೌದು, ಕಳೆದ 20 ದಿನಗಳಿಂದ ಮಗ ಶಾಲೆಗೆ ಹೋಗದೆ ಪುಂಡರ ಜೊತೆ ಅಲೆದಡುತ್ತಿದ್ದಂನಂತೆ ಮೊಬೈಲ್ ರಿಪೇರಿ ಮಾಡಿಸಿಕೊಡುವಂತೆ ತಂದೆ ಬಳಿ ಕೇಳಿದ್ದ ಎನ್ನಲಾಗಿದೆ. ಇದರಿಂದ ಕೋಪಗೊಂಡ ತಂದೆ ಕ್ರಿಕೆಟ್ ಬ್ಯಾಟ್ ನಿಂದ ಹೊಡೆದಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ತೇಜಸ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ.
ಇದೇ ವಿಚಾರವಾಗಿ ತಂದೆ-ಮಗನ ನಡುವೆ ಗಲಾಟೆ ಜೋರಾಗಿದ್ದು, ಕೋಪದಬರದಲ್ಲಿ ರವಿಕುಮಾರ್ ಮಗನನ್ನೇ ಕೊಲೆಗೈದಿದ್ದಾನೆ. ಈ ಸಂಬಂಧ ಕುಮರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.