newsics.com
ಗೂಗಲ್ ಒಂದು ರೀತಿಯಲ್ಲಿ ಮೊಬೈಲ್ ಬಳಕೆದಾರರ ಬೆಸ್ಟ್ ಫ್ರೆಂಡ್ ಎನ್ನಬಹುದು. ಉತ್ತಮ ಫಲಿತಾಂಶವನ್ನು ನೀಡುವಂತಹ ಸರ್ಚ್ ಎಂಜಿನ್ ಆಗಿರುವ ಗೂಗಲ್ ಟೆಕ್ ಯುಗದಲ್ಲಿ ಹೊಸ ಸಂಚಲನವನ್ನೇ ಮೂಡಿಸಿದೆ. ಈ ಮಧ್ಯೆ
ಹುಡುಗಿಯರು ಗೂಗಲ್ನಲ್ಲಿ ಏನನ್ನು ಸರ್ಚ್ ಮಾಡುತ್ತಾರೆ ಎನ್ನುವ ಅಂಶ ಬೆಳಕಿಗೆ ಬಂದಿದೆ.
ಭಾರತದಲ್ಲಿ ಇಂಟರ್ನೆಟ್ ಮಹಿಳಾ ಬಳಕೆದಾರರ ಪೈಕಿ ಶೇ.75ರಷ್ಟು ಜನರು 15 ರಿಂದ 34 ವಯಸ್ಸಿನವರಾಗಿದ್ದಾರೆ. ಅದರಲ್ಲಿಯೂ ಯುವತಿಯರು ಏಕಾಂಗಿಯಾಗಿದ್ದ ವೇಳೆ ಗೂಗಲ್ನಲ್ಲಿ ಏನು ಸರ್ಚ್ ಮಾಡ್ತಾರೆ ಎಂಬುದನ್ನು ವರದಿ ಮಾಡಿದೆ.
ಬಾಲ್ಯದಿಂದಲೂ ಯುವತಿಯರು ಮಹತ್ವಾಕಾಂಕ್ಷೆಯನ್ನು ಹೊಂದಿರುತ್ತಾರೆ. ಶೇ.80ರಷ್ಟು ಜನರು ತಾವು ಏನು ಮಾಡಬೇಕು? ಏನು ಓದಬೇಕು? ಭವಿಷ್ಯದಲ್ಲಿ ಯಾವ ಹಂತಕ್ಕೆ ಹೋಗಬೇಕು ಎಂಬ ನಿರ್ಧಿಷ್ಟ ಗುರಿಯನ್ನು ಹೊಂದಿರುತ್ತಾರೆ. ಹೀಗಾಗಿ ತಮ್ಮ ವೃತ್ತಿ ಭವಿಷ್ಯದ ಕುರಿತ ವಿಷಯಗಳನ್ನು ಸರ್ಚ್ ಮಾಡುತ್ತಾರೆ.
ಯುವತಿಯರು ಸೇರಿದಂತೆ ಮಧ್ಯ ವಯಸ್ಕ ಮಹಿಳೆಯರು ಏಕಾಂತದಲ್ಲಿ ರೊಮ್ಯಾಂಟಿಕ್ ಹಾಡು ಮತ್ತು ಸಂಗೀತ ಕೇಳಲು ಇಷ್ಟಪಡುತ್ತಾರೆ. ಗೂಗಲ್ನಲ್ಲಿ ರೊಮ್ಯಾಂಟಿಕ್ ಹಾಡುಗಳನ್ನು ಸದಾ ಹುಡುಕುತ್ತಾರೆ. ಮನೆಯಲ್ಲಿದ್ದಾಗ ಹಾಡುಗಳನ್ನು ಕೇಳುತ್ತಲೇ ಹಲವರು ಕೆಲಸ ಮಾಡುತ್ತಾರೆ.
ಪುರುಷರಿಗಿಂತ ಮಹಿಳೆಯರು ಹೆಚ್ಚು ತಮ್ಮ ಸೌಂದರ್ಯದ ಬಗ್ಗೆ ಆಸಕ್ತಿ ಹೊಂದಿರುತ್ತಾರೆ. ಬೇರೆಯವರಿಗಿಂತ ತಾನು ಹೇಗೆ ಚೆನ್ನಾಗಿ ಕಾಣಬೇಕು ಎಂಬುದರ ಕುರಿತಾಗಿ ಗೂಗಲ್ನಲ್ಲಿ ಸರ್ಚ್ ಮಾಡುತ್ತಿರುತ್ತಾರೆ. ಫ್ಯಾಶನ್, ನೇಲ್ ಆರ್ಟ್, ಹೇರ್ ಕೇರ್, ಡಯಟಿಂಗ್ ಟಿಪ್ಸ್, ಟ್ರೆಂಡ್, ಸೌಂದರ್ಯ ಚಿಕಿತ್ಸೆ, ಮನೆಮಮದ್ದುಗಳ ಬಗ್ಗೆಯೂ ಗೂಗಲ್ನಲ್ಲಿ ಹುಡುಕಾಡುತ್ತಿರುತ್ತಾರೆ.
ಶಾಪಿಂಗ್ ಮಾಡೋದು ಅಂದ್ರೆ ಮಹಿಳೆಯರಿಗೆ ಅಚ್ಚುಮೆಚ್ಚು. ಆನ್ಲೈನ್ನಲ್ಲಿ ಯಾವುದಾದ್ರೂ ಟ್ರೆಂಡ್ ಬಂದಿದ್ಯಾ? ಯಾವ ಪ್ಲಾಟ್ಫಾರಂನಲ್ಲಿ ಡಿಸ್ಕೌಂಟ್ ಸಿಗುತ್ತೆ? ತಮ್ಮ ಬಜೆಟ್ನಲ್ಲಿ ಫ್ಯಾಷನ್ ಬಟ್ಟೆ ಎಲ್ಲಿ ಸಿಗುತ್ತೆ ಎಂಬುದನ್ನು ನೋಡುತ್ತಿರುತ್ತಾರೆ.
ಮೆಹಂದಿ ಹಾಕಿಕೊಳ್ಳೋದು ಅಂದ್ರೆ ಯುವತಿಯರಿಗೆ ಬಲು ಇಷ್ಟ. ತಮ್ಮ ಅಂಗೈ ಯಾವಾಗಲೂ ಕಲರ್ಫುಲ್ ಆಗಿರಬೇಕು ಎಂದು ಬಯಸುತ್ತಾರೆ. ಅದಕ್ಕಾಗಿ ಗೂಗಲ್ನಲ್ಲಿ ಹೊಸ ಹೊಸ ಮೆಹಂದಿ ಡಿಸೈನ್ಗಳನ್ನು ಹುಡುಕುತ್ತಾರೆ.