newsics.com
ಬೆಂಗಳೂರು : ʼವೀರಲೋಕʼದ ವತಿಯಿಂದ ಎರಡನೇ ವರ್ಷದ ʼಪುಸ್ತಕ ಸಂತೆʼ ನವೆಂಬರ್ 15, 16 ಹಾಗೂ 17ರಂದು ಬೆಂಗಳೂರಿನ ಜಯನಗರದ ಶಾಲಿನಿ ಮೈದಾನದಲ್ಲಿ ನಡೆಯಲಿದೆ.
ನೂರಾರು ಲೇಖಕರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಸಮಾರಂಭದಲ್ಲಿ ಹತ್ತಾರು ಕೃತಿಗಳು ಬಿಡುಗಡೆಗೊಳ್ಳಲಿವೆ ಎಂದು ವೀರಲೋಕದ ರೂವಾರಿ ವೀರಕಪುತ್ರ ಶ್ರೀನಿವಾಸ್ ತಿಳಿಸಿದ್ದಾರೆ.
ಕನ್ನಡ ಪುಸ್ತಕಗಳು ಎಲ್ಲೆಂದರಲ್ಲಿ ಸಿಗಬೇಕು, ಕನ್ನಡಿಗರು ಇರುವ ಕಡೆಯೇ ಪುಸ್ತಕಗಳು ಸಿಗಬೇಕು. ಕನ್ನಡ ಪುಸ್ತಕಗಳು ಕನ್ನಡಿಗರ ಬದುಕಿನ ಭಾಗವಾಗಬೇಕು ಎಂಬ ಆಶಯಗಳೊಂದಿಗೆ ವೀರಲೋಕ ಹಲವು ಯೋಜನೆಗಳಲ್ಲಿ ತೊಡಗಿಸಿಕೊಂಡಿದೆ.
ನೂರಾರು ಪ್ರಕಾಶಕರು ಇಲ್ಲಿ ಸ್ಟಾಲ್‌ಗಳನ್ನು ಹಾಕುತ್ತಿದ್ದಾರೆ. ಕರ್ನಾಟಕ ಸರ್ಕಾರ ಸಚಿವಾಲಯ ಕ್ಲಬ್ ಪುಸ್ತಕ ಸಂತೆಯಲ್ಲಿ ಪಾಲ್ಗೊಳ್ಳುತ್ತಿದೆ. ಜೊತೆಗೆ ಕನ್ನಡ ನಾಡಿನ ಅಷ್ಟೂ ಸರ್ಕಾರಿ ನೌಕರರ ಸಂಘ ಸಂಸ್ಥೆಗಳನ್ನೂ ಭಾಗವಹಿಸುವಂತೆ ಕೋರಲಾಗಿದೆ. ಓದುಗರು ಹಾಗೂ ಲೇಖಕರು ಮುಖಾಮುಖಿಯಾಗಿಸುವುದು ಈ ಪ್ರಯೋಗದ ಉದ್ದೇಶ.