newsics.com
ಮಂಡ್ಯ: ದೇವಸ್ಥಾನದ ಗೇಟ್ ಬಿದ್ದು ಮಗು ಸಾವನ್ನಪ್ಪಿರುವ ಘಟನೆ ಮಂಡ್ಯದ ಹುಂಜನಕೆರೆ ಗ್ರಾಮದ ಚನ್ನಕೇಶವ ದೇಗುಲದಲ್ಲಿ ನಡೆದಿದೆ.
ಹೆಚ್.ಎಸ್.ಜಿಷ್ಣು (5) ಮೃತ ಮಗು ಎಂದು ತಿಳಿದು ಬಂದಿದೆ. ನಿನ್ನೆ ಕಾರ್ತಿಕ ಮಾಸದ ಸೋಮವಾರ ಹಿನ್ನೆಲೆ ಕುಟುಂಬದೊಂದಿಗೆ ಮಗು ದೇಗುಲಕ್ಕೆ ತೆರಳಿತ್ತು. ಈ ವೇಳೆ ದೇವಸ್ಥಾನದ ಗೇಟ್ ಬಿದ್ದು ತೀವ್ರ ಗಾಯವಾಗಿದ್ದು, ತಕ್ಷಣ ಪೋಷಕರು ಮಂಡ್ಯ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ, ಇಂದು ಚಿಕಿತ್ಸೆ ಫಲಕಾರಿಯಾಗದೆ ಮಗು ಸಾವನ್ನಪ್ಪಿದೆ. ಇನ್ನು ಈ ಘಟನೆ ಸಂಬಂಧ ಅರಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚನ್ನಕೇಶವ ದೇಗುಲ ಗೇಟ್ ಮುರಿದು ಬಹಳ ದಿನಗಳಾದ್ರೂ ದುರಸ್ಥಿ ಮಾಡದೆ ಮುಜರಾಯಿ ಇಲಾಖೆ ನಿರ್ಲಕ್ಷ್ಯ ತೋರಿದೆ. ಹೀಗಾಗಿ ಮುಜರಾಯಿ ಇಲಾಖೆ ವಿರುದ್ದ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.