newsics.com
ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರಿಗೆ ಕೊಲೆ ಬೆದರಿಕೆ ಬಂದಿದೆ ಎಂದು ಮುಂಬೈನ ಬಾಂದ್ರಾ ಪೊಲೀಸರು ತಿಳಿಸಿದ್ದಾರೆ.
ಛತ್ತೀಸ್ಗಢದ ರಾಯ್ಪುರದ ಫೈಜಾನ್ ಎಂಬ ವ್ಯಕ್ತಿಯ ಹೆಸರಿನಲ್ಲಿ ನೋಂದಾಯಿಸಲಾದ ಸಂಖ್ಯೆಯಿಂದ ಈ ಬೆದರಿಕೆ ಕರೆ ಬಂದಿದೆ.
ಶಾರುಖ್ ಖಾನ್ ತಂಡವು ಬಾಂದ್ರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ಶಾರುಖ್ ಖಾನ್ ಅವರ ನಿರ್ಮಾಣ ಕಂಪನಿ ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ಗೆ ಈ ಬೆದರಿಕೆ ಕರೆ ಮಾಡಲಾಗಿದೆ.
ಬಾಲಿವುಡ್‌ನ ಇನ್ನೋರ್ವ ಖ್ಯಾತ ನಟ ಸಲ್ಮಾನ್ ಖಾನ್ ಅವರಿಗೂ ಬಿಷ್ಣೋಯಿ ಗ್ಯಾಂಗ್ ಸೇರಿ ಹಲವು ಕೊಲೆ ಬೆದರಿಕೆ ಕರೆಗಳು ದಾಖಲಾಗಿವೆ.
ಕನ್ನಡಿಯೆದುರು ನಿಂತು ತನಗೆ ತಾನೇ ಪೂಜೆ ಮಾಡಿಕೊಂಡ ಚೈತ್ರಾ ಕುಂದಾಪುರ! ಅಚ್ಚರಿ ಮೂಡಿಸಿದ ಚೈತ್ರಾ ವರ್ತನೆ
ನನಗೆ ಆರೋಗ್ಯ ಸಮಸ್ಯೆ ಇರೋದು ನಿಜ, ಸದ್ಯದಲ್ಲೇ ಸರಿಯಾಗತ್ತೆ: ಹಿರಿಯ ನಟ ಶಿವರಾಜ್ ಕುಮಾರ್