newsics.com
ಬೆಂಗಳೂರು: ನಗರದ ಜಯದೇವ ಆಸ್ಪತ್ರೆಯ ಮಹಿಳಾ ಶೌಚಾಲಯದ ಗೋಡೆಯ ಮೇಲೆ ರಹಸ್ಯವಾಗಿ ಮೊಬೈಲ್ ಇಟ್ಟು ಕ್ಯಾಮರಾ ಆನ್ ಮಾಡಿ ವಿಡಿಯೋ ಸೆರೆ ಹಿಡಿಯುತ್ತಿದ್ದ ಆರೋಪಿಯನ್ನು ತಿಲಕ್ ನಗರ ಠಾಣೆ ಪೋಲೀಸರು ಬಂಧಿಸಿದ್ದಾರೆ.
ಕಲಬುರಗಿ ಮೂಲದ ಯಲ್ಲಾಲಿಂಗ(28) ಬಂಧಿತ ಆರೋಪಿ. ಅ.31ರಂದು ಬನ್ನೇರುಘಟ್ಟ ಮುಖ್ಯ ರಸ್ತೆಯ ಜಯದೇವ ಆಸ್ಪತ್ರೆಯ ನೆಲಮಹಡಿಯ ಮಹಿಳಾ ಶೌಚಾಲಯದ ಗೋಡೆಯ ಮೇಲೆ ರಹಸ್ಯವಾಗಿ ಮೊಬೈಲ್ ಇಟ್ಟು ಕ್ಯಾಮರಾ ಆನ್ ಮಾಡಿ ಮಹಿಳೆಯ ವಿಡಿಯೋ ರೆಕಾರ್ಡ್ ಮಾಡುತ್ತಿದ್ದ.
ಶೌಚಾಲಯಕ್ಕೆ ಬಂದಿದ್ದ ಮಹಿಳಾ ಸಿಬ್ಬಂದಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ವಾರ್ಡ್ ಹೆಲ್ಪರ್ ಆಗಿ ಕೆಲಸ ಮಾಡುತ್ತಿರುವ ಮಹಿಳೆ ಶೌಚಾಲಯಕ್ಕೆ ತೆರಳಿ ವಾಪಸ್ ಬರುವಾಗ ಗೋಡೆಯ ಮೇಲೆ ಮೊಬೈಲ್ ಕಾಣಿಸಿದೆ. ಅದನ್ನು ಪರಿಶೀಲಿಸಿದಾಗ ತನ್ನದೇ ವಿಡಿಯೋ ಸೆರೆಯಾಗಿರುವುದು ಗೊತ್ತಾಗಿದೆ. ಅದನ್ನು ತೆಗೆದುಕೊಂಡು ಹೊರಗೆ ಬಂದಾಗ ನನ್ನ ಮೊಬೈಲ್ ಕೊಡು ಎಂದು ಆರೋಪಿ ಕೇಳಿದ್ದಾನೆ. ಮೊಬೈಲ್ ಕೊಡುವುದಿಲ್ಲ ಎಂದು ಮಹಿಳಾ ಸಿಬ್ಬಂದಿ ಜೋರಾಗಿ ಕಿರುಚಿದ್ದು, ಅಲ್ಲಿದ್ದ ಜನ ಓಡಿ ಬಂದು ಆತನನ್ನು ಹಿಡಿದು ಥಳಿಸಿದ ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ.
ಮುಡಾ ಹಗರಣ: ಸಿದ್ದರಾಮಯ್ಯ ಲೋಕಾ ವಿಚಾರಣೆ ಅಂತ್ಯ, ಸತತ ಎರಡು ಗಂಟೆ ವಿಚಾರಣೆ
ಲಘು ವಾಹನ ಡಿಎಲ್ ಉಳ್ಳವರು 7500 ಕೆಜಿಗಿಂತ ಕಡಿಮೆ ತೂಕದ ವಾಹನವನ್ನೂ ಓಡಿಸಬಹುದು: ಸುಪ್ರೀಂ ತೀರ್ಪು