newsics.com
ರೇಣುಕಾಸ್ವಾಮಿ ಕೊಲೆ ಆರೋಪ ಪ್ರಕರಣದಲ್ಲಿ ಜೈಲು ಸೇರಿದ್ದ ನಟ ದರ್ಶನ್ ಮಧ್ಯಂತ ಜಾಮೀನು ಪಡೆದು ಹೊರಗೆ ಬಂದಿದ್ದಾರೆ. ಆದರೆ ನಟಿ ಪವಿತ್ರಾ ಗೌಡ ಜೈಲಿನಲ್ಲಿದ್ದು, ಅವರಿಗೆ ಇನ್ನು ಜಾಮೀನು ಸಿಕ್ಕಿಲ್ಲ. ಈ ಮಧ್ಯೆ ದರ್ಶನ್ ಅವರಿಗೆ ಜಾಮೀನು ಸಿಕ್ಕಿದ ವಿಷಯ ತಿಳಿದು ಪವಿತ್ರಾ ಗೌಡ ಖುಷಿಯಾಗಿದ್ದಾರೆ ಎನ್ನಲಾಗಿದೆ.
ಹೌದು, ತನ್ನಿಂದ ನಟ ದರ್ಶನ್ ಜೈಲು ಸೇರಿದ ಬಗ್ಗೆ ಪವಿತ್ರಾಗೆ ಬೇಸರವಿತ್ತು ಎನ್ನಲಾಗಿದ್ದು ನಟ ದರ್ಶನ್ ಗೆ ಬೇಲ್ ಸಿಕ್ಕ ಹಿನ್ನೆಲೆ ಪವಿತ್ರಾ ಕೊಂಚ ನಿರಾಳರಾಗಿದ್ದರಂತೆ. ಆದರೆ ಪವಿತ್ರಾ ಗೌಡ ಅವರಿಗೆ ಜಾಮೀನು ನಿರಾಕರಣೆಯಾಗಿದೆ. ಹಾಗಾಗಿ ನಟಿ ಪರಪ್ಪನ ಅಗ್ರಹಾರದಲ್ಲಿಯೇ ಇದ್ದಾರೆ.
ಅರೆಸ್ಟ್ ಆದ ಆರಂಭದ ದಿನಗಳಲ್ಲಿ ಪವಿತ್ರಾ ಗೌಡ ಅವರು ತನಗೆ ಜಾಮೀನು ಸಿಗುತ್ತೋ ಇಲ್ವೋ ಎಂಬ ಆತಂಕದಲ್ಲಿ ಇದ್ದರಂತೆ. ಆದರೆ ಈಗ ಪವಿತ್ರಾ ಗೌಡ ಅವರು ಕೊಂಚ ನಿರಾಳರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಮುಖ್ಯವಾಗಿ ದರ್ಶನ್ ಹೊರಗೆ ಬಂದ ಕಾರಣ ತಾನೂ ಹೊರಗೆ ಬರಬಹುದು ಎನ್ನುವ ಒಂದು ಭರವಸೆ ಪವಿತ್ರಾ ಗೌಡ ಅವರಲ್ಲಿ ಮೂಡಿದೆ ಎಂದು ಹೇಳಲಾಗುತ್ತಿದೆ.
ದರ್ಶನ್ ಗೆ ಮಧ್ಯಂತರ ಜಾಮೀನು ಮಂಜೂರು ಹಿನ್ನೆಲೆ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪವಿತ್ರಾಗೆ ಸಂತಸಗೊಂಡಿದ್ದಾರೆ ಎನ್ನಲಾಗಿದೆ. ಪರಪ್ಪನ ಅಗ್ರಹಾರ ಜೈಲಿನ ಮಹಿಳಾ ಬ್ಯಾರಕ್ನಲ್ಲಿರುವ ಪವಿತ್ರಾ ದರ್ಶನ್ ಗೆ ಬೇಲ್ ಸಿಕ್ಕ ಹಿನ್ನೆಲೆ ತನಗೂ ಬೇಲ್ ಸಿಗುವ ಭರವಸೆಯಲ್ಲಿದ್ದಾರೆ. ಸದ್ಯ ಅದರ ಬಗ್ಗೆಯೇ ಯೋಚಿಸುತ್ತಿದ್ದಾರೆ ಎನ್ನಲಾಗಿದೆ.