newsics.com
ಚಿಕ್ಕಬಳ್ಳಾಪುರ: ನೀರಿನ ಹೊಂಡದಲ್ಲಿ ಬಿದ್ದು ಮೂವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಕಂಬತ್ತನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೃತರನ್ನು 27 ವರ್ಷದ ರಂಜಿತ್, 21 ವರ್ಷದ ಅಭಿಲಾಷ್ ಹಾಗೂ 24 ವರ್ಷದ ರಮ್ಯ ಎಂದು ಗುರುತಿಸಲಾಗಿದೆ. ಯಲಹಂಕ ನಿವಾಸಿ ಸುಭ್ರಮಣಿ ಅವರ ಮಗ ರಂಜನ್ ಕಮ್ಮತ್ತನಹಳ್ಳಿ ಮೂಲದ ಬೆಂಗಳೂರಿನ ಕಿತ್ತಗಾನಹಳ್ಳಿ ನಿವಾಸಿ ಲಕ್ಷ್ಮೀನಾರಾಯಣಪ್ಪ ಅವರ ಮಗಲ ಅಭಿಲಾಷ್, ಬೆಂಗಳೂರಿನ ಕಮ್ಮತ್ತನಹಳ್ಳಿ ನಿವಾಸಿ ನಾಗಭೂಷಣ್ ಅವರ ಪುತ್ರಿ ರಮ್ಯಾ ಎಂದು ಮೃತರನ್ನು ಗುರುತಿಸಲಾಗಿದೆ.
ಹಬ್ಬಕ್ಕೆ ಊರಿಗೆ ಅಂತ ಬಂದಿದ್ದ ಯುವತಿ ಯುವಕರು ಈಜಲು ಹೋಗಿದ್ದಾರೆ. ಈ ವೇಳೆ ಈಜು ಬಾರದೆ ನೀರಿನಲ್ಲಿ ಮುಳುಗಿ ದಾರುಣವಾಗಿ ಸಾವನ್ನಪ್ಪಿದ್ದಾರೆ.