newsics.com
ಬೆಂಗಳೂರು : ದೀಪಾವಳಿ ಹಬ್ಬಕ್ಕೆ ಎಲ್ಲರೂ ಪಟಾಕಿ ಸುಟ್ಟು ಸಂಭ್ರಮಿಸಿದರೆ ಇಲ್ಲೊಬ್ಬ ವ್ಯಕ್ತಿ 500 ಮತ್ತು 100ರ ನೋಟುಗಳನ್ನು ಸುಟ್ಟು ಹಾಕಿದ್ದಾನೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
kumardineshbhai049 ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದ್ದು, ಸದ್ಯ ಎಲ್ಲೆಡೆ ವೈರಲ್ ಆಗುತ್ತಿದೆ. ವಿಡಿಯೋ ಹಂಚಿಕೊಂಡ ಕೇವಲ 7 ದಿನಗಳಲ್ಲಿ 2.8 ಮಿಲಿಯನ್ ಅಂದರೆ 2ಕೋಟಿಗೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ.
ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಸಾಕಷ್ಟು ನೆಟ್ಟಿಗರು ಬಗೆಬಗೆಯಾಗಿ ಕಾಮೆಂಟ್ ಮಾಡಿದ್ದಾರೆ. ಒಬ್ಬರು “ಹಣ ಬೇಡವಾದರೆ ಬಡವರಿಗೆ ಕೊಡಿ” ಎಂದು ಕಾಮೆಂಟ್ನಲ್ಲಿ ಬರೆದುಕೊಂಡಿದ್ದಾರೆ.
https://www.instagram.com/reel/DBnOTZrIM8d/?igsh=Y2UybmUxZjZib2Ft