Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಜ್ಯೋತಿಷ್ಯ > ನೀವು ಹುಟ್ಟಿದ ತಿಂಗಳು ಯಾವುದು? ನೀವೆಂಥವರು? ನಿಮ್ಮ ಸ್ವಭಾವ ಏನು?
ಅನಾವರಣಜ್ಯೋತಿಷ್ಯಪ್ರಮುಖಲೈಫ್‌ಸ್ಟೈಲ್

ನೀವು ಹುಟ್ಟಿದ ತಿಂಗಳು ಯಾವುದು? ನೀವೆಂಥವರು? ನಿಮ್ಮ ಸ್ವಭಾವ ಏನು?

Share
3 Min Read
SHARE

newsics.com

ಹುಟ್ಟಿದ ದಿನವು ನಮ್ಮ ಜೀವನದಲ್ಲಿ ಭಾರೀ ಪ್ರಭಾವ ಬೀರುತ್ತದೆ. ನಮ್ಮ ನಕ್ಷತ್ರ, ರಾಶಿ, ಗೋತ್ರ ಎಲ್ಲವೂ ನಮ್ಮ‌ ಸ್ವಭಾವವನ್ನು ನಿರ್ಧರಿಸುತ್ತವೆ. ಇವು ನಾವು ಸಾಯುವವರೆಗೂ ನಮ್ಮ ಮೇಲೆ ಪರಿಣಾಮ ಬೀರುತ್ತಲೇ ಇರುತ್ತವೆ.

ಸಂಖ್ಯಾಶಾಸ್ತ್ರದಲ್ಲೂ ನಮ್ಮ ಹುಟ್ಟಿದ ದಿನ, ತಿಂಗಳು, ವರ್ಷ ಎಲ್ಲವೂ ಬಹಳ ಮುಖ್ಯವಾಗಿರುತ್ತದೆ. ನಮ್ಮ ಮುಂದಿನ ಜೀವನ ಆರ್ಥಿಕ ಸ್ಥಿತಿ, ಕೌಟುಂಬಿಕ ಜೀವನ ಹೀಗೆ ಎಲ್ಲವೂ ಇದರಿಂದ ನಿರ್ಧಾರವಾಗುತ್ತದೆ.

ಹಾಗಾದ್ರೆ ನಿಮ್ಮ ಜನ್ಮ ತಿಂಗಳು ನಿಮ್ಮ ಗುಣಗಳ ಬಗ್ಗೆ ಏನು ಹೇಳುತ್ತದೆ. ನೀವು ಹುಟ್ಟಿದ ತಿಂಗಳಿಗೂ ನಿಮ್ಮ ಗುಣಗಳಿಗೂ ಇರುವ ಸಂಬಂಧವೇನು? ನೀವು ಯಾವ ಗುಪ್ತ ಗುಣಗಳನ್ನು ಹೊಂದಿದ್ದೀರಿ?

ಜನವರಿ

ವರ್ಷದ ಮೊದಲ ತಿಂಗಳಾಗಿರುವ ಜನವರಿಯಲ್ಲಿ ನೀವು ಜನಿಸಿದ್ದರೆ ನೀವು ಯಾವುದಕ್ಕೂ ಹೆದರಿಕೊಳ್ಳದ ಗುಣಗಳನ್ನು ಹೊಂದಿರುತ್ತೀರಿ. ನೀವು ಒಮ್ಮೆ ತೆಗೆದುಕೊಂಡ ನಿರ್ಧಾರವನ್ನು ಹಾಗೂ ಅಭಿಪ್ರಾಯವನ್ನು ಬೇರೆಯರ ಮಾತು ಕೇಳಿ ಬದಲಾಯಿಸಿಕೊಳ್ಳುವುದಿಲ್ಲ. ನಾಯಕತ್ವ ಗುಣಗಳನ್ನು ನೀವು ಹೊಂದಿರುತ್ತೀರಿ. ಎಲ್ಲಾ ಹೋರಾಟಗಳಿಗೂ ನೀವು ಸಿದ್ಧರಿರುತ್ತೀರಿ.

ಫೆಬ್ರವರಿ

ಫೆಬ್ರವರಿ ತಿಂಗಳಲ್ಲಿ ನೀವು ಜನಿಸಿದ್ದರೆ ಸ್ವತಂತ್ರ ಜೀವನದ ಕನಸು ಕಾಣುವವರಾಗಿರುತ್ತೀರಿ. ಸಾಹಸಮಯ ಜೀವನ ಇಷ್ಟಪಡುತ್ತೀರಿ. ನೀವು ಹೆಚ್ಚು ನಿಷ್ಠಾವಂತರು ಹಾಗೆ ನಿಮ್ಮನ್ನು ಇಷ್ಟಪಡುವವರನ್ನು, ಕುಟುಂಬದವರ ಮೇಲೆ ಯಾವಾಗಲೂ ಕಾಳಜಿ ಹೊಂದಿರುತ್ತೀರಿ. ನಿಮಗೆ ಉದ್ಯೋಗ ಕ್ಷೇತ್ರದಲ್ಲಿ ಯಾವಾಗಲೂ ಯಶಸ್ಸು ಸಿಗುತ್ತಿರುತ್ತದೆ.

ಮಾರ್ಚ್

ಮಾರ್ಚ್‌ನಲ್ಲಿ ಜನಿಸಿದ ನಿಮಗೆ ತುಂಬಾ ತಾಳ್ಮೆ, ನಾಚಿಕೆ, ಕಲಾತ್ಮಕ ಗುಣಗಳನ್ನು ಹೊಂದಿರುತ್ತೀರಿ. ಹೆಚ್ಚು ಸ್ವಾಭಿಮಾನಿಗಳು, ಬುದ್ಧಿವಂತರು. ಭಾವನೆಗಳಿಗೆ ಹೆಚ್ಚು ಒತ್ತು ನೀಡುವ ನೀವು ಎಲ್ಲರಿಗೂ ಒಳಿತು ಬಯಸುವವರಾಗಿರುತ್ತೀರಿ. ಶಾಂತಿ ಪ್ರಿಯರು, ಸಹಾನುಭೂತಿ ಹೊಂದಿರುವವಾಗಿರುತ್ತೀರಿ. ನಿಮ್ಮನ್ನು ನೀವೇ ಹೆಚ್ಚು ಇಷ್ಟಪಡುತ್ತೀರಿ.

ಏಪ್ರಿಲ್

ಏಪ್ರಿಲ್ ತಿಂಗಳಲ್ಲಿ ಜನಿಸಿದ್ದರೆ ನೀವು ಹೆಚ್ಚು ಬಲಶಾಲಿಗಳು. ನೀವು ಮೇಲ್ನೋಟಕ್ಕೆ ಕಾಣುವುದಕ್ಕಿಂತ ತುಂಬಾ ಹೆಚ್ಚು ದೃಢಶಾಲಿಗಳು, ನಿಮ್ಮ ಮನೋಬಲದಿಂದ ಯಾವ ವಿಚಾರವನ್ನು ಬೇಕಾದರೂ ಜಯಿಸುವ ಮನೋಭಾವದವರು. ನೀವು ಬೇರೆಯವರ ಬಗ್ಗೆ ಹೆಚ್ಚು ಆಲೋಚಿಸುವುದಿಲ್ಲ. ನೀವು ಎಂತಹ ರಿಸ್ಕ್ ಬೇಕಾದರೂ ತೆಗೆದುಕೊಳ್ಳಲು ಸಿದ್ಧರಿರುವ ಮಂದಿಯಾಗಿರುತ್ತೀರಿ.

ಮೇ

ಮೇ ತಿಂಗಳಲ್ಲಿ ಜನಿಸಿದ ನಿಮಗೆ ಕಲಾತ್ಮಕ ವಿಚಾರಗಳಲ್ಲಿ ಹೆಚ್ಚಿನ ಆಸಕ್ತಿ ಇರಲಿದೆ. ನಿಮಗೆ ಹೆಚ್ಚಿನ ಮಂದಿ ಸ್ನೇಹಿತರ ಬಳಗವೇ ಇರಲಿದೆ. ನೀವು ಯಾವಾಗಲೂ ಏನಾದರೂ ಕೆಲಸ ಮಾಡುತ್ತಲೇ ಇರಬೇಕು ಎಂಬ ವರ್ಗಕ್ಕೆ ಸೇರಿದವರು. ನೀವು ಕಷ್ಟದ ಸಮಯದಲ್ಲೂ ಆತ್ಮಸ್ಥೈರ್ಯ ಕಳೆದುಕೊಳ್ಳದ ಮಂದಿಯಾಗಿರುತ್ತೀರಿ.

ಜೂನ್

ಜೂನ್‌ನಲ್ಲಿ ಜನಿಸಿದ ನೀವು ತುಂಬಾ ಭಾವನಾತ್ಮಕ ಜೀವಿಗಳಾಗಿರುತ್ತೀರಿ. ಬೇರೆಯವರಿಗೆ ನೋವಾಗುವಂತೆ ನಡೆದುಕೊಳ್ಳದ ಮನೋಭಾವದವರು. ಯಾರಿಗಾದರೂ ಕಷ್ಟ ಎಂದರೆ ಅವರ ಸಹಾಯಕ್ಕೆ ಮೊದಲು ಬರುವ ವ್ಯಕ್ತಿಗಳಾಗಿರುತ್ತೀರಿ. ಎಲ್ಲ ಸಮಯದಲ್ಲೂ ನೀವು ಧನಾತ್ಮಕ ವಿಚಾರಗಳ ಕುರಿತು ಯೋಚಿಸುತ್ತೀರಿ.

ಜುಲೈ

ನೀವು ಜುಲೈನಲ್ಲಿ ಜನಿಸಿದವರಾಗಿದ್ದರೆ ಬಹುಬೇಗ ಕೋಪಗೊಂಡರೂ ಅಷ್ಟೇ ಬೇಗ ಶಾಂತರಾಗಿ ಎಲ್ಲವನ್ನೂ ನಿಭಾಯಿಸುವ ಗುಣ ಹೊಂದಿದವರಾಗಿರುತ್ತೀರಿ. ನಿಮ್ಮ ಕುಟುಂಬಕ್ಕಾಗಿ ನೀವು ಯಾವುದೇ ರೀತಿಯ ಕಷ್ಟಗಳನ್ನೂ ಎದುರಿಸುವ ಮನಸ್ಸಿನವರು. ಬಹುಬೇಗ ಎಲ್ಲಾ ವಿಚಾರಗಳನ್ನು ಕಲಿಯುವವರು.

ಆಗಸ್ಟ್

ಆಗಸ್ಟ್‌ನಲ್ಲಿ ಜನಿಸಿದ್ದರೆ ನೀವು ಎಲ್ಲರನ್ನೂ ಪ್ರೀತಿಸುವ ಗುಣ ಹೊಂದಿರುವವರು. ಅಧ್ಯಾತ್ಮದ ಕಡೆಗೆ ಹೆಚ್ಚು ಒಲವು ಹೊಂದಿರುವವರು. ಕಷ್ಟಪಟ್ಟು ದುಡಿಯುವ ವರ್ಗಕ್ಕೆ ಸೇರಿದ ವ್ಯಕ್ತಿ. ನಿಮ್ಮಲ್ಲಿ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳುವ ಗುಣ ಹೊಂದಿರುತ್ತೀರಿ. ಹಿರಿಯರಿಗೆ, ಪ್ರೀತಿಪಾತ್ರರಲ್ಲಿ ನೀವು ವಿನಯದಿಂದ ನಡೆದುಕೊಳ್ಳುವ ಗುಣ ಹೊಂದಿದ್ದೀರಿ.

ಸೆಪ್ಟೆಂಬರ್

ಸೆಪ್ಟೆಂಬರ್ ತಿಂಗಳಲ್ಲಿ ಜನಿಸಿದ್ದರೆ ನಿಮ್ಮ ಆಲೋಚನೆಗಳನ್ನು ನೀವು ದೃಢವಾಗಿ ನಂಬುವವರಾಗಿರುತ್ತೀರಿ. ಬೇರೆಯವರ ಮಾತಿಗಿಂತ ನಿಮ್ಮ ಮೇಲೆ ನಿಮಗೇ ನಂಬಿಕೆ ಹೆಚ್ಚಾಗಿರುತ್ತದೆ. ನೀವು ಮಾಡುವ ಕೆಲಸದಲ್ಲಿ ನಿಮಗೆ ನಂಬಿಕೆ ಇರಲಿದೆ. ನಿಮಗೆ ನಾಯಕತ್ವದ ಗುಣವಿರುತ್ತದೆ.

ಅಕ್ಟೋಬರ್

ಅಕ್ಟೋಬರ್‌ನಲ್ಲಿ ಜನಿಸಿದ ನೀವು ಹೆಚ್ಚು ಪ್ರಾಮಾಣಿಕರು, ಬುದ್ಧಿವಂತರು, ನಿಮ್ಮ ಗುರಿ ಕಡೆಗೆ ನೀವು ಯಾವಾಗಲು ಯೋಚಿಸುವವರು. ನಿಮ್ಮೆದುರು ವಾದ ಮಾಡುವುದು ಬಹಳ ಕಷ್ಟ. ಹೆಚ್ಚು ಹೆಚ್ಚು ವಿಚಾರಗಳನ್ನು ತಿಳಿಯಲು ನೀವು ಯಾವಾಗಲು ಮುಂದಾಗುತ್ತೀರಿ. ಸಾಹಿತ್ಯ ಪ್ರೇಮಿಗಳಾಗಿರುತ್ತೀರಿ.

ನವೆಂಬರ್

ನವೆಂಬರ್‌ನಲ್ಲಿ ಜನಿಸಿದ‌ ನೀವು ದಾನ ಧರ್ಮದಲ್ಲಿ ಹೆಚ್ಚು ನಂಬಿಕೆ ಇಟ್ಟವರು. ಧೈರ್ಯಶಾಲಿಗಳು, ಸಮಾಜಮುಖಿ ಕಾರ್ಯದಲ್ಲಿ ನಂಬಿಕೆ ಇಟ್ಟವರು. ಯಾರನ್ನಾದರೂ ನೀವು ಒಮ್ಮೆ ನಂಬಿದರೆ ಕುರುಡಾಗಿ ಅವರನ್ನೇ ಹಿಂಬಾಲಿಸುವವರು. ನಿಮ್ಮ ಕುಟುಂಬಕ್ಕಾಗಿ ನೀವು ಯಾವುದೇ ಹಂತದಲ್ಲಿ ಕೆಲಸ ಮಾಡಲು ತಯಾರಿರುವವರು.

ಡಿಸೆಂಬರ್

ಡಿಸೆಂಬರ್ ತಿಂಗಳಲ್ಲಿ ಜನಿಸಿದ ನಿಮ್ಮ ಉದ್ಯೋಗ ಕ್ಷೇತ್ರ ಹಾಗೂ ಹಣಕಾಸು ಸ್ಥಿತಿಯ ಬಗ್ಗೆ ನೀವು ಹೆಚ್ಚು ತಲೆಕೆಡಿಸಿಕೊಳ್ಳುವವರಲ್ಲ. ನೀವು ಯಾವುದೇ ವಿಚಾರದಲ್ಲಿ ಮಾತನಾಡಲು, ಕೆಲಸ ಮಾಡಲೂ ಹಿಂಜರಿಯುವವರಲ್ಲ. ನಿಮ್ಮ ಪ್ರೀತಿ ಉಳಿಸಿಕೊಳ್ಳಲು ಎಂತಹ ರಿಸ್ಕ್ ಆದರೂ ತೆಗೆದುಕೊಳ್ಳುತ್ತೀರಿ. ನಿಮ್ಮಲ್ಲಿ ದೃಢಸಂಕಲ್ಪದ ಗುಣ ಇರುತ್ತದೆ. ಬೇರೆಯವರಿಗೆ ನೀವು ಸಹಾಯ ಮಾಡಲು ಯಾವಾಗಲೂ ಮುಂದಿರುತ್ತೀರಿ.

ಮೊಬೈಲ್‌ನಲ್ಲಿ ಹೀಗೆ ಮಾಡಿ, ನಿಮ್ಮ ಗೌಪ್ಯತೆ ಕಾಪಾಡಿಕೊಳ್ಳಿ

ಮಲಗುವಾಗಲಾದರೂ ಮೊಬೈಲ್‌‌ನಿಂದ ದೂರವಿರಿ, ಇಲ್ಲದಿದ್ದರೆ ನಿಮಗೆ ಹೀಗೆಲ್ಲ ಅಪಾಯವಾಗಬಹುದು…

ಯುವಕರನ್ನು ಬೆಚ್ಚಿ ಬೀಳಿಸುವ ಬ್ರೈನ್ ಸ್ಟ್ರೋಕ್! ಏನು ಮಾಡಬೇಕು?

TAGGED:What is your birth month? who are you What is your nature?
Share This Article
Facebook Twitter Copy Link Print
Previous Article ದುಬೈನಿಂದ ಬಂದ ಏರ್ ಇಂಡಿಯಾ ವಿಮಾನದಲ್ಲಿ ಮದ್ದುಗುಂಡಿನ‌ ಕಾರ್ಟ್ರಿಡ್ಜ್ ಪತ್ತೆ, ಹೇಗಾಯ್ತು ಭದ್ರತಾ ಲೋಪ?
Next Article ಬಿಗ್ ಬಾಸ್‌ನಲ್ಲಿ‌ ಭಾವುಕರಾಗಿ ಕಣ್ಣೀರಿಟ್ಟ ಕಿಚ್ಚ ಸುದೀಪ್…

Popular Posts

Devanahalli Gang Rape | ದೇವನಹಳ್ಳಿ ಸಾಮೂಹಿಕ ಅತ್ಯಾಚಾರ ಪ್ರಕರಣ: ಅಪ್ರಾಪ್ತೆಗೆ ದೇವಾಲಯಕ್ಕೆ ಕರೆದುಕೊಂಡು ಹೋಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ, ಮೂವರು ಆರೋಪಿಗಳ ಬಂಧನ

2 Min Read

Avengers film update ಅವೆಂಜರ್ಸ್: ಡೂಮ್ಸ್‌ಡೇ’ ಚಿತ್ರದ ಟ್ರೈಲರ್ ಬಿಡುಗಡೆ

2 Min Read

Want to Look Younger? ಯಂಗ್‌ ಆಗಿ ಕಾಣಬೇಕಾ? ಹೀಗಿರಲಿ ನಿಮ್ಮ ದಿನನಿತ್ಯದ ಅಭ್ಯಾಸಗಳು

2 Min Read

Want Success in Business? ವ್ಯಾಪಾರದಲ್ಲಿ ಯಶಸ್ಸು ಕಾಣಬೇಕಾ? ಈ ವಾಸ್ತು ಟಿಪ್ಸ್ ತಪ್ಪದೇ ಪಾಲಿಸಿ!

1 Min Read

You Might Also Like

ಅನಾವರಣಪ್ರಮುಖವಿದೇಶವೈರಲ್

Human Fridge ವಿಪರೀತ ಸೆಕೆಯೆನಿಸಿದರೆ ಅಂದುಕೊಂಡಂತೆ ನೀವು ಫ್ರಿಡ್ಜ್‌ನಲ್ಲೇ ಕೂಲ್ ಆಗಬಹುದು! ಬಂದಿದೆ ಹ್ಯೂಮನ್ ಫ್ರಿಡ್ಜ್!

2 Min Read
ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 21 ಜುಲೈ 2026, ಇಂದಿನ ನಿಮ್ಮ ಗ್ರಹಗತಿ ಹೇಗಿದೆ?

2 Min Read
ಆರೋಗ್ಯ

Are You Experiencing These Symptoms? ನಿಮಗೂ ಈ ಲಕ್ಷಣಗಳಿದೆಯಾ? ವಿಟಮಿನ್ D ಕೊರತೆಯಿರಬಹುದು!

2 Min Read
ಪ್ರಮುಖವಿದೇಶವೈರಲ್

Viral News ಫಿಫಾ ವಿಶ್ವಕಪ್ ವೇದಿಕೆಯಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್‌ರನ್ನು ಪಕ್ಕಕ್ಕೆ ತಳ್ಳಿದರಾ ರೋಡ್ರಿ? ವಿಡಿಯೋ ನೋಡಿ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?