newsics.com
ಓಡಿಶಾ: ಮಾವಿನ ಗೊರಟೆಯಿಂದ ಮಾಡಿದ ಗಂಜಿ ಸೇವಿಸಿ ಇಬ್ಬರು ಮಹಿಳೆಯರು ಮೃತಪಟ್ಟು, ಆರು ಮಂದಿ ಅಸ್ವಸ್ಥಗೊಂಡಿರುವ ಘಟನೆ ಒಡಿಶಾದ ಕಂಧಮಲ್ ಜಿಲ್ಲೆಯಲ್ಲಿ ನಡೆದಿದೆ.
ದರಿಂಗ್‌ಬಾಡಿ ಬ್ಲಾಕ್‌ನ ಮಂಡಿಪಂಕ ಗ್ರಾಮದಲ್ಲಿ ಘಟನೆ ನಡೆದಿದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.
ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ಎಲ್ಲ ಗಂಭೀರವಾವಾಗಿ ಅಸ್ವಸ್ಥರಾದವರನ್ನು ಬ್ರಹ್ಮಪುರ ಆಸ್ಪತ್ರೆಗೆ ಸಾಗಿಸಲಾಗಿದೆ. ಮೃತಪಟ್ಟವರು ಇಬ್ಬರು ಮಹಿಳೆಯರು ಎಂದು ತಿಳಿದು ಬಂದಿದೆ.
ಮೃತರು ಹಾಗೂ ಅಸ್ವಸ್ಥರು ಮಾವಿನ ಬೀಜದಿಂದ ತಯಾರಿಸಿದ ಸ್ಥಳೀಯ ಆಹಾರ ಪದಾರ್ಥವನ್ನು ಸೇವಿಸಿದ್ದಾರೆ. ಸೇವಿಸಿದ ಸ್ವಲ್ಪ ಸಮಯದ ನಂತರ ಅವರೆಲ್ಲರೂ ಇದ್ದಕ್ಕಿದ್ದಂತೆ ಅಸ್ವಸ್ಥರಾಗಿದ್ದಾರೆ.
ವಿಷಯ ತಿಳಿದ ಗ್ರಾಮಸ್ಥರು ತಕ್ಷಣ ಅವರನ್ನು ಮೊದಲು ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ. ಸ್ಥಿತಿ ಗಂಭೀರವಾಗಿದ್ದರಿಂದ 6 ಮಂದಿಯನ್ನು ಬ್ರಹ್ಮಪುರಕ್ಕೆ ಸ್ಥಳಾಂತರಿಸಲಾಗಿದೆ.