newsics.com
ಕಲಬುರಗಿ: ನಾಡಿನಾದ್ಯಂತ 69ನೇ ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತಿದೆ. ಈ ಸಂಭ್ರಮದ ಹಿನ್ನೆಲೆ ಸರ್ಕಾರಿ ಸಾರಿಗೆ ಬಸ್ ಚಾಲಕ ನಾಗಪ್ಪ ಉಪ್ಪಿನ್ ಅವರ ಕನ್ನಡ ಪ್ರೇಮ ಬೆಳಕಿಗೆ ಬಂದಿದೆ. ಬಸ್ ಸಂಪೂರ್ಣವಾಗಿ ಕನ್ನಡಮಯವಾದ ದೃಶ್ಯ ಕಂಡುಬಂದಿದೆ.
ಹೌದು, ಈ ಬಸ್ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಡಿಪೋಗೆ ಸೇರಿದೆ. ಚಾಲಕ ನಾಗಪ್ಪ ಉಪ್ಪಿನ್ ಸ್ವಂತ ದುಡ್ಡಲ್ಲಿ ಬಸ್ ಗೆ ಅಲಂಕಾರ ಮಾಡಿದ್ದಾರೆ. ಸರ್ಕಾರಿ ಬಸ್ ಗೆ ಕನ್ನಡದ ಬಾವುಟ ಕಟ್ಟಿ ಕೆಂಪು-ಅರಿಶಿಣದ ಬಲೂನ್ ಕಟ್ಟಿ ಶೃಂಗಾರ ಮಾಡಿದ್ದಾರೆ. ಇನ್ನು ಬಸ್ ಹೊರಗಡೆ ಮತ್ತು ಒಳಗಡೆ ಕನ್ಮಡ ಸಾಹಿತಿಗಳ ಪೋಟೊ ಅಂಟಿಸಲಾಗಿದೆ. ಹಳದಿ ಕೆಂಪು ಬಣ್ಣದಲ್ಲಿ ಬಸ್ ಸಿಂಗಾರಗೊಂಡಿದೆ.
ಕನ್ನಡ ರಾಜೋತ್ಸವದ ದಿನದಂದು ಸರ್ಕಾರಿ ಬಸ್ ಚಾಲಕನ ಕನ್ನಡ ಪ್ರೇಮ ವೈರಲ್ ಆಗುತ್ತಿದೆ. ಬಸ್ ಪೂರ್ತಿ ಕನ್ನಡ ಬಾವುಟವಿದ್ದು, ಮಧುವಣಗಿತ್ತಿಯಂತೆ ಸಿಂಗಾರಗೊಂಡಿದೆ.