newsics.com
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 11 ಎಮೋಷನಲ್ ಮನೆಯಾಗಿ ಬದಲಾಗಿದೆ.
ಹೌದು, ದೀಪಾವಳಿ ಹಬ್ಬದ ನಿಮಿತ್ತ ಸ್ಪರ್ಧಿಗಳೀಗೆ ಬಿಗ್ ಬಾಸ್ ಕುಟುಂಬಸ್ಥರಿಂದ ಒಂದೊಂದಾಗಿ ಪತ್ರವನ್ನು ಕಳುಹಿಸಿ ಕೊಡುತ್ತಿದ್ದಾರೆ. ತಮ್ಮ ತಮ್ಮ ಫ್ಯಾಮಿಲಿಯಿಂದ ಬಂದ ಪತ್ರವನ್ನು ಓದಲು ಎಲ್ಲರೂ ಉತ್ಸುಕರಾಗಿ ಕಾಯುತ್ತಿದ್ದಾರೆ. ಬಂದ ಪತ್ರವನ್ನು ಕಣ್ಣೀರು ಹಾಕಿತ್ತಾ ಓದಿದ್ದಾರೆ, ಆದರೆ ಫ್ಯಾಮಿಲಿಯ ಪತ್ರವನ್ನು ಎಲ್ಲರೂ ಓದುತ್ತಿದ್ದಾಗ.. ಫ್ಯಾಮಿಲಿನೇ ಇಲ್ಲದ ಐರ್ಶ್ವರ್ಯಗೆ ಬಿಗ್‍ಬಾಸ್ ಕಡೆಯಿಂದ ಒಂದು ಕರೆಯೋಲೆ ಬಂದಿದೆ. ಐರ್ಶ್ವರ್ಯಗೆ ಯಾವುದೇ ಪತ್ರ ಬಂದಿರಲಿಲ್ಲ. ಎಲ್ಲರು ತಮಗೆ ಬಂದ ಪತ್ರವನ್ನು ಓದುತ್ತಿದ್ದಾಗ ಅವರು ಕಣ್ಣೀರು ಹಾಕುತ್ತಿದ್ದರು. ನನಗೂ ಪತ್ರ ಬಂದೇ ಬರುತ್ತೆ ಅಂತ ಕಾಯುತ್ತಿದ್ದ ಐರ್ಶ್ವರ್ಯಗೆ ಬೇಸರ ಆಗಿದೆ.
ಇದೇ ಬೇಸರದಲ್ಲಿ ಕಣ್ಣೀರು ಹಾಕುತ್ತಿದ್ದ ಐರ್ಶ್ವರ್ಯಗೆ ಬಿಗ್ಬಾಸ್ ಮಾತು ಕೇಳಿ ಖುಷಿಯಾಗಿದ್ದಾರೆ. ಪ್ರೀತಿಯ ಐರ್ಶ್ವರ್ಯ ನನ್ನದೊಂದು ಪತ್ರ, ನನ್ನ ಮನೆಗೆ ಆಗಮಿಸಿದ ಕ್ಷಣದಿಂದ ನೀವು ನನ್ನ ಕುಟುಂಬದವರಾಗಿದ್ದೀರಿ. ನಾನೀರುವೆ ನಿಮ್ಮೊಂದಿಗೆ ಈ ಮನೆಯ ಸದಸ್ಯರಿದ್ದಾರೆ ನಿಮ್ಮೊಂದಿಗೆ. ಇಂತಿ ನಿಮ್ಮ ಬಿಗ್ಬಾಸ್.. ಇದೇ ಬಿಗ್ ಬಾಸ್ ವಾಯ್ಸ್ ಕೇಳಿ ಐಶ್ವರ್ಯ ಫುಲ್ ಖುಷ್ ಆಗಿದ್ದಾರೆ.