newsics.com
ನೈನಿತಾಲ್(ಉತ್ತರಾಖಂಡ): 17 ವರ್ಷದ ಹುಡುಗಿ ಹುಚ್ಚಾಟಕ್ಕೆ 45 ಮಂದಿ ಎಚ್ ಐವಿ ಸೋಂಕಿಗೆ ಒಳಗಾಗಿದ್ದಾರೆ.
ಈ ಆತಂಕಕಾರಿ ಘಟನೆ ನೈನಿತಾಲ್ ಜಿಲ್ಲೆಯ ರಾಮನಗರ ಪ್ರದೇಶದಲ್ಲಿ ನಡೆದಿದೆ. ಈ ಹುಡುಗಿ ಡ್ರಗ್ಸ್ ಚಟದ ದಾಸಿಯಾಗಿದ್ದಳು. ಡ್ರಗ್ಸ್ ಖರೀದಿಗೆ ಹಣವಿಲ್ಲದಿದ್ದಾಗ ಪುರುಷರ ಜತೆ ಲೈಂಗಿಕ ಸಂಪರ್ಕ ಹೊಂದಿ ಹಣ ಸಂಪಾದನೆ ಮಾಡಿ ಡ್ರಗ್ಸ್ ಖರೀದಿಸುತ್ತಿದ್ದಳು.
ಆಕೆಯ ಆಮಿಷಕ್ಕೆ ಮರುಳಾದ ಹುಡುಗರು ಈಗ ಪರಿತಪಿಸುತ್ತಿದ್ದಾರೆ. ಹುಡುಗಿ ಐದು ತಿಂಗಳಲ್ಲಿ ಹಲವು ಪುರುಷರ ಸಂಪರ್ಕಕ್ಕೆ ಬಂದಿದ್ದಾಳೆ. ಈ ಪೈಕಿ ಕೆಲವರು ವಿವಾಹಿತರು. ಹಾಗಾಗಿ ಅವರ ಪತ್ನಿಯರಿಗೂ ಎಚ್ಐವಿ ಸೋಂಕು ತಗುಲಿದೆ. ಹೀಗಾಗಿ ಇಡೀ ರಾಮನಗರ ಪ್ರದೇಶದಲ್ಲಿ ಆತಂಕ ಸೃಷ್ಟಿಯಾಗಿದ್ದು, ಎಚ್ಚರದಿಂದಿರುವಂತೆ ಸ್ಥಳೀಯರಿಗೆ ಸೂಚನೆ ನೀಡಲಾಗಿದೆ.
ಹಣಕ್ಕಾಗಿ ತಾನು ಮಾಡ್ತಿದ್ದ ಕೆಲಸವನ್ನು ಸಮಾಲೋಚಕರ ಮುಂದೆ ಒಪ್ಪಿಕೊಂಡಿದ್ದಾಳೆ. ಹುಡುಗಿಗೆ ಆರೋಗ್ಯ ಸರಿಯಿಲ್ಲ ಎಂಬುದು ಆಕೆ ಸಂಪರ್ಕಕ್ಕೆ ಬಂದ ಜನರಿಗೆ ತಿಳಿದಿರಲಿಲ್ಲ. ಆದರೆ ಆಕೆಯ ಹೆಸರು ಬಹಿರಂಗವಾಗ್ತಿದ್ದಂತೆ ಸಂಪರ್ಕಕ್ಕೆ ಬಂದವರು ಆಘಾತಕ್ಕೊಳಗಾಗಿದ್ದಾರೆ. ಪರೀಕ್ಷೆಗೊಳಗಾದಾಗ ಎಚ್ಐವಿ ಪಾಸಿಟಿವ್ ಆಗಿರುವುದು ಅವರಿಗೆ ತಿಳಿದಿದೆ.
ಕೇವಲ 17 ತಿಂಗಳಲ್ಲಿ 45 ಮಂದಿಗೆ ಎಚ್ಐವಿ ಸೋಂಕು ಪತ್ತೆಯಾಗಿದೆ. ಏಪ್ರಿಲ್ ಮತ್ತು ಅಕ್ಟೋಬರ್ ನಡುವೆ 19 ಜನರು ಎಚ್ಐವಿ ಸೋಂಕಿಗೆ ಒಳಗಾಗಿದ್ದಾರೆ. ಇವರಲ್ಲಿ 30 ಪುರುಷರು ಮತ್ತು 15 ಮಹಿಳೆಯರು ಸೇರಿದ್ದಾರೆ. 30 ಪುರುಷರಲ್ಲಿ 20 ಯುವಕರು ಮಾದಕ ವ್ಯಸನಿ ಹುಡುಗಿಯಿಂದ ಸೋಂಕಿಗೆ ಒಳಗಾಗಿದ್ದಾರೆ.
ಬಿಸಿ ಬಿಸಿ ಇಡ್ಲಿಯಲ್ಲಿ ಜಿರಳೆ ಪತ್ತೆ; ಹೋಟೆಲ್ ಬಗ್ಗೆ ಗ್ರಾಹಕರ ಆಕ್ರೋಶ
‘ಶಕ್ತಿ’ ಯೋಜನೆ ಮರುಪರಿಶೀಲನೆ ಹೇಳಿಕೆ: ಡಿಸಿಎಂ ಡಿಕೆಶಿಗೆ ವೇದಿಕೆಯಲ್ಲೇ ಖರ್ಗೆ ತರಾಟೆ
ಹಾಸನಾಂಬೆ ದರ್ಶನಕ್ಕೆ ಬಿಟ್ಟಿದ್ದ 300 ವಿಶೇಷ ಬಸ್ ಸಂಚಾರ ರದ್ದು! ಕಾರಣವೇನು ಗೊತ್ತಾ?
ದೇಶದ ಒಗ್ಗಟ್ಟು ಕಾಪಾಡಲು ಸೋನಿಯಾ, ರಾಹುಲ್ ಪ್ರಾಣ ಕೊಟ್ಟರು!: ಮಾತಿನ ಭರದಲ್ಲಿ ಖರ್ಗೆ ಭಾರೀ ಎಡವಟ್ಟು