newsics.com
ನಾಗ್ಪುರ: ಕಳೆದ ಕೆಲ ದಿನಗಳಲ್ಲಿ ದೇಶದ ನಾನಾ ವಿಮಾನ ನಿಲ್ದಾಣಗಳಿಗೆ ಮತ್ತು ವಿಮಾನಗಳಿಗೆ ಹುಸಿ ಬಾಂಬ್ ಬೆದರಿಕೆ ಬರುತ್ತಿತ್ತು. ತೀವ್ರ ತನಿಖೆ ನಡೆಸಿರುವ ಪೊಲೀಸರು ಆರೋಪಿಯನ್ನು ಗುರುತಿಸಿದ್ದಾರೆ.
ವಿಮಾನ ವಿಳಂಬಕ್ಕೆ ಮತ್ತು ವಿಮಾನ ನಿಲ್ದಾಣಗಳು ಮತ್ತು ಇತರ ಸಂಸ್ಥೆಗಳಲ್ಲಿ ಹೆಚ್ಚಿನ ಭದ್ರತೆಗೆ ಕಾರಣವಾದ ನಕಲಿ ಬಾಂಬ್ ಬೆದರಿಕೆಗಳ ಹಿಂದೆ ಮಹಾರಾಷ್ಟ್ರದ ಗೊಂಡಿಯಾ ಮೂಲದ ಜಗದೀಶ್ ಉಯ್ಕೆ ಎಂಬ ವ್ಯಕ್ತಿ ಕೈವಾಡ ಇದ ಎನ್ನಲಾಗಿದೆ. ಈತ ಭಯೋತ್ಪಾದನೆ ಕುರಿತು ಪುಸ್ತಕ ಬರೆದಿದ್ದು, ಈತನನ್ನು 2021 ರಲ್ಲಿ ಪ್ರಕರಣವೊಂದರಲ್ಲಿ ಬಂಧಿಸಲಾಗಿತ್ತು.
ಈತನ ಇಮೇಲ್ಗಳನ್ನು ಪತ್ತೆಹಚ್ಚಿದ ನಂತರ ಈತ ತಲೆಮರೆಸಿಕೊಂಡಿರುವುದು ಗೊತ್ತಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್ (DCP) ಶ್ವೇತಾ ಖೇಡ್ಕರ್ ನೇತೃತ್ವದ ತನಿಖಾ ತಂಡ ಇಮೇಲ್ಗಳಿಗೆ ಯುಕೆಯನ್ನು ಲಿಂಕ್ ಮಾಡುವ ವಿವರವಾದ ಮಾಹಿತಿಯನ್ನು ಬಹಿರಂಗಪಡಿಸಿದೆ.