newsics.com
ಮುಂಬೈ: ಇತ್ತೀಚೆಗಷ್ಟೇ ಇಳಿಕೆಯಾಗಿದ್ದ ಚಿನ್ನ ಬೆಳ್ಳಿ ಬೆಲೆ ಮತ್ತೆ ಏರಿಕೆಯಾಗಿದೆ. ದಸರಾ ಮತ್ತು ದೀಪಾವಳಿ ಸಮಯದಲ್ಲಿ ಭರ್ಜರಿಯಾಗಿ ಬೆಲೆ ಹೆಚ್ಚುತ್ತಿದ್ದು, ಚಿನ್ನ ಬೆಳ್ಳಿ ಕೊಳ್ಳುವವರಿಗೆ ಶಾಕ್ ಎದುರಾದಂತಿದೆ..
ದೀಪಾವಳಿ ಹಬ್ಬದ ನಡುವೆಯೇ ಚಿನ್ನದ ದರ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಹೌದು.. ಇಂದು ಚಿನ್ನದ ದರದಲ್ಲಿ 650 ರೂ ಏರಿಕೆಯಾಗಿದ್ದು, ಇದು ಆಭರಣ ಪ್ರಿಯರಿಗೆ ಬೇಜಾರಿನ ಸಂಗತಿಯಾಗಿದೆ. ಪ್ರತೀ 10 ಗ್ರಾಂ ಚಿನ್ನದ ದರದಲ್ಲಿ 650ರೂ ಏರಿಕೆಯಾಗಿದ್ದು, ಆ ಮೂಲಕ 10 ಗ್ರಾಂ ಚಿನ್ನದ ದರ 80,450ರೂ ಗೆ ಏರಿಕೆಯಾಗಿದೆ.
ಚಿನ್ನಾಭರಣ ವ್ಯಾಪಾರಿಗಳಿಂದ ಸ್ಥಿರವಾದ ಖರೀದಿ ಬೆಂಬಲ ಮತ್ತು ಸಾಗರೋತ್ತರ ಮಾರುಕಟ್ಟೆಗಳಲ್ಲಿನ ದೃಢ ಪ್ರವೃತ್ತಿಯಿಂದಾಗಿ ಇಂದು ಚಿನ್ನದ ಬೆಲೆಯು 650 ರೂ.ಗಳಷ್ಟು ಏರಿಕೆಯಾಗಿ 10 ಗ್ರಾಂಗೆ ಗರಿಷ್ಠ 80,450 ರೂ.ಗೆ ಏರಿಕೆಯಾಗಿದೆ. ಸೋಮವಾರ ಬಂಗಾರ ಪ್ರತೀ 10 ಗ್ರಾಂಗೆ 79,800 ರೂ ಗಳಷ್ಟಿತ್ತು. ಆದರೆ ಇಂದು 650ರೂ ಏರಿಕೆಯಾಗಿ ಪ್ರತೀ 10 ಗ್ರಾಂ ಚಿನ್ನದ ದರ 80,450ರೂ ಗೆ ಏರಿಕೆಯಾಗಿದೆ.
18 ಕ್ಯಾರೆಟ್ ಚಿನ್ನ 10 ಗ್ರಾಂಗೆ 490ರೂ ಏರಿಕೆಯಾಗಿ, 60,340 ರೂಗಳಿಗೆ ಏರಿಕೆಯಾಗಿದ್ದು, 22 ಕ್ಯಾರೆಟ್ ಚಿನ್ನ 10 ಗ್ರಾಂಗೆ 600 ರೂ ಏರಿಕೆಯಾಗಿ, 73,750 ರೂಗಳಿಗೆ ಏರಿಕೆಯಾಗಿದೆ. ಅಂತೆಯೇ 24 ಕ್ಯಾರೆಟ್ ಚಿನ್ನ 10 ಗ್ರಾಂಗೆ 650 ರೂ ಏರಿಕೆಯಾಗಿ, 80,450 ರೂಗಳಿಗೆ ಏರಿಕೆಯಾಗಿದೆ