newsics.com
ನವದೆಹಲಿ: ಭಾನುವಾರ ಪ್ರಸಾರವಾದ ಮನ್ ಕಿ ಬಾತ್ನ 115ನೇ ಸಂಚಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಡಿಜಿಟಲ್ ಅರೆಸ್ಟ್ ಬಗ್ಗೆ ಜಾಗೃತಿ ಮೂಡಿಸಿದರು.
ದೇಶದ ಬಹುದೊಡ್ಡ ಸಮಸ್ಯೆಯೊಂದನ್ನು ಪ್ರಸ್ತಾಪಿಸಿ, ಸರಿಯಾದ ಡೆಮೊ ನೀಡುವ ಮೂಲಕ ದೇಶದ ಜನರನ್ನು ಎಚ್ಚರಿಸಿದರು.
ಡಿಜಿಟಲ್ ವಂಚಕರ ಕಾರ್ಯವೈಖರಿ ವಿವರಿಸುವ ಮೂಲಕ ದೇಶಾದ್ಯಂತ ನಾಯಿಕೊಡೆಗಳಂತೆ ಹರಡುತ್ತಿರುವ ಡಿಜಿಟಲ್ ಬಂಧನ ಪ್ರಕರಣಗಳ ಕುರಿತು ಮಾಹಿತಿ ನೀಡುವ ಮೂಲಕ ದೇಶವಾಸಿಗಳಲ್ಲಿ ಜಾಗೃತಿ ಮೂಡಿಸಿದರು.
ಪ್ರಧಾನಿ ಮೋದಿಯವರೇ ಈ ಬಗ್ಗೆ ಎಚ್ಚರಿಸಿರುವುದರಿಂದ ದೇಶದ ಜನ ಇನ್ನಷ್ಟು ಎಚ್ಚರ ವಹಿಸಲಿದ್ದಾರೆ. ಈ ಮೂಲಕ ಡಿಜಿಟಲ್ ಬಂಧನ ಪ್ರಕರಣಗಳ ಪ್ರಮಾಣ ತಗ್ಗಲಿದೆ ಎಂದು ನಿರೀಕ್ಷಿಸಲಾಗಿದೆ.
ಬಾಂದ್ರಾ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: 9 ಮಂದಿಗೆ ಗಾಯ, ಇಬ್ಬರ ಸ್ಥಿತಿ ಚಿಂತಾಜನಕ