newsics.com
ಉತ್ತರ ಪ್ರದೇಶ: ಗಂಡ ಕಪ್ಪಗಿದ್ದಾನೆ ಎಂದು ಪತ್ನಿ ಆತ್ಮ*ಹತ್ಯೆ ಮಾಡಿಕೊಂಡ ಘಟನೆ ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ ನಡೆದಿದೆ.
ಹತ್ರಾಸ್ನ ಸಿಯಾಲ್ ಖೇಡಾ ಮೊಹಲ್ಲಾದಲ್ಲಿ ನೆಲೆಸಿರುವ ತೌಫಿಕ್ ಪೇಂಟರ್ ಆಗಿ ಕೆಲಸ ಮಾಡುತ್ತಿದ್ದ. ನಾಲ್ಕು ತಿಂಗಳ ಹಿಂದೆಯಷ್ಟೇ ಆತ 25 ವರ್ಷದ ಸಿಮ್ರಾನ್ ಅವರನ್ನು ವಿವಾಹವಾಗಿದ್ದರು. ಸಿಮ್ರಾನ್ ಬರೌಲಾದ ಅಲಿಗಢದ ಜಫರಾಬಾದ್ ನಿವಾಸಿಯಾಗಿದ್ದರು. ತೌಫಿಕ್ ತನ್ನ ಪತ್ನಿಯೊಂದಿಗೆ ಮನೆಯಲ್ಲಿ ಒಬ್ಬನೇ ವಾಸಿಸುತ್ತಿದ್ದ. ತೌಫಿಕ್ ಕೆಲಸಕ್ಕೆ ತೆರಳಿದ ಬಳಿಕ ಕೋಣೆಯಲ್ಲಿ ನೇಣು ಬಿಗಿದುಕೊಂಡಿದ್ದಾಳೆ.
ಮನೆಯ ಕೊಠಡಿಯಲ್ಲಿ ನೇಣು ಬಿಗಿದುಕೊಂಡಿದ್ದ ಸಿಮ್ರಾನ್ನನ್ನು ನೋಡಿದ ಅಕ್ಕಪಕ್ಕದ ಕೆಲವರು ಆಕೆಯ ಪತಿಗೆ ವಿಷಯ ತಿಳಿಸಿದ್ದಾರೆ. ಈ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಈ ಘಟನೆಯ ಬಗ್ಗೆ ಮಾಹಿತಿ ಪಡೆದ ಮಹಿಳೆಯ ತಾಯಿಯ ಕಡೆಯವರೂ ಅಲ್ಲಿಗೆ ಬಂದಿದ್ದರು.
ಸುಂದರವಾದ ಗಂಡ ಬೇಕಾಗಿತ್ತು ಎಂಬ ಕೊರಗು ಆ ಮಹಿಳೆಗೆ ಕಾಡುತ್ತಿತ್ತು. ವೈವಾಹಿಕ ಜೀವನದಲ್ಲಿ ಆಕೆ ಖುಷಿಯಾಗಿರಲಿಲ್ಲ. ಸ್ಥಳೀಯರ ಪ್ರಕಾರ, ಆಕೆಯ ಪತಿ ಕಪ್ಪಗಿದ್ದು, ಅವಳು ಬಿಳಿ ಬಣ್ಣದ ವ್ಯಕ್ತಿಯನ್ನು ಮದುವೆಯಾಗಲು ಬಯಸಿದ್ದಳು. ಸುತ್ತಮುತ್ತಲಿನವರನ್ನು ವಿಚಾರಿಸಿದಾಗ ಆ ಮಹಿಳೆಗೆ ಪತಿ ಇಷ್ಟವಿರಲಿಲ್ಲ ಎಂದು ತಿಳಿದು ಬಂದಿದೆ. ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಜನರಿಗೆ ಲೈಂಗಿಕತೆಯೂ ಈಗ ಆದ್ಯತೆಯ ವಿಚಾರವಾಗುತ್ತಿದೆಯಂತೆ…! ಯಾಕೆ ಹೀಗೆ?
ಭಾವಿ ಪತಿ ಎದುರೇ ಯುವತಿಯ ಮೇಲೆ ಗ್ಯಾಂಗ್ ರೇಪ್ – ವಿಡಿಯೋ ಹರಿಬಿಟ್ಟ ದುಷ್ಕರ್ಮಿಗಳು