newsics.com
ರಾಧಾ ಹಿರೇಗೌಡರ್ ಬಿಗ್ ಬಾಸ್ ಮನೆಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ವಾರದ ಮಧ್ಯೆ ರಾಧಾ ಎಂಟ್ರಿ ಕಂಡು ಸ್ಪರ್ಧಿಗಳು ದಂಗಾಗಿದ್ದಾರೆ.
ಜಗದೀಶ್ ಮತ್ತು ರಂಜಿತ್ ಮನೆಯಿಂದ ಹೊರಹೋದ ಬಳಿಕ ಹನುಮಂತ ವೈಲ್ಡ್ ಕಾರ್ಡ್ ಎಂಟ್ರಿ ಪಡೆದಿದ್ದರು. ಈ ಬೆನ್ನಲ್ಲೇ ರಾಧಾ ಹೀರೇಗೌಡರ್ ಸಹ ಬಂದಿದ್ದಾರೆ.
ಬಿಗ್ ಬಾಸ್ ಪ್ರತಿ ಸೀಸನ್‌ನಲ್ಲೂ ಯಾರಾದರೂ ಒಬ್ಬರು ಸುದ್ದಿ ಚಾನೆಲ್‌ಗಳ ನಿರೂಪಕರು ಎಂಟ್ರಿ ಪಡೆಯುತ್ತಿದ್ದರು. ಆದರೆ ಬಿಗ್ ಬಾಸ್ ಕನ್ನಡ ಸೀನಸ್ 11 ರಲ್ಲಿ ಯಾರೂ ಹೋಗಿರಲಿಲ್ಲ. ರಾಧಾ ಹೀರೇಗೌಡರ್ ಬರುತ್ತಿದ್ದಂತೆ ಬಿಗ್ ಬಾಸ್ ಕನ್ನಡ ಸ್ಪರ್ಧಿಗಳು ಶಾಕ್ ಆಗಿದ್ದಾರೆ. ಚೈತ್ರಾ ಕುಂದಾಪುರ ನೀವು ಸ್ಪರ್ಧಿನಾ? ಎಂದು ನೇರವಾಗಿಯೇ ಕೇಳಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ರಾಜಕೀಯ ವಾತಾವರಣ ಕ್ರಿಯೆಟ್ ಆಗಿದೆ. ಅದನ್ನ ವಿಶ್ಲೇಷಣೆ ಮಾಡೋಕೆ ರಾಧಾ ಹಿರೇಗೌಡರ್ ಬಂದಿದ್ದಾರೆ ಎನ್ನಲಾಗುತ್ತಿದೆ. ರಾಧಾ ಹಿರೇಗೌಡರ್ ಎಂಟ್ರಿಯ ಪ್ರೊಮೊ ರಿಲೀಸ್ ಆಗಿದೆ. ಆದರೆ ಸ್ಪರ್ಧಿನಾ ಗೆಸ್ಟಾ ಎಂಬ ಕ್ಲಾರಿಟಿ ನೀಡಿಲ್ಲ. ಇಂದಿನ ಎಪಿಸೋಡ್‌ನಲ್ಲಿ ಬಹುಶಃ ಇದಕ್ಕೆ ಉತ್ತರ ಸಿಗಲಿದೆ.
ಬಿಗ್ ಬಾಸ್’ ಮನೆಯಲ್ಲಿರುವ 14 ಸದಸ್ಯರನ್ನು ಎರಡು ವಿಭಾಗ ಮಾಡಲಾಗಿದೆ. ಅವರನ್ನು ಈಗ ರಾಜಕೀಯ ಪಕ್ಷಗಳ ಕಾರ್ಯಕರ್ತರನ್ನಾಗಿ ವಿಭಾಗಿಸಲಾಗಿದೆ. ಒಂದು ಪಕ್ಷಕ್ಕೆ ‘ಧರ್ಮಪರ ಸೇನಾ ಪಕ್ಷ’, ಇನ್ನೊಂದು ಪಕ್ಷಕ್ಕೆ ‘ಪ್ರಾಮಾಣಿಕ ಸಮರ್ಥರ ನ್ಯಾಯವಾದಿ ಪಕ್ಷ’ ಎಂದು ಹೆಸರು ಇಡಲಾಗಿದೆ. ಈ ಎರಡು ತಂಡಕ್ಕೆ ಬೇರೆ ಬೇರೆ ಕಾಸ್ಟ್ಯೂಮ್ ಕೊಡಲಾಗಿದೆ. ‘ಬಿಗ್ ಬಾಸ್’ ಮನೆಯಲ್ಲಿ ಐಶ್ವರ್ಯಾ, ತ್ರಿವಿಕ್ರಮ್ ಅವರು ಕ್ಯಾಪ್ಟನ್ ಆಗಿದ್ದು, ಅವರನ್ನು ಎರಡು ಪಕ್ಷದ ಅಭ್ಯರ್ಥಿಗಳನ್ನಾಗಿ ಮಾಡಲಾಗಿದೆ. ಈಗ ಎರಡು ಪಕ್ಷಗಳು ಪ್ರಚಾರ ಕಾರ್ಯ ಆರಂಭಿಸಿವೆ.