Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಡಿಜಿಟಲ್ ಅರೆಸ್ಟ್‌ನಿಂದ ಬೆಚ್ಚಿ ಬೆತ್ತಲಾದ ಯುವತಿ‌! 5 ಲಕ್ಷ ಲಪಟಾಯಿಸಿದ ವರ್ಚುವಲ್ ವಂಚಕರು
ದೇಶಪ್ರಮುಖ

ಡಿಜಿಟಲ್ ಅರೆಸ್ಟ್‌ನಿಂದ ಬೆಚ್ಚಿ ಬೆತ್ತಲಾದ ಯುವತಿ‌! 5 ಲಕ್ಷ ಲಪಟಾಯಿಸಿದ ವರ್ಚುವಲ್ ವಂಚಕರು

Share
3 Min Read
SHARE

newsics.com

ಅಹಮ್ಮದಾಬಾದ್: ಡಿಜಿಟಲ್ ಅರೆಸ್ಟ್ ಇತ್ತೀಚೆಗೆ ಭಾರೀ ಸದ್ದು ಮಾಡುತ್ತಿದೆ. ಇದೀಗ 27ರ ಹರೆಯದ ಯುವತಿಯೊಬ್ಬಳು ಇದೇ ಡಿಜಿಟಲ್ ಅರೆಸ್ಟ್ ಜಾಲಕ್ಕೆ ಸಿಲುಕಿ ವಿಡಿಯೋ ಕಾಲ್‌ನಲ್ಲಿ ಬಟ್ಟೆ ಬಿಚ್ಚಿ ಬೆತ್ತಲಾದದ್ದಷ್ಟೇ ಅಲ್ಲ, 5 ಲಕ್ಷ ರೂಪಾಯಿಯನ್ನೂ ಕಳೆದುಕೊಂಡಿದ್ದಾಳೆ.

ಈ ಘಟನೆ ಗುಜರಾತ್‌ನ ಅಹಮ್ಮದಾಬಾದ್‌ನಲ್ಲಿ ನಡೆದಿದೆ. ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ಯುವತಿಯನ್ನು ಡಿಜಿಟಲ್ ಅರೆಸ್ಟ್ ಜಾಲಕ್ಕೆ ಸಿಲುಕಿಸಿ ಹಣ ವಂಚಿಸಲಾಗಿದೆ.

ಮೋಸ ಹೋದ ಯುವತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ
ಅಹಮ್ಮದಾಬಾದ್‌ನ ಸಂಪರನ್ ಟವರ್ ಬಳಿ ನಿವಾಸಿಯಾಗಿರುವ ಹೆಮಾಲಿ ಪಾಂಡೆಗೆ ಅಕ್ಟೋಬರ್ 13ರಂದು ಕೊರಿಯರ್ ಕಂಪನಿಯಿಂದ ಎಂದು ಹೇಳಿ ಕರೆಯೊಂದು ಬಂದಿದೆ. ನಿಮ್ಮ ಹೆಸರಿನಲ್ಲಿ ಥಾಯ್ಲೆಂಡ್‌ಗೆ ಕೊರಿಯರ್ ಕಳುಹಿಸಲಾಗಿದೆ. ಈ ಕೊರಿಯರ್ ಪಾರ್ಸೆಲ್‌ನಲ್ಲಿ 3 ಲ್ಯಾಪ್‌ಟಾಪ್, 2 ಫೋನ್, 150 ಗ್ರಾಂ ಡ್ರಗ್ಸ್, 1.5 ಕೆಜಿ ಬಟ್ಟೆ ಕಳುಹಿಸಲಾಗಿದೆ. ಇದು ಡ್ರಗ್ಸ್ ವ್ಯವಹಾರ ದಂಧೆ ಮಾಡುತ್ತಿರುವವರ ಕೆಲಸ. ನೀವು ತಕ್ಷಣ ಸೈಬರ್ ಕ್ರೈಂ ಪೊಲೀಸರಿಗೆ ಕರೆ ಮಾಡಿ ದೂರು ನೀಡಿ ಎಂದು ಫೋನ್‌ನಲ್ಲಿ ಸೂಚಿಸಿದ್ದಾರೆ. ವಾಟ್ಸ್ಆ್ಯಪ್ ಕರೆ ಮಾತ್ರ ಸಾಧ್ಯ ಉಳಿದ ಕರೆ ಸಾಧ್ಯವಿಲ್ಲ ಎಂದು ಸೂಚಿಸಿದ್ದಾರೆ.

ಮೊದಲೇ ಗಾಬರಿ ಹಾಗೂ ಆತಂಕಕ್ಕೆ ಒಳಗಾದ ಹೇಮಾಲಿ ಪಾಂಡೆ, ತನಗೆ ಸಿಕ್ಕ ಸೈಬರ್ ಕ್ರೈಂ ನಂಬರ್‌ಗೆ ಕರೆ ಮಾಡಿದ್ದಾಳೆ. ಕರೆ ಸ್ವೀಕರಿಸಿದ ವ್ಯಕ್ತಿ ದೆಹಲಿ ಸೈಬರ್ ಕ್ರೈಂ ಅಧಿಕಾರಿ ಎಂದು ಹೇಳಿಕೊಂಡು ವಿಚಾರಣೆ ಆರಂಭಿಸಿದ್ದಾನೆ.

ಈ ವೇಳೆ ಹೇಮಾಲಿ ಪಾಂಡೆ ತನ್ನ ಹೆಸರಿನಲ್ಲಿ ಕೋರಿಯರ್ ಹೋಗಿದೆ ಎಂದಿದ್ದಾಳೆ. ಇದಕ್ಕೆ ಇದು ನಾರ್ಕೋಟಿಕ್ಸ್ ಪೊಲೀಸರ ಅಡಿಯಲ್ಲಿ ಬರಲಿದೆ. ಹೀಗಾಗಿ ಸಿಬಿಐ ಪೊಲೀಸರು ವಿಡಿಯೋ ಕಾಲ್ ಮೂಲಕ ಮಾಹಿತಿ ಪಡೆಯಲಿದ್ದಾರೆ. ವಿಡಿಯೋ ಕಾಲ್ ಸ್ವೀಕರಿಸುವಂತೆ ಸೂಚಿಸಿದ್ದಾರೆ.

ಕೆಲವೇ ಕ್ಷಣದಲ್ಲಿ ಯುವತಿಗೆ ಸಿಬಿಐ ಅಧಿಕಾರಿ ಸೋಗಿನಲ್ಲಿ ವಿಡಿಯೋ ಕಾಲ್ ಮಾಡಲಾಗಿದೆ. ಅಧಿಕಾರಿ ಮುಖಕ್ಕೆ ಮಾಸ್ಕ್ ಧರಿಸಿ ವಿಡಿಯೋ ಕಾಲ್‌ನಲ್ಲಿ ಪ್ರತ್ಯಕ್ಷವಾಗಿದ್ದಾನೆ.

ಬರ್ತ್ ಸರ್ಟಿಫಿಕೇಟ್‌ನಲ್ಲಿ ದೇಹದಲ್ಲಿನ ಮಚ್ಚೆ ಹಾಗೂ ಇತರ ಗುರುತು ಪತ್ತೆ ಹಚ್ಚಲು ಬಟ್ಟೆ ಬಿಚ್ಚಲು ಸೂಚಿಸಿದ್ದಾನೆ. ಇದಕ್ಕೆ ನಿರಾಕರಿಸಿದಾಗ ಕೇಸು, ಜೈಲು ಎಂದು ಬೆದರಿಸಿದ್ದಾನೆ. ಇದೇ ವೇಳೆ ನಕಲಿ ಸಿಬಿಐ ಅಧಿಕಾರಿ ಕರೆಯಲ್ಲಿ ಮಹಿಳಾ ಅಧಿಕಾರಿ ಪ್ರತ್ಯಕ್ಷಗೊಂಡಿದ್ದಾರೆ. ಬೇರೆ ದಾರಿ ಕಾಣದ ಹೇಮಾಲಿ ಪಾಂಡೆ ಬಟ್ಟೆ ಬಿಚ್ಚಿದ್ದಾರೆ.

ಪ್ರಾಥಮಿಕ ತನಿಖೆ, ಕೊರಿಯರ್ ಎಲ್ಲವನ್ನೂ ಗಮನಿಸಿದರೆ ಡ್ರಗ್ಸ್ ದಂಧೆಯಲ್ಲಿ ನಿಮ್ಮ ಪಾತ್ರವಿರುವುದು ಖಚಿತವಾಗಿದೆ. ಇದು ಅಂತಾರಾಷ್ಟ್ರೀಯ ಡ್ರಗ್ಸ್ ದಂಧೆ ಕೇಸ್ ದಾಖಲಾಗಲಿದೆ. ಹೀಗಾಗಿ ಪ್ರಬಲ ಕೇಸ್ ಆಗಲಿದೆ ಎಂದು ಬೆದರಿಸಿದ್ದಾರೆ. ಇದೇ ವೇಳೆ ಯುವತಿಯಾಗಿರುವ ಕಾರಣ ಒಂದು ಸಹಾಯ ಮಾಡಲು ಸಾಧ್ಯವಿದೆ ಎಂದು ಹೇಳಿ ಒಂದಷ್ಟು ಚಾರ್ಜಿಂಗ್ ಹೆಸರಿನಲ್ಲಿ ಒಟ್ಟು 4.92 ಲಕ್ಷ ರೂಪಾಯಿ ಖಾತೆಗೆ ವರ್ಗಾಯಿಸುವಂತೆ ಸೂಚಿಸಿದ್ದಾರೆ. ಹಣ ವರ್ಗಾವಣೆ ಮಾಡಿದ ಬಳಿಕ ಕರೆ ಮಾಡಿದ ಯಾವುದೇ ನಂಬರ್ ಚಾಲ್ತಿಯಲ್ಲಿಲ್ಲ. ಕೊರಿಯರ್ ಬಾಯ್ ಕರೆ ಕೂಡ ಕನೆಕ್ಟ್ ಆಗುತ್ತಿಲ್ಲ. ಅಷ್ಟರಲ್ಲಿ ತಾನು ಮೋಸ ಹೋಗಿರುವುದಾಗಿ ಯುವತಿಗೆ ಅರಿವಾಗಿದೆ. ನರನ್‌ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

ಏನಿದು ಡಿಜಿಟಲ್ ಅರೆಸ್ಟ್?
ಅನಾಮಿಕರು ಅಧಿಕಾರಿಗಳು, ಸೈಬರ್ ಕ್ರೈಂ ಪೊಲೀಸ್ ಸೇರಿದಂತೆ ನಾನಾ ಸೋಗಿನಲ್ಲಿ ಕರೆ ಮಾಡಿ, ನಿಮ್ಮ ಹೆಸರಿನಲ್ಲಿ ಪಾರ್ಸೆಲ್ ಹೋಗಿದೆ. ನಿಮಗೆ ಪಾರ್ಸೆಲ್ ಬಂದಿದೆ. ಇದರಲ್ಲಿ ಡ್ರಗ್ಸ್ ಇದೆ, ಅಥವಾ ನಕಲಿ ಮದ್ಯ ಇದೆ ಎಂದೆಲ್ಲಾ ಹೇಳಿ ಬೆದರಿಸುತ್ತಾರೆ. ಈ ಕುಣಿಕೆಯಲ್ಲಿ ಬಿದ್ದ ತಕ್ಷಣ ವಿಚಾರಣೆ ಸೇರಿದಂತೆ ಹಲವು ನಕಲಿ ಕರೆ ಮಾಡಿ ಖಾತೆಯಿಂದ ಹಣ ವರ್ಗಾವಣೆ ಮಾಡಿಸುತ್ತಾರೆ. ಇಷ್ಟೇ ಅಲ್ಲ, ವಿಡಿಯೋ ರೆಕಾರ್ಡ್ ಮಾಡಿ ಮತ್ತೆ ಬ್ಲಾಕ್‌ಮೇಲ್ ಮಾಡುತ್ತಾರೆ.

ಬೆಂಗಳೂರಲ್ಲಿ ಕಸದಿಂದ ಕರೆಂಟ್ ಉತ್ಪಾದನೆ: ಶೀಘ್ರದಲ್ಲೇ ವಿದ್ಯುತ್ ಸ್ಥಾವರಕ್ಕೆ ಚಾಲನೆ

ಅಗ್ರಿಗೇಟರ್ ಆ್ಯಪ್ಗಳಿಂದ ಶುಲ್ಕ ವಸೂಲಿ ಮಾಡಲಿರುವ ಕರ್ನಾಟಕ

ಬಿಷ್ಣೋಯ್ ಗ್ಯಾಂಗ್ ಬೆದರಿಕೆ: ದುಬಾರಿ ಬುಲೆಟ್ ಪ್ರೂಫ್ ಕಾರು ಖರೀದಿಸಿದ ಸಲ್ಮಾನ್ ಖಾನ್

TAGGED:Young woman shocked by digital arrest! 5 lakhs of missing virtual fraudsters
Share This Article
Facebook Twitter Copy Link Print
Previous Article ಮತ್ತೆ ಜೈಲು ಸೇರಿದ ಚೈತ್ರಾ ಕುಂದಾಪುರ
Next Article ಕಾಲೇಜು ಕಟ್ಟಡದಿಂದ ಜಿಗಿದು ವಿದ್ಯಾರ್ಥಿನಿ ಆತ್ಮ*ಹತ್ಯೆ

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?