newsics.com
ಬೆಂಗಳೂರು : ಫೂಡ್ ಡೆಲಿವರಿ ಪ್ಲಾಟ್ಫಾರ್ಮ್ಗಳು, ಇಕಾಮರ್ಸ್ ಪ್ಲಾಟ್ಫಾರ್ಮ್ಗಳು ಇತ್ಯಾದಿ ಆ್ಯಪ್ಗಳಲ್ಲಿ ಗ್ರಾಹಕರು ನಡೆಸುವ ಪ್ರತೀ ವಹಿವಾಟಿಗೆ ಶೇ. 1ರಿಂದ 2ರಷ್ಟು ಶುಲ್ಕ ವಿಧಿಸಲು ಕರ್ನಾಟಕ ಸರ್ಕಾರ ಯೋಜಿಸಿದೆ.
ಪ್ಲಾಟ್ಫಾರ್ಮ್ ಶುಲ್ಕ ಇತ್ಯಾದಿ ಈಗಾಗಲೇ ಇರುವ ಹಲವು ಶುಲ್ಕಗಳಿಗೆ ಹೆಚ್ಚುವರಿಯಾಗಿ ಇದು ಇರಲಿದೆ. ರಾಜ್ಯ ಸರ್ಕಾರ ಈಗಾಗಲೇ ಮಸೂದೆ ರೂಪಿಸಿದ್ದು, ವಿಧಾನಸಭೆಯಲ್ಲಿ ಇದಕ್ಕೆ ಅನುಮೋದನೆ ಪಡೆದ ಬಳಿಕ ಜಾರಿಗೆ ತರುವ ಸಾಧ್ಯತೆ ಇದೆ ಎನ್ನುವ ವರದಿಯಾಗಿದೆ.
ಡೆಲಿವರಿ ಬಾಯ್ಗಳ ಸಾಮಾಜಿಕ ಭದ್ರತೆಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಈ ಹೆಜ್ಜೆ ಇಡುತ್ತಿದೆ.