newsics.com
ಸೋನ್ ಪಾಪ್ಡಿಯ ಇತಿಹಾಸವು ಮಹಾರಾಷ್ಟ್ರದಲ್ಲಿ ಬೇರೂರಿದೆ ಎಂದು ಕೆಲವೊಂದಿಷ್ಟು ಜನ ಹೇಳಿದರೆ, ಇನ್ನೂ ಕೆಲವರು ಸೋನ್ ಪಾಪ್ಡಿ ರಾಜಸ್ಥಾನದ ರಾಜಮನೆತನದ ಅಡುಗೆಮನೆಯಿಂದ ಹುಟ್ಟಿಕೊಂಡಿತು ಎಂದು ವಾದ ಮಂಡಿಸುತ್ತಿದ್ದಾರೆ. ಆದ್ರೆ ಸೋನ್ ಪಾಪ್ಡಿಗೆ ಯಾವುದೇ ದೃಢೀಕೃತ ಇತಿಹಾಸವಿಲ್ಲ. ಆದಾಗ್ಯೂ, ಇದರ ತಯಾರಿಕೆಯು ಮಹಾರಾಷ್ಟ್ರ ಮತ್ತು ವಿಶೇಷವಾಗಿ ಪಶ್ಚಿಮ ಮಹಾರಾಷ್ಟ್ರದಿಂದ ಪ್ರಾರಂಭವಾಯಿತು ಎಂದು ನಂಬಲಾಗಿದೆ.
ಮಹಾರಾಷ್ಟ್ರದಿಂದ ಹುಟ್ಟಿದ ಸೋನ್ ಪಾಪ್ಡಿ ಗುಜರಾತ್, ರಾಜಸ್ಥಾನ ಮತ್ತು ಪಂಜಾಬ್, ಉತ್ತರ ಪ್ರದೇಶದ ಮೂಲಕ ಬಂಗಾಳವನ್ನು ತಲುಪಿ ಇಂದು ದೇಶಾದ್ಯಂತ ವ್ಯಾಪಿಸಿದೆ. ಅಂದಹಾಗೆ, ಸೋನ್ ಪಾಪ್ಡಿ ಮಹಾರಾಷ್ಟ್ರಕ್ಕಿಂತ ಉತ್ತರ ಭಾರತದಲ್ಲಿ ಹೆಚ್ಚು ಪ್ರಸಿದ್ಧವಾಗಿದೆ. ಇದನ್ನು ಸಾನ್ ಪಾಪ್ಡಿ, ಸೋಹನ್ ಪಾಪ್ಡಿ ಮತ್ತು ಶೋಮ್ ಪಾಪ್ಡಿ ಮುಂತಾದ ಹಲವು ಹೆಸರುಗಳಿಂದ ಕರೆಯಲಾಗುತ್ತದೆ. ಸೋನ್ ಪಾಪ್ಡಿಯಂತೆಯೇ, ಪಾಟಿಸಾ ಎಂಬ ಮತ್ತೊಂದು ಸಿಹಿತಿಂಡಿ ಇದೆ. ವಾಸ್ತವವಾಗಿ, ಇದು ದೇಶದ ಅತ್ಯಂತ ಪ್ರಸಿದ್ಧ ಸಿಹಿತಿಂಡಿಗಳಲ್ಲಿ ಒಂದಾಗಿದೆ. ಆದರೆ ಇದಕ್ಕೆ ಹೋಲಿಸಿದರೆ, ಪಾಟಿಸಾ ಸ್ವಲ್ಪ ಗಟ್ಟಿಯಾದ ಸಿಹಿಯಾಗಿದೆ.
ಸೋನ್ ಪಾಪ್ಡಿ ಹಬ್ಬದ ವಿಶೇಷ ಸಿಹಿಯಾಗುತ್ತದೆ ಏಕೆಂದರೆ ಅದು ದೀರ್ಘಕಾಲದವರೆಗೆ ಕೆಡುವುದಿಲ್ಲ. ಇದು ಎಲ್ಲೆಡೆ ಸುಲಭವಾಗಿ ಲಭ್ಯವಿರುವುದು ಮಾತ್ರವಲ್ಲದೆ, ಇಂದು ಅನೇಕ ಬ್ರಾಂಡೆಡ್ ಕಂಪನಿಗಳು ಸೋನ್ ಪಾಪ್ಡಿ ಗಿಫ್ಟ್ ಪ್ಯಾಕ್ ಅನ್ನು ಸಹ ನೀಡುತ್ತವೆ.