newsics.com
ಹೈದ್ರಾಬಾದ್ : ಬರೋಬ್ಬರಿ 1600 ಕಿಲೋ ಮೀಟರ್ ಸೈಕಲ್ ತುಳಿದುಕೊಂಡು ಬಂದು ತಮ್ಮ ನೆಚ್ಚಿನ ನಟನನ್ನು ಭೇಟಿ ಮಾಡಿ ಖುಷಿಪಟ್ಟಿದ್ದಾರೆ. ತಮ್ಮನ್ನು ನೋಡಲು ಬಂದ ಅಭಿಮಾನಿಯನ್ನು ಅಲ್ಲು ಅರ್ಜುನ್ ಅವರು ಪ್ರೀತಿಯಿಂದ ಮಾತನಾಡಿಸಿದ್ದಾರೆ.
ಅಭಿಮಾನಿಯ ಹೆಸರು ಮೋಹಿತ್ ಯಾದವ್. ಮೂಲತಃ ಉತ್ತರ ಪ್ರದೇಶದ ಅಲಿಗಡ್ನಿಂದ ಸೈಕಲ್ ಸವಾರಿ ಮಾಡಿಕೊಂಡು ಹೈದರಾಬಾದ್ಗೆ ಬಂದಿದ್ದಾರೆ. ಅಲ್ಲು ಅರ್ಜುನ್ ಅವರನ್ನು ಭೇಟಿಯಾದ ಖುಷಿಯಲ್ಲಿ ಅವರು ವಿಡಿಯೋ ಹಂಚಿಕೊಂಡಿದ್ದಾರೆ. ಅಭಿಮಾನಿಯನ್ನು ಆಪ್ತವಾಗಿ ಮಾತನಾಡಿಸಿದ ಅಲ್ಲು ಅರ್ಜುನ್ ಅವರ ಈ ವಿಡಿಯೋ ಈಗ ವೈರಲ್ ಆಗುತ್ತಿದೆ.
https://twitter.com/vamsikaka/status/1846467929321148596
‘ಕಡೆಗೂ ನಾನು ನನ್ನ ಹೀರೋ ಭೇಟಿ ಮಾಡಿದೆ. ಅಲ್ಲು ಅರ್ಜುನ್ ಅವರು ನಿಜಕ್ಕೂ ವಿನಯವಂತ ಮತ್ತು ಉತ್ತಮವಾದ ವ್ಯಕ್ತಿ. ಈಗ ನನ್ನ ಭಾವನೆಯನ್ನು ಹೇಳಿಕೊಳ್ಳಲು ಪದಗಳೇ ಬರುತ್ತಿಲ್ಲ. ಅವರನ್ನು ಸಿನಿಮಾದಲ್ಲಿ ನೋಡುವುದು ಒಂದು ರೀತಿ. ಆದರೆ ನೇರವಾಗಿ ಭೇಟಿಯಾಗಿದ್ದು ಒಂದು ಭಾವುಕ ಅನುಭವ. ನನ್ನ ತಂದೆ-ತಾಯಿ, ಫಾಲೋವರ್ಸ್ ಆಶೀರ್ವಾದದಿಂದ ನನ್ನ ಕನಸು ನಿಜವಾಗಿದೆ. ತುಂಬ ಖುಷಿ ಆಗುತ್ತಿದೆ’ ಎಂದ ಮೋಹಿತ್ ಯಾದವ್ ಬರೆದುಕೊಂಡಿದ್ದಾರೆ.