newsics.com
ಬೆಂಗಳೂರು : ಬೆನ್ನು ನೋವು ದರ್ಶನ್ ಅವರನ್ನ ಕಾಡುತ್ತಿದ್ದು, ಬೆಂಗಳೂರಿನ ಆಸ್ಪತ್ರೆಗೆ ಶಿಫ್ಟ್ ಮಾಡುವಂತೆ ಮನವಿಯನ್ನು ಮಾಡಿದ್ದರು.
ಬೆನ್ನು ನೋವಿನಿಂದ ಬಳಲುತ್ತಿರುವ ದರ್ಶನ್ ಅವರನ್ನು ಬಳ್ಳಾರಿ ಜಿಲ್ಲಾ ಆಸ್ಪತ್ರೆಯ ವೈದ್ಯರು ಪರೀಕ್ಷೆ ಮಾಡಿದ್ದರು. ನಿನ್ನೆ ಜೈಲಾಧಿಕಾರಿಗಳಿಗೆ ಮೆಡಿಕಲ್ ವರದಿ ಸಲ್ಲಿಕೆಯಾಗಿದೆ. ಈ ಮೆಡಿಕಲ್ ರಿಪೋರ್ಟ್‌ನ ಮೇಲಾಧಿಕಾರಿಗಳೊಂದಿಗೆ ಜೈಲಾಧಿಕಾರಿಗಳು ಚರ್ಚೆ ಮಾಡಿದ್ದರು.
ದರ್ಶನ್ ತೀವ್ರ ಬೆನ್ನು ನೋವಿನಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲಾ ಆಸ್ಪತ್ರೆಯಿಂದ ಬೆಡ್ & ದಿಂಬು ರವಾನೆ ಮಾಡಲಾಗಿದೆ. ಬಳ್ಳಾರಿ ಜಿಲ್ಲಾ ಆಸ್ಪತ್ರೆಯಿಂದ ಆ್ಯಂಬುಲೆನ್ಸ್ ಮೂಲಕ ಬೆಡ್ & ದಿಂಬ ಅನ್ನು ತರಲಾಯಿತು. ಪರಿಶೀಲನೆ ನಡೆಸಿದ ಪೊಲೀಸರು ದರ್ಶನ್ ಇರುವ ಬ್ಯಾರೆಕ್‌ಗೆ ಶಿಫ್ಟ್ ಮಾಡಿದ್ದಾರೆ.
ಜೈಲಿನಲ್ಲಿರುವ ದರ್ಶನ್‌ಗೆ ದಿನ ಕಳೆದಂತೆ ಬೆನ್ನು ನೋವು ಉಲ್ಬಣವಾಗುತ್ತಿದೆ. ಈ ಬಗ್ಗೆ ತಪಾಸಣೆ ನಡೆಸಿದ ವೈದ್ಯರು, ಜೈಲಲ್ಲೇ ಬೆನ್ನು ನೋವಿಗೆ ಚಿಕಿತ್ಸೆ ನೀಡುವ ಸಲಹೆ ನೀಡಿದ್ದರು. ಆದರೆ ಬೆಂಗಳೂರು ಆಸ್ಪತ್ರೆಗೆ ಶಿಫ್ಟ್ ಮಾಡಿ ಎಂದ ದರ್ಶನ್ ಅವರು ಚಿಕಿತ್ಸೆ ಪಡೆಯಲು ನಿರಾಕರಿಸಿದ್ದರು.