newsics.com
ಮುಂಬೈ : ಬಾಲಿವುಡ್ ನಟಿ ರಕುಲ್ ಪ್ರೀತ್ ಸಿಂಗ್ ಜಿಮ್ ನಲ್ಲಿ ವರ್ಕೌಟ್ ಮಾಡ್ತಿದ್ದ ವೇಳೆ ಗಂಭೀರವಾಗಿ ಗಾಯಗೊಂಡಿದ್ದಾರೆ.
ಜಿಮ್ನಲ್ಲಿ ತಾಲೀಮು ನಡೆಸುತ್ತಿದ್ದ ವೇಳೆ ರಕುಲ್ ಪ್ರೀತ್ ಸಿಂಗ್, ಬೆಲ್ಡ್ ಇಲ್ಲದೇ 80 ಕೆಜಿ ಡೆಡ್ ಲಿಫ್ಟ್ ಮಾಡಲು ಹೋಗಿದ್ರು. ಈ ವೇಳೆ ಬೆನ್ನಿಗೆ ಗಂಭೀರವಾಗಿ ಗಾಯವಾಗಿದೆ. ನಟಿ ರಕುಲ್ ಪ್ರೀತ್ ಸಿಂಗ್ ಗೆ ವೈದ್ಯರಯ ಬೆಡ್ ರೆಸ್ಟ್ ಹೇಳಿದ್ದಾರಂತೆ.
ಕಳೆದ ಕೆಲವು ದಿನಗಳಿಂದ ರಕುಲ್ ಬೆಡ್ ರೆಸ್ಟ್ ನಲ್ಲಿದ್ದಾರೆ. ಮೊದಲು ಅವರ ಸ್ಥಿತಿ ಸ್ವಲ್ಪ ಗಂಭೀರವಾಗಿತ್ತು. ಅಕ್ಟೋಬರ್ 5ರ ಬೆಳಿಗ್ಗೆ ರಕುಲ್ ತನ್ನ ವರ್ಕೌಟ್ ಮಾಡುವಾಗ ಈ ಅವಘಡ ಸಂಭವಿಸಿದೆ. ಬೆಲ್ಟ್ ಧರಿಸದೆ 80 ಕೆಜಿ ಡೆಡ್ ಲಿಫ್ಟ್ ಮಾಡಿದ್ರು. ಇದ್ರಿಂದಾಗಿ ಅವರು ಬೆನ್ನಿಗೆ ಗಾಯವಾಗಿದೆ. ನೋವು ಮತ್ತು ಸೆಳೆತದ ನಂತರ ನಟಿಗೆ ವೈದ್ಯರು ವಿಶ್ರಾಂತಿ ತೆಗೆದುಕೊಳ್ಳಲು ಸಲಹೆ ನೀಡಿದ್ದಾರೆ.
ರಕುಲ್ ಪ್ರೀತ್ ಸಿಂಗ್ ನೋವಿನಿಂದ ಬಳಲುತ್ತಿದ್ದು ಫಿಸಿಯೋದಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯದಿಂದಾಗಿ ರಾಕುಲ್ ಅವರ L4, L5 ಮತ್ತು S1 ನರಗಳು ಜಾಮ್ ಆಗಿದ್ದವು. ಬಿಪಿ ಲೋ ಆಗ್ತಿದ್ದಂತೆ ನಟಿ ಬೆವರಲು ಪ್ರಾರಂಭಿಸಿದ್ರಂತೆ. ನಿಧನವಾಗಿ ನಟಿ ಚೇತರಿಸಿಕೊಳ್ತಿದ್ದಾರೆ.