newsics.com
ಬೀದರ್: ಬಸವಕಲ್ಯಾಣ ಬಿಜೆಪಿ ಶಾಸಕ ಶರಣು ಸಲಗರ್ ಅವರ ಆಪ್ತ ಸಂಜುಕುಮಾರ ಸುಗರೆ ನಿಗೂಢವಾಗಿ ನಾಪತ್ತೆಯಾಗಿದ್ದಾರೆ.
ಭಾನುವಾರ ಬೆಳಗಿನ ಜಾವ 4ರ ಸುಮಾರಿಗೆ ಬಸವಕಲ್ಯಾಣದ ಜೈಶಂಕರ ಕಾಲೋನಿಯ ತಮ್ಮ ನಿವಾಸದಿಂದ ತೆರಳಿದ ಅವರ ಸುಳಿವು ಇನ್ನೂ ಸಿಕ್ಕಿಲ್ಲ. ಇದು ಕುಟುಂಬದವರಲ್ಲಿ ಆತಂಕ ಮೂಡಿಸಿದಯಲ್ಲದೆ ಕ್ಷೇತ್ರದ ರಾಜಕೀಯ ವಲಯದಲ್ಲೂ ಭಾರೀ ಚರ್ಚೆಗೆ ಗ್ರಾಸವಾಗಿದೆ.
ತಮ್ಮ ಮನೆಯಿಂದ ಭಾನುವಾರ ಬೆಳಗಿನ ಜಾವ ಸುಗರೆ ಅವರು ಕಾಲ್ನಡಿಗೆಯಲ್ಲೇ ಹೊರಹೋಗಿದ್ದಾರೆ. ತಮ್ಮ ಎರಡು ಫೋನ್ಗಳನ್ನು ಮನೆಯಲ್ಲೇ ಇಟ್ಟಿದ್ದಾರೆ. ಇವರು ಮನೆಯಿಂದ ಒಬ್ಬರೇ ಹೋಗುವುದು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಆದರೆ ಎಲ್ಲಿಗೆ ಹೋದರು? ಮನೆಯವರಿಗೆ ಹೇಳದೆ ಕೇಳದೆ ಏಕೆ ಹೋದರು? ಸದ್ಯ ಎಲ್ಲಿದ್ದಾರೆ? ಹೇಗಿದ್ದಾರೆ ಎಂಬುದು ಗೊತ್ತಾಗಿಲ್ಲ.
ಈ ಸಂಬಂಧ ಸುಗರೆ ಪುತ್ರ ಬಸವಕಲ್ಯಾಣ ನಗರ ಠಾಣೆಗೆ ದೂರು ನೀಡಿದ್ದು, ತಂದೆಯ ಪತ್ತೆಗೆ ಮೊರೆಯಿಟ್ಟಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸುಗರೆ ಪತ್ತೆಗಾಗಿ ವಿಶೇಷ ತಂಡ ರಚಿಸಿ ಶೋಧ ಕಾರ್ಯ ಆರಂಭಿಸಿದ್ದಾರೆ. ವಿವಿಧೆಡೆಯ ಸಿಸಿಟಿವಿ ದೃಶ್ಯಾವಳಿ ಸಹ ಪರಿಶೀಲನೆ ಮಾಡುತ್ತಿದ್ದಾರೆ.
ಪ್ರಾಂಶುಪಾಲರಿಂದ ಕಿರುಕುಳ ಆರೋಪ: ಕಾಲೇಜಿನಲ್ಲೇ ಮಹಿಳಾ ಪ್ರೊಫೆಸರ್ ಆತ್ಮಹತ್ಯೆ ಯತ್ನ