newsics.com
ಬೆಂಗಳೂರು : ರೇಣುಕಾಸ್ವಾಮಿ ಕ್ರೂರ ಸಾವಿನ ಪ್ರಕರಣದ ವಿಚಾರಣೆ ಕೋರ್ಟ್‌ನಲ್ಲಿ ಮುಂದುವರಿದಿದೆ.
ರೇಣುಕಾಸ್ವಾಮಿ ಪತ್ನಿ ಸಹನಾ ಅವರಿಗೆ ಮುಂದಿನ ತಿಂಗಳು ಡೆಲಿವರಿ ಆಗುತ್ತೆ. ಆದ್ದರಿಂದ ಸರ್ಕಾರಕ್ಕೆ ಕೇಳಿಕೊಳ್ಳೋದು ಏನು ಅಂದ್ರೆ ಅವರಿಗೆ ಏನಾದ್ರೂ ಒಂದು ದಾರಿ ಮಾಡಿ ಕೊಡಬೇಕು. ರೇಣುಕಾಸ್ವಾಮಿ ಪತ್ನಿಗೆ ಸರ್ಕಾರ ಅನುಕಂಪದ ಹುದ್ದೆ ನೀಡಬೇಕು ಎಂದು ಮೃತ ರೇಣುಕಾಸ್ವಾಮಿ ಚಿಕ್ಕಪ್ಪ ಕೇಳಿಕೊಂಡಿದ್ದಾರೆ.
17 ಆರೋಪಿಗಳ ಪೈಕಿ ಇಂದಿಗೆ ಐವರು ಜಾಮೀನಿನ ಮೇಲೆ ಬಿಡುಗಡೆ ಆಗುತ್ತಿದ್ದಾರೆ. ಆದರೆ A1, A2 ಪವಿತ್ರಾ ಗೌಡ, ದರ್ಶನ್ ಅವರ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ. ದರ್ಶನ್ ಹಾಗೂ ಪವಿತ್ರಾ ಅವರಿಗೆ ಇನ್ನಷ್ಟು ದಿನ ಜೈಲುವಾಸ ಖಾಯಂ ಆಗಿದೆ.